Thursday 7th, December 2023
canara news

ಮಂಗಳೂರಲ್ಲಿ ಬಿಗಿಗೊಳ್ಳುತ್ತಿದೆ ಟ್ರಾಫಿಕ್ ನಿಯಮ

Published On : 24 Apr 2017   |  Reported By : Canaranews Network


ಮಂಗಳೂರು: ಮಂಗಳೂರು ನಗರದ ರಸ್ತೆಗಳಲ್ಲಿ ಸಾರಿಗೆ ನಿಯಮ ಉಲ್ಲಂಘನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಟ್ರಾಫಿಕ್ ಪೊಲೀಸರು 'ಎಂ-ಟ್ರಾಫಿಕ್ ನಿರ್ವಹಣಾ ವ್ಯವಸ್ಥೆ'ಯನ್ನು ಇನ್ನೂ ಉತ್ತಮಗೊಳಿಸುವ ಸರ್ವ ಪ್ರಯತ್ನದಲ್ಲಿದ್ದಾರೆ. ಈಗಾಗಲೇ 75 ಸಿಸಿ ಕ್ಯಾಮರಾಗಳನ್ನು ಟ್ರಾಫಿಕ್ ಸಮಸ್ಯೆ ಅತಿಯಾಗಿರುವ ಹಾಗೂ ಉಲ್ಲಂಘನೆಗಳು ಹೆಚ್ಚಾಗಿ ನಡೆಯುವ 45 ಸ್ಥಳಗಳಲ್ಲಿ ಸ್ಥಾಪಿಸಿದ್ದಾರೆ.

ಇವು ಹೈ-ರೆಸೊಲ್ಯೂಶನ್ ಕ್ಯಾಮರಾಗಳಾಗಿದ್ದು ವಾಹನಗಳ ನಂಬರ್ ಪ್ಲೇಟ್ ಹಾಗೂ ಬಣ್ಣಗಳನ್ನೂ ಗುರುತಿಸಬಲ್ಲಷ್ಟು ಸಶಕ್ತವಾಗಿವೆ"ಇದರಿಂದ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವ ವಾಹನಗಳನ್ನು ಕಂಡು ಹಿಡಿದು ಸೂಕ್ತ ಕ್ರಮ ಕೈಗೊಳ್ಳಲು ಅತ್ಯಂತ ಸಹಕಾರಿಯಾಗಲಿವೆ," ಎಂದು ಎಸಿಪಿ (ಟ್ರಾಫಿಕ್) ತಿಲಕ್ ಚಂದ್ರ ಹೇಳಿದ್ದಾರೆ. ಈ ಕ್ಯಾಮರಾಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿವೆ.

ಆರಂಭದ ಸಿಗ್ನಲ್ ಸಮೀಪದ ಝೀಬ್ರಾ ಕ್ರಾಸಿಂಗ್ ಮೇಲೆ ನಿಲ್ಲುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂಬ ಎಚ್ಚರಿಕೆಯನ್ನು ಕೂಡ ಅಧಿಕಾರಿಗಳು ನೀಡಿದ್ದಾರೆ.

 




More News

ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ

Comment Here