Thursday 8th, May 2025
canara news

ಸನಿಧ್ ಪೂಜಾರಿ ಸಾರಥ್ಯದ ರುದ್ರ ಎಂಟರ್‍ಟೇನ್ಮೆಂಟ್ ಪ್ರಸ್ತುತಿಯೊಂದಿಗೆ ನಾಳೆ ಬಿಲ್ಲವರ ಭವನದಲ್ಲಿ ಮಿಸ್ಟರ್ ಬಿಲ್ಲವ-ಮಿಸ್ ಬಿಲ್ಲವ ಸೌಂದರ್ಯ ಸ್ಪರ್ಧೆ

Published On : 22 Apr 2017   |  Reported By : Rons Bantwal


ಮುಂಬಯಿ, ಎ.22: ಮಹಾನಗರದಲ್ಲಿನ ಯುವ ಪತ್ರಕರ್ತ, ಫ್ಯಾಶನ್ ಕೋರಿಯೋಗ್ರಾಫರ್ ಸನಿಧ್ ಪೂಜಾರಿ ಅವರ ದಕ್ಷ ಸಂಘಟಕ ರುದ್ರ ಎಂಟರ್‍ಟೇನ್ಮೆಂಟ್ ಪ್ರಸ್ತುತಿ ಹಾಗೂ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಹಯೋಗದಲ್ಲಿ ನಾಳೆ (ಎ.23.) ಆದಿತ್ಯವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ಮಿಸ್ಟರ್ ಬಿಲ್ಲವ-ಮಿಸ್ ಬಿಲ್ಲವ ಸೌಂದರ್ಯ ಸ್ಪರ್ಧೆಯ ಅಂತಿಮ ಕ್ಷಮತಾಧಿಷ್ಠತೆ ನಡೆಯಲಿದೆ.

Jaya C. Suvarna

 Nityanand D.Kotian

 

 N.T Pooajary

 

Sanidh Poojary

ಪೂರ್ವಾಹ್ನ 11.00 ಗಂಟೆಗೆ ಸ್ಪರ್ಧೆ ಆರಂಭವಾಗಲಿದ್ದು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲ ಮೂಲ್ಕಿ ಇದರ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಸಮಾರಂಭ ಉದ್ಘಾಟಿಸಲಿದ್ದಾರೆ. ಅತಿಥಿüಗಳಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‍ನ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಬೃಹನ್ಮುಂಬಯಿ ಮಹಾನಗರಪಾಲಿಕೆಯ ಮಹಾಪೌರ ಪೆÇ್ರ| ವಿಶ್ವನಾಥ್ ಮಹಾದೇಶ್ವರ್, ಥಾಣೆ ಮಹಾನಗರಪಾಲಿಕಾ ಮಹಾಪೌರೆ ವಿೂನಾಕ್ಷಿ (ರಾಜೇಂದ್ರ ಶಿಂಧೆ) ಪೂಜಾರಿ, ಉಲ್ಲಾಸನಗರ್ ಮಹಾನಗರಪಾಲಿಕಾ ಮಹಾಪೌರೆ ವಿೂನಾ ಅಹಿಲಾನಿ, ಅತಿಥಿü ಕಲಾವಿದರುಗಳಾಗಿ ಹೆಸರಾಂತ ಕೋರಿಯೋಗ್ರಾಫರ್ ಸಂದೀಪ್ ಸೊಪರ್ಕರ್, ನಟ ಕೋರಿಯೋಗ್ರಾಫರ್ ಸುಶಾಂತ್ ಪೂಜಾರಿ, ಮಿಸಸ್ ಇಂಡಿಯಾ ಹೆಸರಾಂತ ನೇಹಾ ಬೆನರ್ಜಿ, ತುಳು ಚಿತ್ರನಟಿ ಶ್ರದ್ಧಾ ಸಾಲ್ಯಾನ್ ಸೇರಿದಂತೆ ಇತರೇ ಗಣ್ಯರು ಆಗಮಿಸÀಲಿದ್ದಾರೆ ಎಂದು ಸಂಘಟನಾ ಸಹಾಯಕ ಪ್ರಭಾಕರ್ ಬೆಳುವಾಯಿ ಹಾಗೂ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಯುವಾಭ್ಯುದಯ ಉಪ ಸಮಿತಿ ಮುಖ್ಯಸ್ಥ ನಿಲೇಶ್ ಪೂಜಾರಿ ತಿಳಿಸಿದ್ದಾರೆ. ಪ್ರವೇಶಪತ್ರವುಳ್ಳವರಿಗೆ ಮಾತ್ರ ಪ್ರವೇಶ ಅವಕಾಶ ಕಲ್ಪಿಸಲಾಗುತ್ತಿದ್ದು ಸರ್ವರೂ ಸಹಕರಿಸುವಂತೆ ಎಂದು ಕಾರ್ಯಕ್ರಮದ ಪ್ರಧಾನ ಸಂಘಟಕ ಸನಿಧ್ ಪೂಜಾರಿ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here