Friday 12th, July 2024
canara news

ದಾಖಲೆ ಸರಿಯಿದ್ದಲ್ಲಿ ೧ ವಾರದಲ್ಲಿ ಮನೆ ನಿರ್ಮಾಣ ಪರವಾನಿಗೆ; ಮೇಯರ್ ಕವಿತಾ

Published On : 30 Apr 2017   |  Reported By : Canaranews Network   |  Pic On: photo credit: The Hindu


ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನಸಾಮಾನ್ಯರು ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿ ದಾಖಲೆಗಳು ಸಮರ್ಪಕವಾಗಿದ್ದಲ್ಲಿ ಒಂದು ವಾರದೊಳಗೆ ಅವರಿಗೆ ಪರವಾನಿಗೆ ಒದಗಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಮೇಯರ್ ಕವಿತಾ ಸನಿಲ್ ಎಚ್ಚರಿಕೆ ನೀಡಿದ್ದಾರೆ.

ಮಹಾನಗರ ಪಾಲಿಕೆ ಕಚೇರಿಯ ಮಂಗಳಾ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಾಲಿಎ ಕಚೇರಿಯಲ್ಲಿ ಜನನ -ಮರಣ ಪ್ರಮಾಣ ಪತ್ರ, ನಗರ ಅಭಿವೃದ್ಧಿ ಹಾಗೂ ರೋಜ್ ಗಾರ್ ವಿಭಾಗಗಳಲ್ಲಿ ಬ್ರೋಕರ್ ಹಾವಳಿಯ ಬಗ್ಗೆ ನನ್ನ ಗಮನಕ್ಕೆ ಬಂದಿದೆ.

ಯಾವುದೇ ಅರ್ಜಿ, ಪರವಾನಿಗೆಯನ್ನು ಸಂಬಂಧಪಟ್ಟವರ ಕೈಗೆ ಮಾತ್ರವೇ ನೀಡಬೇಕು. ಯಾವುದೇ ಕಾರಣಕ್ಕೂ ಬ್ರೋಕರ್ ಗಳಿಗೆ ಅವಕಾಶ ನೀಡಬಾರದು ಎಂಬುದಾಗಿ ಪರಿಷತ್ತಿನಲ್ಲಿ ನಿರ್ಣಯಿಸಲಾಗುತ್ತಿದೆ ಎಂದು ಮೇಯರ್ ಆದೇಶಿಸಿದರು.
More News

ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
 ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ

Comment Here