Friday 9th, May 2025
canara news

ಕೊರಗ ಸಮುದಾಯದ ಮೇಲಿನ ಹಲ್ಲೆ ಪ್ರಕರಣ

Published On : 30 Apr 2017   |  Reported By : Canaranews Network


ಮಂಗಳೂರು: ಕುಂದಾಪುರದ ಹೊಸಾಡಿನಲ್ಲಿ ನಡೆದ ಕೊರಗ ಸಮುದಾಯದ ಮೇಲಿನ ಹಲ್ಲೆ ಪ್ರಕರಣ ಸಂಬಂಧ ನ್ಯಾಯ ಸಿಗದೇ ಇದ್ದಲ್ಲಿ ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ಹೊಸಾಡು ಚಲೋ ಕಾಯ್ಕ್ರಮ ಹಮ್ಮಿಕೊಳ್ಳುವುದಾಗಿ ದಲಿತ ದಮನಿತ ಸ್ವಾಭಿಮಾನಿ ಹೋರಾಟ ಸಮಿತಿ ಮುಖಂಡ ರಘುವೀರ್ ಸೂಟರ್ಪೇಟೆ ತಿಳಿಸಿದ್ರು.

 

ಮಂಗಳೂರಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮನೆಯೊಂದರಲ್ಲಿ ಮಾಂಸದೂಟ ಮಾಡುತ್ತಿದ್ದ ಹೊಸಾಡಿನ ಕೊರಗ ಕುಟುಂಬದ ಮನೆಗೆ ನುಗ್ಗಿ ಬಜರಂಗದಳದ ಕಾಯಕರ್ತರು ಹಲ್ಲೆ ನಡೆಸಿ ಜಾತಿನಿಂದನೆ ಮಾಡಿರುವುದು ಖಂಡನೀಯ. ದಲಿತರ ಆಹಾರ ಪದ್ಧತಿಯನ್ನು ನಿರ್ಧರಿಸುವ ಹಕ್ಕನ್ನು ಯಾರೂ ಹೊಂದಿಲ್ಲ.

ಈ ರೀತಿ ದೌರ್ಜನ್ಯ ನಡೆಸಿದ ಬಜರಂಗದಳ ಕಾರ್ಯಕರ್ತರನ್ನು ಬಂಧಿಸಿ ಗಡೀಪಾರು ಮಾಡಬೇಕು, ಪ್ರಕರಣದ ಬಗ್ಗೆ ನಿರ್ಲಕ್ಷ್ಯ ಭಾವನೆ ಹೊಂದಿರುವ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು ಹಾಗೂ ಅಂಬೇಡ್ಕರ್ರನ್ನು ಅವಮಾನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುವವರನ್ನು ಬಂಧಿಸುವಂತೆ ಆಗ್ರಹಿಸಿದ್ರು. ಅಲ್ಲದೇ ದಲಿತ ಪರ ಕಾಳಜಿ ವ್ಯಕ್ತಪಡಿಸುವ ಪೇಜಾವರ ಶ್ರೀಗಳು ಕೂಡಲೇ ಮೌನ ಮುರಿಯವಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಟಿಯಲ್ಲಿ ಸುರೇಶ್ ಭಟ್ ಬಾಕ್ರಬೈಲ್, ಅಶೋಕ್ ಕೊಂಚಾಡಿ, ಉಮರ್ ಮೊದಲಾದವರು ಉಪಸ್ಥಿತರಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here