Thursday 18th, January 2018
canara news

ಗುರು ಸೇವಾ ಸಮಿತಿ ಬಹರೈನ್ ಬಿಲ್ಲವಾಸ್‍ನ ಮಹಾಸಭೆ-ನೂತನ ಪದಾಧಿಕಾರಿಗಳು

Published On : 21 Apr 2017   |  Reported By : Rons Bantwal


ಅಜಿತ್ ಬಂಗೇರ ಅಧ್ಯಕ್ಷ-ಹರಿನಾಥ್ ಸುವರ್ಣ ಪ್ರಧಾನ ಕಾರ್ಯದರ್ಶಿ

ಮುಂಬಯಿ, ಎ.21: ಅನಿವಾಸಿ ಬಿಲ್ಲವರ ಸಂಘಟನೆಯಾದ ಗುರು ಸೇವಾ ಸಮಿತಿ ಬಹರೈನ್ ಬಿಲ್ಲವಾಸ್‍ನ ಮಹಾಸಭೆ ಕರ್ನಾಟಕ ಸೋಶಿಯಲ್ ಕ್ಲಬ್‍ನಲ್ಲಿ ಇತ್ತೀಚೆಗೆ (ಎ.07) ಜರಗಿದ್ದು, 2017-2018ರ ಸಾಲಿನ ನೂತನ ಪದಾಧಿಕಾರಿಗಳ ಮತ್ತು ಆಡಳಿತ ಸಮಿತಿ ಆಯ್ಕೆ ನಡೆಸಲಾಗಿದ್ದು ಅಧ್ಯಕ್ಷರನ್ನಾಗಿ ಅಜಿತ್ ಬಂಗೇರ ಅವರನ್ನು ಸಭೆಯು ಸರ್ವಾನುಮತದಿಂದ ಆರಿಸಿತು.

ಗುರು ಸೇವಾ ಸಮಿತಿ ಬಹರೈನ್ ಬಿಲ್ಲವಾಸ್ ಸಂಘಟನೆಯು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತಿದ್ದು, ಬಹರೈನ್ ದ್ವೀಪ ರಾಷ್ಟ್ರದಲ್ಲಿ ಅನಿವಾಸಿ ಕನ್ನಡಿಗರಿಗಾಗಿ ಪ್ರತಿ ವರ್ಷವೂ ಒಳ್ಳೆಯ ಗುಣಮಟ್ಟದ ಮನೋರಂಜನೆ ಕಾರ್ಯಕ್ರಮಳನ್ನು ಕೊಡುತ್ತಾ ಆಟೋಟ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿರುತ್ತದೆ

ಈ ಸಂಘಟನೆಯು ಮೇ 05, 2017ರಲ್ಲಿ ಹದಿನೈದನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಈ ಸುಸಂದರ್ಭದಲ್ಲಿ ಅದೇ ದಿನ ಮನಾಮದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಈ ವರ್ಷದ ಮೊದಲನೇ ಕಾರ್ಯಕ್ರಮ ಸಂಜೆ 3.30 ರಿಂದ ಶ್ರೀ ಸತ್ಯನಾರಾಯಣ ಪೂಜೆ ಹಾಗು ಭಜನೆಯನ್ನು ಆಯೋಜಿಸಿದ್ದು, ಈ ಸಂದರ್ಭರ್ದಲ್ಲಿ ನೂತನ ಆಡಳಿತ ಮಂಡಳಿಯಯ ಪದಗ್ರಹಣ ನಡೆಯಲಿದೆ. ಪದಾಧಿಕಾರಿಗಳ ವಿವರ ಇಂತಿದೆ.

ಛಾಯಾ ಚಿತ್ರದಲ್ಲಿ ಕುಳಿತವರು: (ಎಡದಿಂದ ) ಅಶೋಕ್ ಕಟೀಲ್ (ಖಜಾಂಚಿ ), ಹೇಮಂತ್ ಸಾಲಿಯಾನ್ (ಉಪಾಧ್ಯಕ್ಷ), ಅಜಿತ್ ಬಂಗೇರ (ಅಧ್ಯಕ್ಷ ), ಹರಿನಾಥ್ ಸುವರ್ಣ ( ಪ್ರಧಾನ ಕಾರ್ಯದರ್ಶಿ), ನಿತ್ಯಾನಂದ ಸುವರ್ಣ (ಉಪ ಕಾರ್ಯದರ್ಶಿ), ನಿಂತವರು: (ಎಡದಿಂದ) ಪುರಷೋತ್ತಮ್ ಪೂಜಾರಿ (ಸದಸ್ಯ), ಹರೀಶ್ ಕುಮಾರ್ (ಉಪ ಖಜಾಂಚಿ) ಹಿತಿನ್ ಪೂಜಾರಿ (ಉಪ ಮನೋರಂಜನೆ ಕಾರ್ಯದರ್ಶಿ), ರಾಜ್ ಪೂಜಾರಿ ಬೆದ್ರ (ಸದಸ್ಯ), ಪ್ರದೀಪ್ ಸುದೇಕರ್ (ಮನೋರಂಜನೆ ಕಾರ್ಯದರ್ಶಿ) ಮತ್ತು ಚಿರಾಗ್ ಸುವರ್ಣ( ಕ್ರೀಡಾ ಕಾರ್ಯದರ್ಶಿ)

 

 
More News

ಜಾಗತಿಕ ಬಂಟರ ಸಂಘದ ಒಕ್ಕೂಟಕ್ಕೆ ನೂತನ ಸಾರಥಿ
ಜಾಗತಿಕ ಬಂಟರ ಸಂಘದ ಒಕ್ಕೂಟಕ್ಕೆ ನೂತನ ಸಾರಥಿ
ಶ್ರೀಧಾಮ ಮಾಣಿಲ ಕ್ಷೇತ್ರದ ಪ್ರತಿಷ್ಠಾ ವರ್ಧಂತ್ಯುತ್ಸವ-ಜ.21ರಂದು ಪೇಜಾವರ ಮಠದಲ್ಲಿ
ಶ್ರೀಧಾಮ ಮಾಣಿಲ ಕ್ಷೇತ್ರದ ಪ್ರತಿಷ್ಠಾ ವರ್ಧಂತ್ಯುತ್ಸವ-ಜ.21ರಂದು ಪೇಜಾವರ ಮಠದಲ್ಲಿ
ಫೆ.10-11: ಅಖಿಲ ಭಾರತ ಹೊರನಾಡ ಕನ್ನಡಿಗರ ಸಮಾವೇಶ
ಫೆ.10-11: ಅಖಿಲ ಭಾರತ ಹೊರನಾಡ ಕನ್ನಡಿಗರ ಸಮಾವೇಶ

Comment Here