Friday 4th, July 2025
canara news

ಮೇ 1ರಿಂದ ಮಂಗಳೂರಿಗೆ ಪ್ರತಿದಿನ ನೀರು

Published On : 28 Apr 2017   |  Reported By : Canaranews Network


ಮಂಗಳೂರು: ಮಂಗಳೂರು ವ್ಯಾಪ್ತಿಯಲ್ಲಿ ಮುಂದಿನ ಮೇ 1ರಿಂದ ಪ್ರತಿದಿನ ನೀರು ಸರಬರಾಜು ಮಾಡಲು ಪಾಲಿಕೆ ನಿರ್ಧರಿಸಿದೆ. ಸರಪಾಡಿ ಎಎಂಆರ್ ಡ್ಯಾಂನಿಂದ ಬುಧವಾರ ತುಂಬೆ ಡ್ಯಾಂಗೆ ನೀರು ಬಿಡಲು ಸೂಚನೆ ರವಾನೆಯಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ. ಸದ್ಯ ತುಂಬೆ ಡ್ಯಾಂನಲ್ಲಿ 4.18 ಮೀಟರ್ ನೀರು ಸಂಗ್ರಹವಿದ್ದು, ಎಎಂಆರ್ ಡ್ಯಾಂನಿಂದ ನೀರು ಹರಿಸಿದರೆ ತುಂಬೆಯಲ್ಲಿ 5 ಮೀಟರ್ ನೀರು ನಿಲುಗಡೆ ಆಗಲಿದೆ.

ಪರಿಣಾಮ ಮಂಗಳೂರಿಗೆ ನೀರು ಸರಬರಾಜಿನಲ್ಲಿ ಯಾವುದೇ ತೊಂದರೆ ಆಗದು ಎಂಬ ಆಧಾರದಲ್ಲಿ ಮೇ 1ರಿಂದ ಪ್ರತಿ ದಿನ ನೀರು ಸರಬರಾಜು ಆಗುವ ಸಾಧ್ಯತೆ ಇದೆ. ನಗರದಲ್ಲಿ ಪ್ರಸ್ತುತ 4 ದಿನ ನೀರು ಪೂರೈಕೆ ಹಾಗೂ 2 ದಿನ ನೀರು ನಿಲುಗಡೆ ಮಾಡಲಾಗುತ್ತಿದೆ. ನೀರು ರೇಷನಿಂಗ್ ಆರಂಭದಲ್ಲಿಯೇ ಮೇ 1ರಿಂದ ಪ್ರತಿ ದಿನ ನೀರು ಕೊಡುವುದಾಗಿ ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here