Thursday 7th, December 2023
canara news

ಪಿಲಿಕುಳ ನಿಸರ್ಗಧಾಮದೊಳಗೆ ಮಿನಿ ಬಸ್ ಸೌಲಭ್ಯ

Published On : 30 Apr 2017   |  Reported By : Canaranews Network

ಮಂಗಳೂರು: ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮಕ್ಕೆ ಬಸ್ಸಿನಲ್ಲಿ ಬರುವ ಪ್ರವಾಸಿಗರನ್ನು ನಿಸರ್ಗಧಾಮದ ಒಳಗಡೆ ವಿವಿಧ ಘಟಕಗಳಿಗೆ ಕರೆದೊಯ್ಯಲು ಮೇ ೧ ರಿಂದ ಮಿನಿ ಬಸ್ ಸೌಕರ್ಯ ಕಲ್ಪಿಸಲಾಗುತ್ತಿದೆ. ‘ಪಿಲಿಕುಳ ದರ್ಶನ’ ಎಂಬ ಹೆಸರಿನಲ್ಲಿ ಈ ಬಸ್ ವ್ಯವಸ್ಥೆಯ ಮೂಲಕ ಪ್ರವಾಸಿಗರು ಪಿಲಿಕುಳದ ವಿವಿಧ ಘಟಕಗಳಿಗೆ ಪ್ರಯಾಣಿಸಬಹುದು.

ದೂರದ ಊರುಗಳಿಂದ ಬರುವ ಪ್ರವಾಸಿಗರು ವಾಮಂಜೂರಿನ ಟಿ.ಬಿ. ಆಸ್ಪತ್ರೆ ಬಳಿ ಇಳಿದಲ್ಲಿ ಅಲ್ಲಿಂದ ಈ ಮಿನಿ ಬಸ್ ಮೂಲಕ ಪಿಲಿಕುಳದ ಎಲ್ಲಾ ಘಟಕಗಳಿಗೆ ಪ್ರಯಾಣಿಸಬಹುದು. ಬೆಳಿಗ್ಗೆ ೯.೩೦ರಿಂದ ಸಂಜೆ ೫.೩೦ ರವರೆಗೆ ಗಂಟೆಗೆ ಒಂದು ಸಲದಂತೆ ಈ ವಾಹನ ಪ್ರಯಾಣ ಬೆಳೆಸಲಿದೆ ಎಂದು ನಿಸರ್ಗಧಾಮದ ಅಧಿಕಾರಿಗಳು ತಿಳಿಸಿದ್ದಾರೆ.

More News

ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ

Comment Here