Thursday 8th, May 2025
canara news

ಮಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ: ಎಚ್ಚರ

Published On : 20 Apr 2017   |  Reported By : Canaranews Network


ಮಂಗಳೂರು: ಮಂಗಳೂರಿನೆಲ್ಲೆಡೆ ನೀರಿಗಾಗಿ ಹಾಹಾಕಾರ ಎದ್ದಿದೆ. ಮಂಗಳೂರಿಗರಿಗೆ ಎರಡು- ಮೂರು ದಿನಕ್ಕೊಮ್ಮೆ ನೀರಿ ಪೂರೈಕೆಯಾಗುತ್ತಿದೆ. ಬಾವಿ, ಕೆರೆಗಳಲ್ಲಿ ನೀರು ಬತ್ತಿ ಹೋಗಿದೆ. ಇದ್ದ ಕೆರೆಗಳ ಹೂಳೆತ್ತಿ ಅದರ ನೀರನ್ನು ಉಪಯೋಗಿಸಲಾಗುತ್ತಿದೆ. ಆದರೆ, ಈ ಸಂದರ್ಭದಲ್ಲಿ ವಿಷಾನಿಲ ಸೇವಿಸಿ ಅಮಾಯಕ ಜೀವಗಳು ಬಲಿಯಾದ ದುರ್ಘಟನೆಗಳು ಹಲವಾರು ಇವೆ. ಹೀಗಾಗಿ, ಹೂಳು ತೆಗೆಯಲು ಕೆರೆ-ಬಾವಿಗಳಿಗೆ ಇಳಿಯುವ ಮುನ್ನ ಎಚ್ಚರವಿರಲಿ.ಬೇಸಗೆಯಲ್ಲಿ ನೀರಿಲ್ಲದೇ ಬತ್ತಿದ ಬಾವಿಗಳಲ್ಲಿ ಎಷ್ಟು ಅಡಿ ಆಳಕ್ಕೆ ಹೂಳು ತುಂಬಿರುತ್ತದೆ ಎಂಬುವುದನ್ನು ಊಹಿಸುವುದು ಅಸಾಧ್ಯ. ಕೆಸರಿನ ಮೇಲೆ ಕಸ-ಕಡ್ಡಿ ಮತ್ತು ತರಗೆಲೆ ಬಿದ್ದು ಮುಚ್ಚಿಕೊಂಡಿರುತ್ತದೆ.

ಮಳೆಗಾಲ ಆರಂಭದ ಮೊದಲು ಬಾವಿಗಳ ಕೆಸರು ತೆಗೆದು ಸ್ವಚ್ಛಗೊಳಿಸದಿದ್ದರೆ, ನೀರಿನ ಒರತೆ ಹೆಚ್ಚದು. ಆದರೆ, ಕೆಸರಿನ ಜತೆಗೆ ಕಸ-ಕಡ್ಡಿ ಕೊಳೆತು ರಾಸಾಯನಿಕ ಕ್ರಿಯೆಗೆ ಒಳಗಾಗಿ ವಿಷಾನಿಲ ಸೃಷ್ಟಿಯಾಗಿರುತ್ತದೆ. ಈ ಬಗ್ಗೆ ಜನರಿಗೆ ಸೂಕ್ತ ಅರಿವಿಲ್ಲದ್ದರಿಂದ ಪ್ರತಿವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೀವಹಾನಿ ಸಂಭವಿಸಿದ ನಿದರ್ಶನಗಳಿವೆ. ಹೀಗಾಗಿ ಪ್ರತಿಯೊಬ್ಬ ನಾಗರೀಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here