ಮಂಗಳೂರು: ಶಾಸಕ ಅಭಯಚಂದ್ರ ಜೈನ್ ಅವರನ್ನು ೨೦೧೮ರಲ್ಲಿ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಾಕಾಭಿಷೇಕ ಮಹೋತ್ಸವದ ರಾಜ್ಯಮಟ್ಟದ ಸಮಿತಿಗೆ ಸಹ ಅಧ್ಯಕ್ಷರನ್ನಾಗಿ ನೇಮಿಸಿರುವುದರಿಂದ ಸರ್ಕಾರ ಅವರಿಗೆ ಸಂಪುಟ ದರ್ಜೆಯ ಸಚಿವರ ಸ್ಥಾನಮಾನವನ್ನು ನೀಡಿದೆ.
ಸರ್ಕಾರ ಈ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಅಭಯಚಂದ್ರ ಅವರಿಗೆ ಸಚಿವರಿಗೆ ನೀಡಲಾಗುವ ಸರ್ಕಾರಿ ಕಾರು ನೀಡಲಾಗಿದೆ.