Friday 12th, July 2024
canara news

ಯಾವ ಧರ್ಮದಲ್ಲೂ ಹಿಂಸೆಯ ತತ್ವವಿಲ್ಲ: ರಾಜ್ಯಪಾಲ ವಜುಭಾಯಿ

Published On : 23 Apr 2017   |  Reported By : Rons Bantwal


ಉಳ್ಳಾಲದ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್‍ನ ಬನಾತ್ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ

ಮುಂಬಯಿ, ಎ.23: ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅಪಾರ. ರಾಷ್ಟ್ರಪತಿಯಿಂದ ಹಿಡಿದು ಪ್ರಧಾನ ಮಂತ್ರಿಯವರೆಗೂ ದೇಶವನ್ನು ಅಳಿದ ಕೀರ್ತಿ ಮಹಿಳೆಯರಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಮಹಿಳೆಯು ವಿದ್ಯಾವಂತರಾಗುವ ಮೂಲಕ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಪುರುಷರಂತೆ ಸಮಾನತೆಯ ಜೀವನ ನಡೆಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯದ ರಾಜ್ಯಪಾಲ ವಜುಭಾಯಿ ರೂಢಾಬಾಯಿ ವಾಲಾ ಅಭಿಪ್ರಾಯಪಟ್ಟರು

ಇಂದಿಲ್ಲಿ ಶನಿವಾರ ಸಂಜೆ ಮಂಗಳೂರು ಉಳ್ಳಾಲ ಅಲ್ಲಿನ ಮದನಿ ಗ್ರೌಂಡ್‍ನಲ್ಲಿರುವ ಹಝ್ರತ್ ಶಾಲಾ ವಠಾರದಲ್ಲಿ 35ರ ಸಂಭ್ರಮವನ್ನು ಆಚರಿಸುತ್ತಿರುವ ಉಳ್ಳಾಲದ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್‍ನ ಬನಾತ್ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಬಳಿಕ `ಹಝ್ರತ್ ಮದನಿ ಇಲ್ಮ್' ಸ್ಮರಣ ಸಂಚಿಕೆ ಬಿಡುಗಡೆಗೈದು, ಸಾಧಕರಿಗೆ `ಮದನಿ ಪ್ರಶಸ್ತಿ' ಪ್ರದಾನಿಸಿ ರಾಜ್ಯಪಾಲ ವಜುಭಾಯಿ ಮಾತನಾಡಿದರು.

ಪ್ರತಿಯೊಂದು ಯಶಸ್ವಿ ಪುರುಷನ ಹಿಂದೆ ಮಹಿಳೆ ತ್ಯಾಗವಿದೆ. ಪುರುಷ ಜೀವನದ ಎಷ್ಟೇ ದೊಡ್ಡ ಸಾಧನೆ ಮಾಡಿದ್ದರೂ ಸಹ ಅದರಲ್ಲಿ ತನ್ನ ತಾಯಿ ಅಥವಾ ಹೆಂಡತಿ ಹಾಗೂ ಅಕ್ಕ-ತಂಗಿಯರ ಪ್ರೀತಿ ಮಮತೆ ಇರುತ್ತದೆ. ಸಮಾಜದಲ್ಲಿ ಸಾಮರಸ್ಯದ ಜೀವನವನ್ನು ನಡೆಸುವ ಮೂಲಕ ದ್ವೇಷವನ್ನು ಕಡಿಮೆ ಮಾಡಿ ಪ್ರೀತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು. ಯಾವ ಧರ್ಮದಲ್ಲೂ ಹಿಂಸೆಯ ತತ್ವವನ್ನು ಎಲ್ಲೂ ಪ್ರತಿಪಾದಿಸಿಲ್ಲ. ಮಾನವತವಾದದ ಜೊತೆಗೆ ಸೌಹಾರ್ದತೆಯಿಂದ ಬಾಳುವ ಮೂಲಕ ದ್ವೇಷವನ್ನು ದೂರ ಮಾಡಬೇಕಿದೆ. ಪ್ರತಿಯೊಂದು ಮಹಿಳೆಯೂ ಅಕ್ಷರಸ್ಥರಾಗುವ ಮೂಲಕ ಸ್ವಾವಲಂಬಿ ಜೀವನವನ್ನು ನಡೆಸಬೇಕು ಎಂಬ ಉದ್ದೇಶದಿಂದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ದೃಷ್ಟಿಯಲ್ಲಿ ಪ್ರತಿಯೊಂದು ಹೆಣ್ಣು ಮಕ್ಕಳಿಗೂ ಕಡ್ಡಾಯ ಶಿಕ್ಷಣವನ್ನು ನೀಡಬೇಕು ಎಂಬ ಕಾನೂನು ಗುಜರಾತಿನಲ್ಲಿದೆ. ಇಂತಹ ವ್ಯವಸ್ಥೆ ಪ್ರತಿ ರಾಜ್ಯದಲ್ಲೂ ಜಾರಿಗೊಳಿಸಬೇಕಿದೆ. ಇದೇ ಹಾದಿಯಲ್ಲಿ ಸಾಗುತ್ತಿರುವ ಸೈಯ್ಯಿದ್ ಮದನಿ ದರ್ಗಾ ಆಡಳಿತ ಕಾರ್ಯವೈಖರಿ ಶ್ಲಾಘನೀಯ ಎಂದ ಅವರು ಮಹಾತ್ಮ ಗಾಂಧಿ ಹಾಗೂ ಅಂಬೇಡ್ಕರ್ ರಂತಹ ಶ್ರೇಷ್ಟರು ಹಿಂದುಳಿದ ವರ್ಗದ ಜನರನ್ನು ಸಮಾಜದ ಮುಖ್ಯವಾಹಿನಿಗೆ ಬರುವಂತಹ ಸಂವಿಧಾನ ರೂಪಿಸಿದ ಪರಿಣಾಮ ಪ್ರತಿ ನಾಗರಿಕನೂ ಸಮಾನವಾಗಿ ಜೀವಿಸುವ ಹಕ್ಕು ಪಡೆದು ಕೊಂಡರು ಎಂದೂ ರಾಜ್ಯಪಾಲರು ಮನವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ 35ನೇ ವಾರ್ಷಿಕ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡುತ್ತಾ ಧಾರ್ಮಿಕ ವಿಶ್ವಾಸವನ್ನು ಜನರಿಗೆ ಯಥಾವತ್ತಾಗಿ ಮೂಡಿಸುತ್ತಾ ಬಂದಿದೆ. ಮಹತ್ತರ ಕೆಲಸಗಳಲ್ಲಿ ತೊಡಗಿಸಿಕೊಂಡು ವಿಶ್ವಾದ್ಯಂತ ಹೆಸರು ವಾಸಿಯಾಗಿದೆ. ಶೈಕ್ಷಣಿಕ ಚಳುವಳಿಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ ಹೆಣ್ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಅಕ್ಷರಜ್ಞಾನದ ಮೂಲಕ ರಕ್ಷಣೆಯನ್ನು ಒದಗಿಸಿರುವ ಆಡಳಿತ ಮಂಡಳಿ ಕಾರ್ಯ ಶ್ಲಾಘನಾರ್ಹ ಎಂದರು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ಮಾತನಾಡಿ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕವಾಗಿ ಸೈಯ್ಯದ್ ಮದನಿ ದರ್ಗಾ ಆಡಳಿತ ಮಂಡಳಿ ಟ್ರಸ್ಟಿನ ಮೂಲಕ ಕಾರ್ಯಚರಿಸುತ್ತಿದೆ. ಸಮಾಜದಲ್ಲಿ ಹಿಂದುಳಿದವರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಟ್ರಸ್ಟಿನ ಕಾರ್ಯವೈಖರಿ ವಿಶ್ವಾದ್ಯಂತ ಶ್ಲಾಘನೀಯವಾಗಿದೆ. ವಿದ್ಯಾಥಿರ್üಗಳು ಬಲಿಷ್ಠರಾದಲ್ಲಿ ದೇಶ ಬಲಿಷ್ಠವಾಗುವುದು ಎಂದರು.

ಚಾಮರಾಜಪೇಟೆ ಶಾಸಕ ಝಮೀರ್ ಅಹ್ಮದ್ ಖಾನ್, ಯೆನೆಪೆÇೀಯ ವಿಶ್ವವಿದ್ಯಾಲಯದ ಕುಲಪತಿ ಡಾ| ವೈ. ಅಬ್ದುಲ್ಲಾ ಕುಂಞÂ, ವಿಧಾನಪರಿಷತ್ ಮಾಜಿ ಮುಖ್ಯಸಚೇತಕ ಕೆ.ಎಸ್.ಮಹಮ್ಮದ್ ಮಸೂದ್, ದರ್ಗಾ ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್, ಮಂಗಳೂರು ಉತ್ತರ ಶಾಸಕ ಮೊಯ್ದೀನ್ ಬಾವಾ, ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞÂಮೋನು, ಉಳ್ಳಾಲ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ ಮುಖ್ಯ ಅತಿಥಿüಗಳಾಗಿದ್ದರು.

 
More News

ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
 ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ

Comment Here