Friday 9th, May 2025
canara news

ಅಪಾರ್ಟ್ ಮೆಂಟ್ ನ 7ನೇ ಅಂತಸ್ತಿನಿಂದ ಬಿದ್ದು ಮಗು ಸಾವು

Published On : 06 May 2017   |  Reported By : Canaranews Network


ಮಂಗಳೂರು: ಒಂದೂವರೆ ವರ್ಷದ ಮಗುವೊಂದು ಅಪಾರ್ಟ್ ಮೆಂಟ್ ನ 7ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಮಂಗಳೂರಿನ ಜೆಪ್ಪುವಿನಲ್ಲಿ ನೆಡದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೃತಪಟ್ಟ ಮಗುವನ್ನು ಇಮ್ರಾನ್ ಹುಸೇನ್ ಎಂಬವರ ಪುತ್ರ ಮುಹಮ್ಮದ್ ಶಾನ್ ಎಂದು ಗುರುತಿಸಲಾಗಿದೆ.

ಜೆಪ್ಪುವಿನಲ್ಲಿರುವ ವಸತಿ ಸಮುಚ್ಚಯದ ಏಳನೇ ಅಂತಸ್ತಿನ ಅಪಾರ್ಟ್ಮೆಂಟ್ ವೊಂದರಲ್ಲಿ ಇಮ್ರಾನ್ ದಂಪತಿ ವಾಸವಾಗಿದ್ದು, ಸಂಜೆ ಸುಮಾರು ೪ ಗಂಟೆ ಹೊತ್ತಿಗೆ ಮಗು ಫ್ಲ್ಯಾಟ್ ನ ಗ್ಲಾಲರಿ ಕಡೆಗೆ ಕುರ್ಚಿ ತಂದು ನಿಂತಿದ್ದಂತೆಯೇ ಆಕಸ್ಮಿಕವಾಗಿ ಕೆಳಗೆ ಬಿದ್ದಿದೆ.ಈ ಸಂದರ್ಭದ್ಲಲಿ ಮಗುವಿನ ತಾಯಿ ಒಳಗಿದ್ದು, ಈ ದುರ್ಘಟನೆ ಅವರ ಗಮನಕ್ಕೆ ಬಂದಿರಲಿಲ್ಲ. ತದನಂತರ ಈ ವಿಚಾರ ತಿಳಿದ ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಗು ಮೃತ ಪಟ್ಟಿರುವವುದಾಗಿ ವೈದ್ಯರು ದೃಢೀಕರಿಸಿದ್ದಾರೆ. ಮಗುವಿನ ತಂದೆ ವಿದೇಶದಲ್ಲಿದ್ದು, ಅವರು ಗುರುವಾರ ಮನೆಗೆ ಮರಳಲಿದ್ದು, ಬಳಿಕ ಅಂತ್ಯಕ್ರಿಯೆ ನೆರವೇರಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here