ಮಂಗಳೂರು: ಮಂಗಳೂರು ಹೊರವಲಯದ ಉಳ್ಳಾಲ ವ್ಯಾಪ್ತಿಯ ಮುಕ್ಕಚ್ಚೇರಿ ಸೀಗ್ರೌಂಡ್ ಬಳಿ ಸಮುದ್ರಕ್ಕೆ ಸ್ನಾನಕ್ಕೆಂದು ಇಳಿದ ವ್ಯಕ್ತಿ ನೀರುಪಾಲಾದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.
ನೀರುಪಾಲಾದ ವ್ಯಕ್ತಿಯನ್ನು ಮಾಸ್ತಿಕಟ್ಟೆ ನಿವಾಸಿ ಹನೀಫ್ ಮಾಸ್ತಿಕಟ್ಟೆ(35) ಎಂದು ಗುರುತಿಸಲಾಗಿದೆ. ಮೈಯಲ್ಲಿ ಹುಣ್ಣಾಗಿದೆ ಎಂದು ಸಮುದ್ರ ಸ್ನಾನಕ್ಕೆ ಬಂದಿದ್ದರು ಎಂದು ವರದಿಯಾಗಿದೆ. ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.