Friday 9th, May 2025
canara news

ಶ್ರೀಮಂತ ದೇವಸ್ಥಾನಗಳ ಪಟ್ಟಿಯಲ್ಲಿ ನಂ. 1 ಸ್ಥಾನದತ್ತ ಕುಕ್ಕೆ ಸುಬ್ರಹ್ಮಣ್ಯ

Published On : 07 May 2017   |  Reported By : Canaranews Network


ಮಂಗಳೂರು: ಮುಜುರಾಯಿ ಇಲಾಖೆ ಅಡಿಯಲ್ಲಿ ಬರುವ ಅತೀ ಹೆಚ್ಚು ಆದಾಯ ಗಳಿಸುವ ದೇವಸ್ಥಾನಗಳಲ್ಲಿ ಈ ವರ್ಷವೂ ನಂಬರ್ ವನ್ ಪಟ್ಟ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪಾಲಾಗುವ ಸಾಧ್ಯತೆ ಇದೆ. 2016-17ನೇ ಆರ್ಥಿಕ ವರ್ಷದಲ್ಲಿ ಈ ದೇವಸ್ಥಾನ ಬರೋಬ್ಬರಿ 89.65 ಕೋಟಿ ರೂಪಾಯಿ ಆದಾಯ ಗಳಿಸಿದೆ. ಇದೇ ವೇಳೆ ದೇವಸ್ಥಾನದ ಹಣದಲ್ಲಿ 36.02 ಕೋಟಿ ಖರ್ಚಾಗಿದೆ.ಹತ್ತು ವರ್ಷ ಹಿಂದಕ್ಕೆ ಹೋಲಿಸಿದರೆ ಅಂದರೆ 2006-07ರಲ್ಲಿ ದೇವಸ್ಥಾನ ಕೇವಲ 19.76 ಕೋಟಿ ಆದಾಯ ಪಡೆದಿತ್ತು.

ಇದೀಗ ದೇವಸ್ಥಾನದ ಆದಾಯ 10 ವರ್ಷಗಳಲ್ಲಿ ನಾಲ್ಕು ಪಟ್ಟು ಏರಿಕೆಯಾಗಿದೆ. 2007-08ರಲ್ಲಿ ದೇವಸ್ಥಾನ 24.44 ಕೋಟಿ ಆದಾಯ ಪಡೆಯುವ ಮೂಲಕ ರಾಜ್ಯದ ನಂಬರ್ ವನ್ ದೇವಸ್ಥಾನವಾಗಿ ಮೂಡಿ ಬಂದಿತ್ತು. ಅಲ್ಲಿಂದ ಈ ಸ್ಥಾನವನ್ನು ಕುಕ್ಕೆ ಸುಬ್ರಹ್ಮಣ್ಯ ನಿರಂತರವಾಗಿ ಕಾಪಾಡುತ್ತಾ ಬಂದಿದೆ.ಹಾಗೆ ನೋಡಿದರೆ ದೇವಸ್ಥಾನದ ಆದಾಯ ಈ ವರ್ಷ ಹೇಳಿಕೊಳ್ಳುವಷ್ಟು ಏರಿಕೆಯಾಗಿಲ್ಲ. ಬಹುಶಃ ಅಪನಗದೀಕರಣ ಕುಕ್ಕೆ ದೇವಸ್ಥಾನದ ಮೇಲೆಯೂ ಪರಿಣಾಮ ಬೀರಿರುವ ಸಾಧ್ಯತೆ ಇದೆ. 2013-14ರಲ್ಲಿ ದೇವಸ್ಥಾನ 68 ಕೋಟಿ ಆದಾಯ ಗಳಿಸಿತ್ತು.

ಅದೇ 2014-15ರಲ್ಲಿ ಇದು 77.6 ಕೋಟಿಗೆ ಏರಿಕೆಯಾಗಿತ್ತು. 2015-16ರ ಹೊತ್ತಿಗೆ ಇದು 88ರ ಗಡಿ ಮುಟ್ಟಿತ್ತು. ಇದೇ ಏರಿಕೆಯಲ್ಲಿ ಸಾಗಿದ್ದರೆ ಈ ಬಾರಿ 100 ಕೋಟಿ ಆಸುಪಾಗೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯ ಮುಟ್ಟಬೇಕಾಗಿತ್ತು. ಆದರೆ ಹಾಗಾಗಿಲ್ಲ. ಯಾವ ಯಾವ ಮೂಲಗಳಿಂದ ಎಷ್ಟೆಷ್ಟು 2016-17ನೇ ವರ್ಷದಲ್ಲಿ ಕೃಷಿಕರು ನೀಡಿದ ಬೆಳೆಗಳಿಂದ ದೇವಸ್ಥಾನಕ್ಕೆ 2.12 ಕೋಟಿ ಆದಾಯ ಬಂದಿದ್ದರೆ, ಕಟ್ಟಡಗಳ ಬಾಡಿಗೆಯಿಂದ 44 ಲಕ್ಷ ರೂಪಾಯಿ ಆದಾಯ ಸಿಕ್ಕಿದೆ. ಇನ್ನು ಹರಕೆಗಳಿಂದ ದೇವಸ್ಥಾನ 1.68 ಕೋಟಿ ಆದಾಯ ಪಡೆದಿದ್ದರೆ,

ಹುಂಡಿಯಲ್ಲಿ 17.65 ಕೋಟಿ ಹಣ ಸಂಗ್ರಹವಾಗಿದೆ. ಸೇವೆಗಳಿಂದ ಮತ್ತು ಪ್ರಸಾದ ಮಾರಾಟದಿಂದ 38.24 ಕೋಟಿ ಹಾಗೂ ಕೆಲವು ಅನುದಾನಗಳಿಂದ 1.22 ಲಕ್ಷ ಆದಾಯ ಪಡೆದುಕೊಂಡಿದೆ. ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಮತ್ತು ಆಶ್ಲೇಷ ಬಲಿ ಪೂಜೆ ವಿಶೇಷವಾಗಿದ್ದು ಖ್ಯಾತ ಬಾಲಿವುಡ್ ತಾರೆಗಳು, ಕ್ರಿಕೆಟ್ ಆಟಗಾರರೆಲ್ಲಾ ಇಲ್ಲಿಗೆ ಬಂದು ಈ ಸೇವೆ ನೆರವೇರಿಸಿದ್ದಾರೆ. ಕಳೆದೊಂದು ವರ್ಷದಲ್ಲಿ ಪೂಜೆ ಸೇವೆಗಳಿಂದಲೇ ದೇವಸ್ಥಾನ 30.56 ಕೋಟಿ ಆದಾಯ ಬಂದಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here