Sunday 26th, May 2024
canara news

ಉಚಿತ ಆರೋಗ್ಯ ತಪಾಸಣಾ ಶಿಬಿರ

Published On : 26 Apr 2017   |  Reported By : Dhananjaya Gurpur


ಗುರುಪುರ ಗ್ರಾಮ ಪಂಚಾಯತ್, ಕೆ ಎಸ್ ಆಸ್ಪತ್ರೆ ದೇರಳಕಟ್ಟೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರುಪುರ ಹಾಗೂ ಗ್ರಾಮೀಣ ಅಭಿವೃದ್ಧಿ ಮತ್ತು ತರಬೇತಿಗಾಗಿ ನಾಗರಿಕ ಸಮ್ಮಿಲನ, ಸ್ಕೂಲ್ ಆಫ್ ಸೋಸಿಯಲ್ ವರ್ಕ್ ರೋಶನಿ ನಿಲಯ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಮೇ 23ರಂದು ಗುರುಪುರ ಗ್ರಾಪಂ ಕಚೇರಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು.

ಗ್ರಾ ಪಂ ಅಧ್ಯಕ್ಷೆ ರುಕಿಯಾ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಜಿ ಕೆ ಉದಯ ಭಟ್, ಜಿ ಪಂ ಸದಸ್ಯ ಯು ಪಿ ಇಬ್ರಾಹಿಂ, ತಾಪಂ ಸದಸ್ಯ ಸಚಿನ್ ಅಡಪ, ಸದಸ್ಯರಾದ ಸದಾಶಿವ ಕೆ ಶೆಟ್ಟಿ, ಗ್ಲಾಡೀಸ್, ಯಶವಂತ ಶೆಟ್ಟಿ, ಕೆಡಿಪಿ ಸದಸ್ಯ ಜಿ ಮೊಹಮ್ಮದ್ ಉಂಞ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆಯ ಕಾನ್ಸರ್ ವಿಭಾಗದ ಡಾ ಜಯರಾಮ್ ಶೆಟ್ಟಿ, ಔಷಧಿ ವಿಭಾಗದ ಡಾ ಶಿವಕುಮಾರ್, ಶಸ್ತ್ರಚಿಕಿತ್ಸೆ ಡಾ ಭಾಸ್ಕರ್, ಡಾ ಶಿಶನಿಲ್, ಇಎನ್‍ಟಿ ಡಾ ಲ್ಯಾನ್ಸಿ, ಡಾ ಅಜೆಲ ಜೋಸ್, ಡಾ ಸುಮತಿ, ಕೆಎಸ್ ಹೆಗ್ಡೆ ಆಸ್ಪತ್ರೆಯ ಮಾರುಕಟ್ಟೆ ಅಧಿಕಾರಿ ಎಚ್ ಫ್ರಾನ್ಸಿಸ್ ಶಿಬಿರದಲ್ಲಿ ಇದ್ದರು. ರೋಶನಿ ನಿಲಯ ಎಂಎಸ್‍ಡಬ್ಯೂ ತರಗತಿಯ ಸೌಮ್ಯ ವಗಾಜಿ ಶಿಬಿರ ಯಶಸ್ವಿಗೆ ಶ್ರಮಿಸಿದರು.

 
More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here