Thursday 8th, May 2025
canara news

ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ್ ಸ್ತ್ರೀ ಸಂಘಟನೆಯ ಬ್ರಹತ್ ಮಹಿಳಾ ಸಮಾವೇಷ - ಹಾಗೂ ಐದನೇ ವಾರ್ಷಿಕ ಉತ್ಸವ

Published On : 28 Apr 2017   |  Reported By : Bernard J Costa


ಉಡುಪಿ,ಎ. 29. ಕಥೊಲಿಕ್ ಸ್ತ್ರೀ ಸಂಘಟನೆ ಉಡುಪಿ ಧರ್ಮ ಪ್ರಾಂತ್ಯದ ಸ್ತ್ರೀ ಸಂಘಟನೆಯ ಬ್ರಹತ್ ಸಮಾವೇಷವು ಉಡುಪಿ ಸೈಂಟ್ ಮೇರಿಸ್ ಶಾಲೆಯ ಸಭಾಭವನದಲ್ಲಿ ಜರುಗಿತು.ಇದರ ಉದ್ಘಾಟನೆಯನ್ನು ಬತ್ತವನ್ನು ಒನಕೆಯಿಂದ ಕುಟ್ಟುವ ಮೂಲಕ ಉಡುಪಿ ಜಿಲ್ಲಾ ಉಸ್ತುವಾರಿ, ಕ್ರೀಡಾ ಮತ್ತು ಮಿನುಗಾರಿಕೆ ಸಚಿವರಾದ ಸಚಿವ ಮದ್ವರಾಜ್ ನೇರವೇರಿಸಿ ‘ಮಹಿಳೆ ಗಂಡಸಿಕ್ಕಿಂತಲು ದಯೆ ಭಕ್ತಿ ಶ್ರದ್ದೆಯುಳ್ಳವಳು, ಮಹಿಳೆಗೂ ದೇವಾಲಯಕ್ಕೂ, ದೇವರಿಗೂ ಮತ್ತು ಮಹಿಳೆಗೆ ಹತ್ತಿರದ ಸಂಬಂಧ ಇದೆ. ಅವಳು ಸಮಾಜ ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಾಳೆ, ಅದಕ್ಕಾಗಿ ಯುವಜನ, ತಮ್ಮ ಮಕ್ಕಳ ಜೊತೆ ಅವರಿಗೆ ಹೆಚ್ಚಿನ ಭಾಂಧವ್ಯ ಇರುತ್ತದೆ. ಮಹಿಳೆ ಸಬಲೀಕರಣಗೊಳ್ಳಬೆಕು, ಪಂಚಾಯತ್, ಮುನ್ಸಿಪಲ್ ಚುನಾವಣೆಗಳಿಗೆ ಸ್ಫರ್ಧಿಸ ಬೇಕು, ಅಗತ್ಯ ಬಿದ್ದರೆ ಎಮ್.ಎಲ್.ಎ, ಎಮ್.ಪಿ ಚುನಾವಣೆಗೂ ಸಿದ್ದರಿರಬೇಕು’ ಎಂದುರು

 

ಈ ಬ್ರಹತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ವಹಿಸಿ ‘ಸರಿಯಾದ ಯೋಜನೆ ಹಾಕಿಕೊಳ್ಳಲು ಸೋಲುವುದೆ, ಕೆಲವರ ಸೋಲಿಗೆ ಕಾರಣವಾಗುತ್ತೆ. ಸ್ತ್ರೀ ಸಂಘಟನೆಯ ವಿಚಾರದಲ್ಲಿ ಸ್ಪಶ್ಟ ಯೋಜನೆ ಹಾಕಿಕೊಂಡಿರುವುದಕ್ಕೆನೆ, ಇವತ್ತು ಈ ಸ್ತ್ರೀ ಸಂಘಟನೆ ಇಸ್ಟು ಬಲಿಸ್ಠವಾಗಿ ಹೋರ ಹೊಮ್ಮಿದೆ. ಸ್ತ್ರೀ ಸಂಘಟನೆಯಿಂದ ಒಂದು ಬ್ಯಾಂಕ್ ಸ್ರಶ್ಟಿಯಾಗ ಬೇಕಿದೆ, ಅಲ್ಲದೆ ಮಹಿಳೆಯರು ಬೇರೆ ಸಂಘಟನೆಗಳಲ್ಲಿ ಒಳ್ಳೆಯ ಸಂಬಂಧ ಇಟ್ಟುಕೊಂಡು, ಸಮಾಜದ ಒಳಿತಾಗಿ ಸೇವೆ ಮಾಡ ಬೇಕು, ಸಮಾಜದ ಅಭಿವ್ರದ್ದಿಗಾಗಿ ನಿಮ್ಮ ಮಕ್ಕಳಿಗೆ ಸರಕಾರಿ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳುವಂತೆ ಹುರಿದುಂಬಿಸಬೇಕು’ ಸಂದೇಶ ನೀಡಿ ಸಂಘಟನೆಯ ಮಾಜಿ ಅಧ್ಯಕ್ಷರು ಲೀನಾ ರೋಚ್, ವೈಲೆಟ್ ಕಾಸ್ಟಲೀನೊ, ಜೆನಿಫರ್ ಡಿಸೋಜಾ, ಸ್ಮಿತಾ ರೆಂಜರ್, ನಿರ್ದೇಶಕರುಗಳಾದ ವಂ| ವಾಲೇರಿಯನ್ ಮೆಂಡೊನ್ಸಾ ಹಾಗೂ ಸಚೇತಕಿ ಸಿಸ್ಟರ್ ಟ್ರೀಜಾ ಮಾರ್ಟಿಸ್ ಇವರುಗಳನ್ನು ಸನ್ಮಾನಿಸಿದರು.

ಕಾರ್ಯಕ್ರಮಕ್ಕೆ ಉಡುಪಿ ಧರ್ಮಪ್ರಾಂತ್ಯದ ವಿಗಾರ್ ಜೆರಾಲ್ ಆಶಿರ್ವಚನ ಮಾಡಿ ರಾಜಕೀಯದಲ್ಲಿ ಸಾಧನೆ ಮಾಡಿದ ಮಹಿಳೆ ವೆರೋನಿಕಾ ಕರ್ನೆಲಿಯೊ, ಶೈಲಾ ಡಿಸೋಜಾ, ಜೇನ್ ಮೇರಿ ಒಲಿವೇರಾ, ಮೀನಾ ಲೊರಿನ್ ಪಿಂಟೊ, ಲೇನಿ ಫೆರ್ನಾಂಡಿಸ್ ಮತ್ತು ವಿರಾ ಡಿಸೋಜಾ ಇವರನ್ನು ಸನ್ಮಾನಿಸಿದರು. ವಂ| ರೊನಾಲ್ಡ್ ಕುಟಿನ್ಹಾ ಸಾಹಿತ್ಯ ಕ್ಷೇತ್ರದಲ್ಲಿ ಕ್ಯಾಥರೀನ್ ರೊಡ್ರಿಗಸ್, ಕ್ರೀಡಾ ಕ್ಷೇತ್ರದಲ್ಲಿ ಸುನೀತಾ ಡಿಸೋಜಾ ಇವರನ್ನು ಸನ್ಮಾನಿಸಿದರು.

ಮೊದಲಿಗೆ ಸಂಘಟನೇಯ ನಿರ್ದೇಶಕರಾದ ವಂ|ರೆಜಿನಾಲ್ಡ್ ಪಿಂಟೊ ಪ್ರಾರ್ಥನ ವಿಧಿಯನ್ನು ನೆಡೆಸಿಕೊಟ್ಟರು. ಅಧ್ಯಕ್ಷೆ ಐರಿನ್ ಪಿರೇರಾ ಸ್ವಾಗತವನ್ನು ಕೋರಿದರು. ಕಾರ್ಯದರ್ಶಿ ಸಿಂತಿಯಾ ಡಿಸೋಜಾ ವರದಿ ವಾಚಿಸಿದರು. ಬೆನೆಡಿಕ್ಟಾ ಫೆರ್ನಾಂಡಿಸ್ ವಂದಿಸಿದರು. ಜೂಡಿತ್ ಫೆರ್ನಾಂಡಿಸ್, ವಿನಯಾ ಡಿಕೋಸ್ತಾ, ಸುನೀತಾ ಡಿಸೋಜಾ, ಕ್ವೀನಿ ಮೇರಿ ಮತ್ತು ಆಗ್ನೆಸ್ ಮಥಾಯಸ್ ಕಾರ್ಯಕ್ರಮವನ್ನು ನಿರೂಪಿಸಿದರು
ವಿಚಾರ ವೇದಿಕೆಯಲ್ಲಿ ‘ಮುಂದಿನ ದಿಕ್ಕಿನತ್ತ ಸಾಗುವ ಮಹಿಳೆ’ (ಮುಖ್ಲೆ ದಿಶೆ ತೆವ್ಶಿ ಚಮ್ಕೊಂಚಿ ಸ್ತ್ರೀ) ಎಂಬ ವಿಷಯ ವಿಚಾರ ಮಂಡನೆ ಕಾರ್ಯಕ್ರಮ ನೆಡೆಯಿತು. ಈ ವಿಚಾರ ಮಂಡನೆಯಲ್ಲಿ ಶ್ವೇತಾ ರಸ್ಕಿನ್ಹಾ ಕನ್ಸೆಪಾ ಆಳ್ವ, ಕಾರ್ಯನಿರ್ವಾಹಕಿ ಆಕಾಶವಾಣಿ ಮಂಗ್ಳೂರು, ಮೇರಿ ಶ್ರೇಷ್ಠ, ವಕೀಲರು, ನೋಟರಿ ಇವರು ಭಾಗವಹಿಸಿದರು. ಈ ವಿಚಾರ ಮಂಡನೆಯನ್ನು ರಾಜಕಾರಣಿ ವೆರೋನಿಕಾ ಕರ್ನೆಲಿಯೊ ನೆಡೆಸಿಕೊಟ್ಟರು. ಬೀನಾ ಲುವಿಸ್ ವಿಚಾರ ಗೋಷ್ಟಿಗೆ ಚಾಲನೆ ನೀಡಿದರು. ಜ್ಯೋತಿ ಒಲಿವಿಯಾ ಕಾಬ್ರಾಲ್ ವಂದಿಸಿದರು.

ಮಧ್ಯಾನದ ತರುವಾಯ ಕುಂದಾಪುರ, ಕಲ್ಯಾಣಪುರ, ಕಾರ್ಕಳ, ಉಡುಪಿ ಶಿರ್ವಾ ವಲಯದ ಸಂಘಟನೆಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮವಾಗಿ ಕಿರು ನಾಟಕಗಳು, ನ್ರತ್ಯ ಮತ್ತು ಹಾಸ್ಯ ಪ್ರವಸನಗಳ ಪ್ರದರ್ಶನವನ್ನು ನೀಡಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here