Thursday 25th, July 2024
canara news

ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ

Published On : 30 Apr 2017   |  Reported By : Bernard J Costa


ಕುಂದಾಪುರ ಎಲ್.ಜಿ.ಫೌಂಡೇಶನ ಹಂಗ್ಳೂರು ಕುಂದಾಪುರ ಇವರ ವತಿಯಿಂದ ಪ್ರಸಾದ ನೇತ್ರಾಲಯ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿವಾರಣಾ ವಿಭಾಗ ಉಡುಪಿ,ಪಡುಕೋಣೆ ಎಜುಕೇಶನ್ ಮತ್ತು ಸಂಸ್ಥೆಯ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ನಾಡ ಗುಡ್ಡೆಯಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವಠಾರದಲ್ಲಿ ಇತ್ತೀಚಿಗೆ ನಡೆಯಿತು.

ಸಮಾರಂಭ ಉದ್ಘಾಟನೆಯನ್ನು ಎಲ್.ಜಿ. ಫೌಂಡೇಶನ ನಿರ್ದೇಶಕಿ ಲಚ್ಚು ದೇವಾಡಿಗ ನೆರವೇರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮುಂಬೈ ಉದ್ಯಮಿ ಸುರೇಶ ಡಿ ಪಡುಕೋಣೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ ಸದಸ್ಯರಾದ ರಾಜು ದೇವಾಡಿಗ, ಮಾಜಿ ಸದಸ್ಯರಾದ ಪ್ರಭು ಕೆನಡಿ ಪಿರೇರಾ,ನರಸಿಂಹ ಪೂಜಾರಿ ಹೆನೆಡಿ ಮನೆ,ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಚಿಕ್ಕಮರಿ,ಹಡವು ಹಾಲು ಉತ್ಪಾದಕರ ಸೊಸೈಟಿ ಅಧ್ಯಕ್ಷರಾದ ಶೀನಾ ದೇವಾಡಿಗ,ಉದ್ಯಮಿ ಬಾಬು ದೇವಾಡಿಗ ಹಂಗಳೂರು, ಎಲ್.ಜಿ. ಫೌಂಡೇಶನ ಆಡಳಿತ ನಿರ್ದೇಶಕ ನಾಗರಾಜ ಡಿ ಪಡುಕೋಣೆ, ಕುಸುಮ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕರಾದ ರಾಜೇಶ ಗಾಣಿಗ ಕಾರ್ಯಕ್ರಮ ನಿರೂಪಿಸಿ ಪಡುಕೋಣೆ ಎಜುಕೇಶನ್ ಮತ್ತು ಸಂಸ್ಥೆಯ ಅಧ್ಯಕ್ಷ ಸ್ಟೀವನ ಡಿಸೋಜಾ ವಂದಿಸಿದರು.
More News

ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ

Comment Here