Saturday 20th, April 2024
canara news

ರುದ್ರ ಎಂಟರ್‍ಟೇನ್ಮೆಂಟ್ ಪ್ರಸ್ತುತಿಯ `ಮಿಸ್ಟರ್ ಬಿಲ್ಲವ-ಮಿಸ್ ಬಿಲ್ಲವ' ಸ್ಪರ್ಧೆಗೆ ಚಾಲನೆ

Published On : 23 Apr 2017   |  Reported By : Rons Bantwal


ಸ್ಪರ್ಧೆಗಳು ಸಂಸ್ಕೃತಿಯನ್ನೂ ಬಿಂಬಿಸುವಂತಾಗಲಿ: ಜಯ ಸುವರ್ಣ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.23: ಬಿಲ್ಲವ ಸಮುದಾಯದಲ್ಲಿ ಅನೇಕ ಚಿತ್ರನಟರು, ಕಲಾವಿದರು ಇದ್ದಾರೆ. ಅವರಲ್ಲಿ ಸದ್ಯ ಮಿಂಚುವ ಪ್ರತಿಭೆ ರಾಜಶೇಖರ್ ಕೋಟ್ಯಾನ್ ಆಗಿದ್ದಾರೆ. ಇವರೆಲ್ಲರೂ ನಮ್ಮ ಭವಿಷ್ಯತ್ತಿನ ಯುವ ಜನತೆಗೆ ಪ್ರೇರಕರು. ಸಿನೇಮಾ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ನಮ್ಮವರು ಪ್ರತಿನಿಧಿಸಿ ಸಮುದಾಯಕ್ಕೆ ಕೀರ್ತಿತರುವಂತಾಗಬೇಕು. ಯುವಜನತೆಯಿಂದಲೇ ಇದೆಲ್ಲಾ ಸಾಧ್ಯವಾಗಿದೆ. ರಮಣೀಯವಾದ ಈ ಸ್ಪರ್ಧೆ ನಮ್ಮ ಸಂಸ್ಕೃತಿಯನ್ನೂ ಬಿಂಬಿಸುವಂತಾಗಲಿ ಎಂದು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲ ಮೂಲ್ಕಿ ಇದರ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ನುಡಿದರು.

ಇಂದಿಲ್ಲಿ ಭಾನುವಾರ ಆದಿತ್ಯವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಹಯೋಗದಲ್ಲಿ ಮಹಾನಗರದ ಯುವ ಪತ್ರಕರ್ತ, ಫ್ಯಾಶನ್ ಕೋರಿಯೋಗ್ರಾಫರ್ ಸನಿಧ್ ಪೂಜಾರಿ ಸಾರಥ್ಯದ ರುದ್ರ ಎಂಟರ್‍ಟೇನ್ಮೆಂಟ್ ಪ್ರಸ್ತುತಿ ಪಡಿಸಿದ `ಮಿಸ್ಟರ್ ಬಿಲ್ಲವ-ಮಿಸ್ ಬಿಲ್ಲವ' ಸೌಂದರ್ಯ ಸ್ಪರ್ಧೆಯ ಅಂತಿಮ ಕ್ಷಮತಾಧಿಷ್ಠತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಯ ಸಿ.ಸುವರ್ಣ ಮಾತನಾಡಿದರು.

ಥಾಣೆ ಮಹಾನಗರಪಾಲಿಕಾ ಮಹಾಪೌರೆ ವಿೂನಾಕ್ಷಿ (ಆರ್.ಶಿಂಧೆ) ಪೂಜಾರಿ ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿದರು. ಅತಿಥಿüಗಳಾಗಿ ಉಲ್ಲಾಸನಗರ್ ಮಹಾನಗರಪಾಲಿಕಾ ಮಹಾಪೌರೆ ವಿೂನಾ ಅಹಿಲಾನಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಮಾಜಿ ಅಧ್ಯಕ್ಷ ಎಲ್.ವಿ ಅವಿೂನ್, ಅಸೋಸಿಯೇಶನ್‍ನ ಯುವಾಭ್ಯುದಯ ಸಮಿತಿ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರು, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಸಮಾಜ ಸೇವಕಿ ಮಂಗಳ ಛಡ್ಡಾ, ಅತಿಥಿü ಕಲಾವಿದ ಹೆಸರಾಂತ ಕೋರಿಯೋಗ್ರಾಫರ್ ಸಂದೀಪ್ ಸೊಪರ್ಕರ್, ರುದ್ರ ಸಂಸ್ಥೆಯ ಕು| ನೀಶಾ ಪೂಜಾರಿ, ರಾಜೇಶ್ ಪೂಜಾರಿ, ಕು| ಕಲ್ಪಿತಾ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರ ಮ ಪ್ರಾಯೋಜಕರು ಹಾಗೂ ಸ್ಪರ್ಧಾ ನ್ಯಾಯದರ್ಶಿಗಳಾದ ರೀನಾ ಎಂ.ಪೂಜಾರಿ, ದೀಪ್ತಿ ಡಿ.ಸುವರ್ಣ, ಪ್ರೇಮಾ ಕೋಟ್ಯಾನ್ ಹಾಗೂ ಪ್ರಧಾನವಾಗಿ ಸಹಕಾರವಿತ್ತ ಆಶಾಲತಾ ಕೋಟ್ಯಾನ್, ಲಕ್ಷ್ಮೀ ಎನ್.ಕೋಟ್ಯಾನ್, ಬೇಬಿ ಎಸ್.ಕುಕ್ಯಾನ್, ಪ್ರಭಾಕರ್ ಬೆಳುವಾಯಿ ಮತ್ತಿತರರಿಗೆ ಸ್ಮರಣಿಕೆ, ಪುಷ್ಪಗುಪ್ಚಗಳನ್ನಿತ್ತು ಗೌರವಿಸಿದರು.

 

ಸೊಪರ್ಕರ್ ಮಾತನಾಡಿ ಬಿಲ್ಲವರ ಭವನ ನನ್ನ ತವರು ಮನೆಯಂತಿದ್ದೇನೆ. ಇಲ್ಲಿನ ತುಳುನಾಡಿನ ನಮ್ಮವರೊಡನೆ ಸೇರಿಕೊಂಡಾಗ ಕೋರಿರೊಟ್ಟಿ ರುಚಿ ಅನುಭವವಾಗುವುದು ಸಹಜ. ನಮ್ಮವರ ಸಂದರ್ಯವೂ ಅಷ್ಟೇ ಸೊಗಸಾಗಿದೆ. ನಮ್ಮೆಲ್ಲರನ್ನು ಬೆರಗುಗೊಳಿಸುವ ಇಂತಹ ಸ್ಪರ್ಧೆ ಯುವಶಕ್ತಿಗೆ ಪೆÇ್ರೀತ್ಸಹದಾಯಕವಾಗಲಿ ಎಂದರು.

ಇಂದು ಸಾಹಿತ್ಯ ದಿನಾಚರಣೆ. ಆ ಮಧ್ಯೆಯಲ್ಲೊಂದು ಸೌಂದರ್ಯ ಸ್ಪರ್ಧೆ. ಇಂತಹ ಮನೋಹರದಾಯಕ ಸ್ಪರ್ಧೆಗಳಿಗೆ ಸಮುದಾಯದ ಸಂಘಟನೆಗಳು ಪೆÇ್ರೀತ್ಸಹಿಸುವ ಅಗತ್ಯವಿದೆ. ಸಮಾಜದ ಧುರೀಣರ ಪ್ರೇರಣೆಯಿಂದ ಮಾತ್ರ ಯುವಜನತೆಯಲ್ಲಿ ಸಾಂಘಿಕತೆ ತರಲು ಸಾಧ್ಯ ಎಂದು ವಿೂನಾಕ್ಷಿ ಪೂಜಾರಿ ಅಭಿಪ್ರಾಯ ವ್ಯಕ್ತ ಪಡಿಸಿದರು.

ಇಂತಹ ಸ್ಪರ್ಧೆಗಳು ಸಮುದಾಯದಲ್ಲಿನ ಪ್ರತಿಭೆಗಳನ್ನು ಗುರುತಿಸುವ ವೇದಿಕೆಗಳಾಗಿವೆ. ಸನಿಧ್ ಪೂಜಾರಿ ಚಿಂತನೆಯ ಈ ಕಾರ್ಯಕ್ರಮ ಸ್ತುತ್ಯಾರ್ಹ. ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಸೊಗಸಾದ ಕಾರ್ಯ ಕ್ರಮಗಳು ಮೂಡಿ ಬರುವಂತಾಗಲಿ ಎಂದು ಎಲ್.ವಿ ಅವಿೂನ್ ಎಂದರು.

ಮುಂಬಯಿ ಮಹಾನಗರವೇ ವೈವಿಧ್ಯಮಯ, ವಿವಿಧತೆಯ ಸಂಸ್ಕೃತಿ ಸಾರುವ ನಾಡಾಗಿದೆ. ಅದೂ ಸಾಂಸ್ಕೃತಿಕ ಲೋಕದ ಪೆÇೀಷಣೆ, ಪ್ರದರ್ಶನಕ್ಕೆ ಮಾದರಿ ನಗರವಾಗಿದೆ. ಫ್ಯಾಶನ್‍ಶೋ ಅಂತೂ ಅಸಾಧ್ಯವಾದ ಕಾರ್ಯಕ್ರಮ. ಅಲ್ಪಾವಧಿಯಲ್ಲೂ ಅಚ್ಚುಕಟ್ಟಾಗಿ ಸ್ಪರ್ಧೆ ಆಯೋಜಿಸಿ ಯುವಜನತೆಗೆ ಪೆÇ್ರೀತ್ಸಾಹಿಸುವಲ್ಲಿ ಶ್ರಮಿಸಿದ ಸನಿಧ್ ಓರ್ವ ಯಶಸ್ವೀ ಸಂಘಟಕ. ಸಾಂಘಿಕತಾ ವ್ಯಕ್ತಿತ್ವ ರೂಪಿಸಿದ ಇವರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ ಎಂದು ಚಂದ್ರಶೇಖರ ಪಾಲೆತ್ತಾಡಿ ತಿಳಿಸಿದರು.

ವಿೂನಾ ಅಹಿಲಾನಿ ಮಾತನಾಡಿ ಎಲ್ಲಾ ಸ್ಪರ್ಧಿಗಳಿಗೂ ಶುಭಾರೈಸಿದರು.

ಬಿಲ್ಲವರ ಅಸೋಸಿಯೇಶನ್ ಸಮಾಜದಲ್ಲಿನ ಪ್ರತಿಭೆಗಳನ್ನು ಪೆÇ್ರೀತ್ಸಾಹಿಸುತ್ತಿದೆ. ಇದೆಲ್ಲಾ ನಮ್ಮ ಪೂರ್ವಜರ ಪರಿಶ್ರಮದ ಫಲವಾಗಿದ್ದು ನಮ್ಮಲ್ಲಿನ ಯುವ ಜನತೆ ಇಂತಹ ಕಾರ್ಯಕ್ರಮಗಳಲ್ಲಾದರೂ ಪಾಲ್ಗೊಂಡು ಸಂಸ್ಥೆ ಮತ್ತು ಸಮಾಜವನ್ನು ಮುನ್ನಡೆಸುವಂತಾಗಲಿ ಎಂದು ನಿತ್ಯಾನಂದ ಕೋಟ್ಯಾನ್ ಆಶಯ ವ್ಯಕ್ತಪಡಿಸಿದರು.

ಆದಿಯಲ್ಲಿ ಭವನದ ಮಂದಿರದಲ್ಲಿನ ಬ್ರಹ್ಮಶ್ರೀ ನಾರಾಯಣ ಗುರುಗಳ ಪುಸ್ಥಳಿಗೆ ಸಂದೀಪ್ ಸೊಪರ್ಕರ್ ಹಾರಾರ್ಪಣೆಗೈದು ಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆಯನ್ನೀಡಿದರು. ಕು| ವಿಧಿತಾ ಪೂಜಾರಿ ಪ್ರಾರ್ಥನೆಯನ್ನಾಡಿದರು. ಅಕ್ಷಯ ಮಾಸಿಕದ ಸಹಾಯಕ ಸಂಪಾದಕ ಹರೀಶ್ ಕೆ.ಹೆಜ್ಮಾಡಿ ಪ್ರಸ್ತಾವಿಕ ನುಡಿಗಳನ್ನಾಡಿದರು. ದೀಪಕ್ ಶೆಟ್ಟಿ ಸ್ಪರ್ಧೆಯನ್ನು ನಿರ್ವಹಿಸಿದರು. ಕಾರ್ಯಕ್ರಮದ ಪ್ರಧಾನ ಸಂಘಟಕ, ರುದ್ರ ಎಂಟರ್‍ಟೇನ್ಮೆಂಟ್‍ನ ನಿರ್ದೇಶಕ ಸನಿಧ್ ಪೂಜಾರಿ ಸ್ವಾಗತಿಸಿ ವಂದಿಸಿದರು. ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಉಭಯ ವಿಭಾಗಗಳಲ್ಲಿ ಒಟ್ಟು 30 ಸ್ಪರ್ಧಿಗಳು ಪಾಲ್ಗೊಂಡಿದ್ದು ರ್ಯಾಂಪ್‍ನಲ್ಲಿ ಕ್ಯಾಟ್‍ವಾಕ್ ನಡೆಸಿದರು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here