Friday 27th, January 2023
canara news

ಮೇ.08: ಭಂಡಾರಿ ಸೇವಾ ಸಮಿತಿ ಮುಂಬಯಿ ಸಾರಥ್ಯದೊಂದಿಗೆ ಬಾರ್ಕೂರುನಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವ

Published On : 19 Apr 2017   |  Reported By : Rons Bantwal


ಮುಂಬಯಿ, ಎ.19: ಕರ್ನಾಟಕ ರಾಜ್ಯದ ಮೂಲ ಜನಾಂಗದಲ್ಲೊಂದಾದ ಪ್ರತಿಷ್ಠಿತ ಭಂಡಾರಿ ಸಮುದಾಯವು ತನ್ನ ಕಲದೇವರು ಆಗಿಸಿ ಆರಾಧಿಸಿಕೊಂಡು ಬಂದಿರುವ ಸುಮಾರು 9 ಶತಮಾನಗಳ ಇತಿಹಾಸವುಳ್ಳ ಉಡುಪಿ ಜಿಲ್ಲೆಯ ಬ್ರಹ್ಮಾವರ ಸನಿಹದ ಬಾರ್ಕೂರು ಹನೆಹಳ್ಳಿ ಗ್ರಾಮದಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ವಾರ್ಷಿಕ ಪ್ರತಿಷ್ಠಾಪನಾ ವರ್ಧಂತ್ಯುತ್ಸ-2017ವನ್ನು ಮುಂಬಯಿಯಲ್ಲಿನ ಭಂಡಾರಿ ಬಂಧುಗಳ ಸಮಾಕ್ಷಮ ಹಾಗೂ ಉಡುಪಿ ಬಾರ್ಕೂರು ಅಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಉತ್ಸವ ಮುಂಬಯಿ ಸಮಿತಿ ಸಾರಥ್ಯದಲ್ಲಿ 2017ರ ಮೇ.08ನೇ ಸೋಮವಾರ ದಿನಪೂರ್ತಿ ಕಾರ್ಯಕ್ರಮಗಳೊಂದಿಗೆ ಆಚರಿಸಲಿದೆ.

        

 D H Shankermoorti                  Pramod Madhwaraj                         Madhu Bangarappa

ಕರ್ನಾಟಕ ರಾಜ್ಯದ ಸೇರಿದಂತೆ ದೇಶ ವಿದೇಶಗಳಲ್ಲಿನ ಸಾವಿರಾರು ಸಮಾಜ ಬಂಧುಗಳ ಸೇರುವಿಕೆಯಲ್ಲಿ ಸ್ವಸ್ತಿ ಶ್ರೀ ಹೇಮಲಂಬಿ ನಾಮ ಸಂವತ್ಸರದ ಮೇಷ ಮಾಸ ದಿನ 25 ಸಲುವ ವೈಶಾಖ ಶುದ್ಧನೇ ಶುಭದಿನದಂದು ಕಚ್ಚೂರು ಶ್ರೀ ನಾಗೇಶ್ವರ ದೇವರ ದಿವ್ಯ ಸನ್ನಿಧಿಯಲ್ಲಿ ವಾರ್ಷಿಕ ಕಾಲಮಾಸದಂತೆ ಬ್ರಹ್ಮಶ್ರೀ ವೇದಮೂರ್ತಿ ಶ್ರೀ ಶ್ರೀಕಾಂತ ಸಾಮಗ ಮತ್ತು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಬಿ.ಆರ್ ವಿಶ್ವನಾಥ ಶಾಸ್ತ್ರಿ ಅವರ ನೇತೃತ್ವದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವ ನಡೆಯಲಿದ್ದು ಅಂದು ಪ್ರಾತಃ ಕಾಲ 7.00 ಗಂಟೆಯಿಂದ ಆರಂಭಗೊಂಡು ರಾತ್ರಿ 8.00 ಗಂಟೆ ತನಕ ಧಾರ್ಮಿಕ ವಿಧಿಗಳು ಜರುಗಲಿವೆ.

         

K D Shetty                           Suresh S. Bhandary                          Sadashiva Sakaleshpur

ಪೂರ್ವಾಹ್ನ 10.30 ಗಂಟೆಯಿಂದ ಭಂಡಾರಿ ಮಹಾ ಮಂಡಲದ ಸಂಸ್ಥಾಪಕಧ್ಯಕ್ಷ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ ಹಾಗೂ ಕಚ್ಚೂರು ಶ್ರೀ ನಾಗೇಶ್ವರ ಸೇವಾ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಅವರ ಘನಾಧ್ಯಕ್ಷತೆಯಲ್ಲಿ ಭವ್ಯ ಧಾರ್ಮಿಕ ಸಮಾರಂಭ ಜರುಗಲಿದ್ದು ಕರ್ನಾಟಕ ಸರ್ಕಾರದ ವಿಧಾನ ಪರಿಷತ್‍ನ ಸಭಾಪತಿ ಡಿ.ಹೆಚ್ ಶಂಕರ ಮೂರ್ತಿ ಸಮಾರಂಭ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಮುಖ್ಯ ಅತಿಥಿüಯಾಗಿ ಆಗಮಿಸಲಿದ್ದು, ಅತಿಥಿüಗಳಾಗಿ ಮುಜರಾಯಿ ಇಲಾಖೆ ಸಚಿವ ರುದ್ರಪ್ಪ ಎಂ.ಲಮಾಣಿ, ಯುವಜನ, ಕ್ರೀಡೆ, ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಗೌರಹ್ವಾನಿತ ಅತಿಥಿüಗಳಾಗಿ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕ, ಜೆಡಿಎಸ್ ಪಕ್ಷದ ಧುರೀಣ ಮಧುಬಂಗಾರಪ್ಪ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ ಕುತ್ಪಾಡಿ, ಅದಾನಿ ಯುಪಿಸಿಎಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಭವಾನಿ ಫೌಂಡೇಶನ್ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷÀ ದಡ್ದಂಗಡಿ ಚೆಲ್ಲಡ್ಕ ಕುಸುಮೋದÀರ ಡಿ.ಶೆಟ್ಟಿ (ಕೆ.ಡಿಶೆಟ್ಟಿ), ಕಾರ್ಕಳದ ಮಾಜಿ ಶಾಸಕ ಹೆಚ್.ಗೋಪಾಲ ಭಂಡಾರಿ, ಬೆಂಗಳೂರುನ ಹಿರಿಯ ಉದ್ಯಮಿ ವಿ.ಕೆ ಮೋಹನ್, ಭಂಡಾರಿ ಮಹಾ ಮಂಡಲದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಪ್ರಧಾನ ಕಾರ್ಯದರ್ಶಿ ಯು.ಸತೀಶ್ ಭಂಡಾರಿ, ವಾರ್ಷಿಕೋತ್ಸವ ಸಮಿತಿ ಮುಂಬಯಿ ಅಧ್ಯಕ್ಷ ಡಾ| ಅತ್ತೂರು ಶಿವರಾಮ ಕೆ.ಭಂಡಾರಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಆಡಳಿತ ಮತ್ತು ಸೇವಾ ಟ್ರಸ್ಟ್‍ನ ಕಾರ್ಯದರ್ಶಿ ಸೋಮಶೇಖರ ಎಂ.ಭಂಡಾರಿ ಮತ್ತು ಕೋಶಾಧಿಕಾರಿ ಬನ್ನಂಜೆ ಸಂಜೀವ ಭಂಡಾರಿ ತಿಳಿಸಿದ್ದಾರೆ.

    

            Dr. Shivarama Bhanadary             R M Bhandary                     

ಅಂದು ಪ್ರಾತಃ ಕಾಲ ಶ್ರೀ ನಾಗೇಶ್ವರ ದೇವರು ಮತ್ತು ಪರಿವಾರ ದೇವತೆಗಳಿಗೆ ಸೀಯಾಳಾಭಿಷೇಕ, ನಂತರ ಶ್ರೀ ರುದ್ರದೇವರಿಗೆ ಫಲನ್ಯಾಸ ತೋರಣ, ಪುಣ್ಯಾಹ ಶುದ್ದಿ, 49 ಕಲಶಾಧಿವಾಸ ಸಹಿತ ಆದಿವಾಸ ಹೋಮ, ಶತರುದ್ರಾಭಿಷೇಕ, ಪ್ರಸನ್ನ ಪೂಜಾರಾಧನೆ, 8.00 ಗಂಟೆಯಿಂದ ಶ್ರೀ ಮಹಾಗಣಪತಿ ದೇವರಿಗೆ ನವ ಕಲಶ, 12 ನಾರಿಕೇಶ ಗಣಯಾಗ, ಪೂರ್ವಕ ಪ್ರಸನ್ನ ಪೂಜೆ, ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ನವ ಕಲಶ ದುರ್ಗಾ ಹೋಮ, 10.00 ಗಂಟೆಯಿಂದ ಶ್ರೀ ನಾಗದೇವರ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ, ಪೂರ್ವಕ ಪ್ರಾಯಶ್ಚಿತ, ಆಶ್ಲೇಷಾಬಲಿ ಸೇವೆ, ಪ್ರಸನ್ನ ಪೂಜೆ, ಮಧ್ಯಾಹ್ನ 12.00 ಗಂಟೆಯಿಂದ ಶ್ರೀ ನಾಗೇಶ್ವರ ದೇವರಿಗೆ ವಿಶೇಷ ಪೂಜೆ, ಮಹಾ ಮಂಗಳಾರತಿ,ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, ರಾತ್ರಿ 7.00 ಗಂಟೆಯಿಂದ ರಂಗಪೂಜೆ, ದೀಪಾರಾಧನೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ ಇತ್ಯಾದಿ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ.

ಸಾಂಸ್ಕøತಿಕ ಕಾರ್ಯಕ್ರಮವಾಗಿ ಬೆಳಿಗ್ಗೆ ಗಂಟೆ 9.30 ಗಂಟೆಯಿಂದ ಹಾಗೂ ಮಧ್ಯಾಹ್ನ 1.00 ಗಂಟೆಯಿಂದ ಮುಂಬಯಿ ಭಂಡಾರಿ ಬಂಧುಗಳು ವೈವಿಧ್ಯಮಯ ಸಾಂಸ್ಕøತಿಕ ಹಾಗೂ ಮನೋರಂಜನಾ ಕಾರ್ಯಕ್ರಮ ಮತ್ತು `ಮಲ್ತಿನಕ್ಲು ತಿನ್ಪೆರ್' ತುಳು ನಾಟಕ ಪ್ರಸ್ತುತ ಪಡಿಸಲಿದ್ದಾರೆ.

ಈ ಪರ್ವ ಕಾಲದಲ್ಲಿ ಭಕ್ತಾದಿಗಳೆಲ್ಲರೂ ಸನ್ನಿಧಿಗೆ ಚಿತ್ತೈಸಿ ಶ್ರೀ ದೇವರ ಪೂಜಾಧಿ ಸೇವೆಯಲ್ಲಿ ಪಾಲ್ಗೊಂಡು ಶ್ರೀ ನಾಗೇಶ್ವರ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಜಗದ್ವಾ ್ಯಪಿ ನೆಲೆಯಾದ ಸಮಗ್ರ ಭಂಡಾರಿ ಬಂಧುಗಳೆಲ್ಲರೂ ಈ ಪೂಣ್ಯಾಧಿ ಸಮಾಜ ಬಾಂಧವರ ಏಕತಾ ಕಾರ್ಯಕ್ರಮದಲ್ಲಿ ಪರಿವಾರ ಸಹಿತ ಸಹಭಾಗಿಗಳಾಗಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ವಾರ್ಷಿಕೋತ್ಸವ ಸಮಿತಿ ಮುಂಬಯಿ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಆರ್.ಎಂ ಭಂಡಾರಿ ಮತ್ತು ಕೋಶಾಧಿಕಾರಿ ರಮೇಶ ವಿ.ಭಂಡಾರಿ ಸೇರಿದಂತೆ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮತ್ತು ಸೇವಾ ಟ್ರಸ್ಟ್‍ನ ಸರ್ವ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಈ ಮೂಲಕ ವಿನಂತಿಸಿದ್ದಾರೆ.

 
More News

ಸಯಾನ್‍ನ ಶ್ರೀಕೃಷ್ಣ ಮಂದಿರದಲ್ಲಿ ಮಂತ್ರಾಲಯಶ್ರೀಗಳಿಂದ ಅನ್ನದಾನ ಸೇವೆಗೆ ಚಾಲನೆ
ಸಯಾನ್‍ನ ಶ್ರೀಕೃಷ್ಣ ಮಂದಿರದಲ್ಲಿ ಮಂತ್ರಾಲಯಶ್ರೀಗಳಿಂದ ಅನ್ನದಾನ ಸೇವೆಗೆ ಚಾಲನೆ
ಸಮಾಜಮುಖಿ ಕಾರ್ಯಗಳಲ್ಲಿ ಕಲ್ಲೂರು ಎಜ್ಯುಕೇಷನ್ ಟ್ರಸ್ಟ್ : ಇಬ್ರಾಹಿಂ ಕಲ್ಲೂರು
ಸಮಾಜಮುಖಿ ಕಾರ್ಯಗಳಲ್ಲಿ ಕಲ್ಲೂರು ಎಜ್ಯುಕೇಷನ್ ಟ್ರಸ್ಟ್ : ಇಬ್ರಾಹಿಂ ಕಲ್ಲೂರು
ಹೋಪ್ ಫೌಂಡೇಶನ್ ಆಚರಿಸಿದ ಸ್ವಾಮಿ ವಿವೇಕಾನಂದರ 161ನೇ ಜನ್ಮದಿನ
ಹೋಪ್ ಫೌಂಡೇಶನ್ ಆಚರಿಸಿದ ಸ್ವಾಮಿ ವಿವೇಕಾನಂದರ 161ನೇ ಜನ್ಮದಿನ

Comment Here