Friday 9th, May 2025
canara news

ಮಂಗಳೂರಿಗೆ ಕೇಂದ್ರದಿಂದ 107 ಕೋ.ರೂ.

Published On : 05 May 2017   |  Reported By : Canaranews Network


ಮಂಗಳೂರು: ಮಂಗಳೂರು ಸ್ಮಾರ್ಟ್ಸಿಟಿ ಯೋಜನೆ ಅನುಷ್ಠಾನ ಕುರಿತು ಬೆಂಗಳೂರಿನಲ್ಲಿ ಮಂಗಳವಾರ ನಡೆದ "ವಿಶೇಷ ಉದ್ದೇಶ ವಾಹಕ'ದ ಮೊದಲ ಸಭೆ ಯಶಸ್ವಿಯಾಗಿದೆ. ಈ ಮೂಲಕ ಸ್ಮಾರ್ಟ್ ಮಂಗಳೂರು ಸಮಗ್ರ ಯೋಜನೆ ಜಾರಿಗೆ ಕೇಂದ್ರ ಸರಕಾರದಿಂದ 107 ಕೋ. ರೂ. ಅನುದಾನ ಬಿಡುಗಡೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಕನಸಿನ ಸ್ಮಾರ್ಟ್ಸಿಟಿ ನಿರ್ಮಾಣ ಯೋಜನೆಯ 100 ನಗರಗಳ ಪಟ್ಟಿಯಲ್ಲಿ ಮಂಗಳೂರು ಕೂಡ ಸ್ಥಾನ ಪಡೆದುಕೊಂಡಿತ್ತು. ಮೊದಲ ಹಂತವಾಗಿ ದೇಶದ ಒಟ್ಟು 20 ನಗರಗಳನ್ನು ಗುರುತಿಸಿ ಸ್ಮಾರ್ಟ್ಸಿಟಿಯನ್ನಾಗಿ ಪರಿವರ್ತಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಆ ಬಳಿಕ 2ನೇ ಹಂತವಾಗಿ ಮಂಗಳೂರು ಸೇರಿದಂತೆ ದೇಶದ 20 ನಗರಗಳನ್ನು ಆಯ್ಕೆ ಮಾಡಲಾಗಿತ್ತು.

ಅದರಂತೆ ಮಂಗಳೂರು ಸ್ಮಾರ್ಟ್ಸಿಟಿಯಾಗಿ ಪರಿವರ್ತಿಸುವುದಕ್ಕೆ ಮಹಾನಗರ ಪಾಲಿಕೆ 2000 ಕೋ. ರೂ. ಪ್ರಸ್ತಾವನೆ ರೂಪಿಸಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಮೊದಲ ಹಂತದಲ್ಲಿ 107 ಕೋ. ರೂ. ಅನುದಾನ ಬಿಡುಗಡೆ ಮಾಡಿದೆ. ಈ ಮೂಲಕ ಮಂಗಳೂರು ಜನತೆಯ ಕನಸಿನ ಸ್ಮಾರ್ಟ್ಸಿಟಿ ಯೋಜನೆಗೆ ವಿಧ್ಯುಕ್ತ ಚಾಲನೆ ದೊರೆತಿರುವುದು ಗಮನಾರ್ಹವಾಗಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here