Friday 9th, May 2025
canara news

ಥಾಣೆ ಪಶ್ಚಿಮಲ್ಲಿ ಶಿವಾ'ಸ್ ಹೇರ್ ಡಿಝೈನರ್ಸ್ 14ನೇ ಶಾಖೆ ತೆರವು ಟಿಎಂಸಿ ಮೇಯರ್ ವಿೂನಾಕ್ಷಿ ರಾಜೇಂದ್ರ ಶಿಂಧೆ ಅವರಿಂದ ಉದ್ಘಾಟನೆ

Published On : 01 May 2017   |  Reported By : Ronida Mumbai


(ಚಿತ್ರ / ವರದಿ: ರೊನಿಡಾ ಮುಂಬಯಿ)

ಮುಂಬಯಿ, ಎ.30: ರಾಷ್ಟ್ರದ ಆಥಿರ್üಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ಕ್ಷೌರಿಕ ವೃತ್ತಿ ಮೂಲಕ ಬಾಲಿವುಡ್ ವಲಯದ ಪ್ರಸಿದ್ಧ ಸಲೂನ್ ತುಳು-ಕನ್ನಡಿಗ ಡಾ| ಶಿವರಾಮ ಕೆ.ಭಂಡಾರಿ ಅತ್ತೂರು (ಕಾರ್ಕಳ) ಆಡಳಿತ್ವದ ಶಿವಾ'ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಸುಸಜ್ಜಿತ, ಅತ್ಯಾಧುನಿಕ ಪ್ರಸಿದ್ಧ ಕೇಶ ವಿನ್ಯಾಸ ಮಳಿಗೆಯ 14ನೇ ಶಾಖೆಯನ್ನು ಕಳೆದ ಶನಿವಾರ ಉಪನಗರ ಥಾಣೆ ಪಶ್ಚಿಮದ ನವ್ಪಾಡ ಇಲ್ಲಿನ ಟ್ರೊಪಿಕಲ್ ಇಲೈಟ್ ಕಟ್ಟಡದಲ್ಲಿ ಉದ್ಘಾಟಿಸಲ್ಪಟ್ಟಿತು. ಥಾಣೆ ಮಹಾನಗರ ಪಾಲಿಕೆಯ ಮೇಯರ್ ವಿೂನಾಕ್ಷಿ ರಾಜೇಂದ್ರ ಶಿಂಧೆ (ಪೂಜಾರಿ) ರಿಬ್ಬನ್ ಬಿಡಿಸಿ ಶಿವಾ'ಸ್ 14ನೇ ಮಳಿಗೆಯನ್ನು ಉದ್ಘಾಟಿಸಿದರು. ಸ್ಥಾನೀಯ ನಗರ ಸೇವಕಿ ಸುಜಾತ ಭಾಸ್ಕರ್ ಪಾಟೀಲ್ ಮುಖ್ಯ ಅತಿಥಿüಯಾಗಿ ಉಪಸ್ಥಿತರಿದ್ದು ಶಿವರಾಮ ಕೆ.ಭಂಡಾರಿ ಅವರು ಶ್ರೀಫಲ ಹೊಡೆದು ವಿಧ್ಯುಕ್ತವಾಗಿ ಕ್ಷೌರಿಕ ಸೇವೆಗಳಿಗೆ ಚಾಲನೆಯನ್ನಿತ್ತರು.

 

ಪುರೋಹಿತ ನಾಗರಜ್ ಭಟ್ ಧರೆಗುಡ್ಡೆ (ಕಾರ್ಕಳ) ಅವರು ವಾಸ್ತುಪೂಜೆ, ಗಣಹೋಮ ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ನೆರೆದ ಜನತೆಯನ್ನು ಹರಸಿದರು. ಈ ಶುಭಾವಸರದಲ್ಲಿ ಭಂಡಾರಿ ಸಮಾಜದ ಧುರೀಣರುಗಳಾದ ನ್ಯಾಯವಾದಿ ರಾಮಣ್ಣ ಎಂ ಭಂಡಾರಿ, ಪ್ರಭಾಕರ್ ಪಿ.ಭಂಡಾರಿ ಥಾಣೆ, ವೆಂಕಟೇಶ್ ಭಂಡಾರಿ, ಪದ್ಮನಾಭ ಭಂಡಾರಿ ಥಾಣೆ, ರವಿ ಭಂಡಾರಿ, ರಘು ಭಂಡಾರಿ, ಸಮಾಜ ಸೇವಕರುಗಳಾದ ಅಶೋಕ್ ಧಮಾಣ್ಕರ್ ಅವರನ್ನೊಳಗೊಂಡು ನೂರಾರು ಗಣ್ಯರು ಆಗಮಿಸಿ ಶಿವಾ'ಸ್‍ಗೆ ಅಭಿನಂದಿಸಿದರು. ಗುಲಾಬಿ ಕೃಷ್ಣ ಭಂಡಾರಿ ಮತ್ತು ಅನುಶ್ರೀ ಶಿವರಾಮ ಭಂಡಾರಿ ಅತಿಥಿüಗಳಿಗೆ ಶಾಲು ಹೊದಿಸಿ ಸತ್ಕರಿಸಿ ಅಭಿವಂದಿಸಿದರು.

ಈ ಸಂದರ್ಭ ಮಾ| ರೋಹಿಲ್ ಶಿವರಾಮ್, ಬೇಬಿ ಆರಾಧ್ಯ ಶಿವರಾಮ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಡಾ| ಶಿವರಾಮ ಕೆ.ಭಂಡಾರಿಸ್ವಾಗತಿಸಿದರು. ಶ್ವೇತಾ ಭಂಡಾರಿ ಅತಿಥಿsಗಳನ್ನು ಪರಿಚಯಿಸಿದರು. ಸರಿತಾ ಬಂಗೇರಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here