Friday 9th, May 2025
canara news

ಶ್ರೀಮತಿ ಅನಿತಾ ಕುಮಾರ್ ಗೌರವ್ ಅವರು ನಿರ್ಮಿಸುತ್ತಿರುವ ಪ್ರಥಮ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ

Published On : 05 May 2017   |  Reported By : Bernard J Costa


AAA CREATIONS ಸಂಸ್ಥೆಯಲ್ಲಿ ಶ್ರೀಮತಿ ಅನಿತಾ ಕುಮಾರ್ ಗೌರವ್ ಅವರು ನಿರ್ಮಿಸುತ್ತಿರುವ ಪ್ರಥಮ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭವು ಇತ್ತೀಚೆಗೆ ಬೆಂಗಳೂರಿನ ವಸಂತಪುರದ ಭವಾನಿ ಶಂಕರ ದೇವಸ್ಥಾನದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ.ಗೋವಿಂದು, ಉಪಾಧ್ಯಕ್ಷರಾದ ಉಮೇಶ್ ಬಣಕಾರ್, ಕಾರ್ಯದರ್ಶಿಗಳಾದ ಎನ್.ಎಂ.ಸುರೇಶ್, ಎಂ ನರಸಿಂಹಲು ಹಾಗೂ ಶಾಸಕರಾದ ಜಮೀರ್ ಅಹಮ್ಮದ್ ಖಾನ್, ಎಂ.ಕ್ರಿಷ್ಣಪ್ಪ, ಅಖಂಡ ಶ್ರೀನಿವಾಸ ಮೂರ್ತಿ, ಸಿ.ಆರ್ ಮನೋಹರ್, ಹಜ್ ಕಮಿಟಿ ಮಾಜಿ ಅಧ್ಯಕ್ಷರಾದ ಜುಲ್ಫಿಕರ್ ಅಹಮ್ಮದ್ ಖಾನ್ ಹಾಗೂ ಇನ್ನಿತರ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿತು.

 

ಕುಮಾರ್ ಗೌರವ್ ಈ ಚಿತ್ರದ ಮೂಲಕ ನಾಯಕನಟರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಚಿತ್ರದ ಪ್ರಥಮ ಸನ್ನಿವೇಶಕ್ಕೆ ಶಾಸಕರಾದ ಜಮೀರ್ ಅಹಮ್ಮದ್ ಖಾನ್ ರವರು ಆರಂಭ ಪಲಕ ತೋರಿಸಿದರು.ಹೆಸರಾಂತ ನಟ,ನಿರ್ಮಾಪಕ,ನಿರ್ದೇಶಕ ಕಾಶೀನಾಥ್ ರವರು ಕ್ಯಾಮರಾ ಚಾಲನೆ ಮಾಡಿದರು.

ಕಾಶೀನಾಥ್ ಹಾಗೂ ಉಪೇಂದ್ರರವರ ಗರಡಿಯಲ್ಲಿ ಹತ್ತಾರು ವರ್ಷ ಪಳಗಿ ಅನುಭವ ಹೊಂದಿ ತನ್ನದೇ ನಿರ್ಮಾಣ ಸಂಸ್ಥೆ ಪ್ರಾರಂಭಿಸಿ “ಹಜ್” ಚಿತ್ರ ನಿರ್ಮಾಣದ ಮೂಲಕ ನಿರ್ಮಾಪಕರಾಗಿ ರಾಜ್ಯಪ್ರಶಸ್ತಿ,ಸ್ವರ್ಣಪದಕ ಹಾಗೂ ಅಂತರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿಯನ್ನು ಪಡೆದ ಶ್ರೀ ರಾಜೀವ ಕೊಠಾರಿ (ಶ್ರೀ ರಾಜ್) ರವರು ಪ್ರಥಮ ಬಾರಿಗೆ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ.
ಚಿತ್ರದ ಕಲಾವಿದರ ಹಾಗೂ ತಂತ್ರಜ್ನರ ಆಯ್ಕೆ ನಡೆಯುತ್ತಿದ್ದೂ,ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ನಿರ್ದೇಶಕ ರಾಜೀವ್ ಕೊಠಾರಿರವರು ತಿಳಿಸಿದ್ದಾರೆ




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here