Friday 9th, May 2025
canara news

ಬಾರ್ಕೂರು ಹನೆಹಳ್ಳಿ ಗ್ರಾಮದಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ದೇವರ ಸನ್ನಿಧಿಯಲ್ಲಿ ವಿಧಿವತ್ತಾಗಿ ನೆರವೇರಿದ ನಾಗೇಶ್ವರ ದೇವರ ಪ್ರತಿಷ್ಠಾಪನಾ ವಾರ್ಷಿಕೋತ್ಸವ

Published On : 09 May 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.08: ಕರ್ನಾಟಕ ರಾಜ್ಯದ ಮೂಲ ಜನಾಂಗದಲ್ಲೊಂದಾದ ಪ್ರತಿಷ್ಠಿತ ಭಂಡಾರಿ ಸಮುದಾಯವು ತನ್ನ ಕಲದೇವರು ಆಗಿಸಿ ಆರಾಧಿಸಿಕೊಂಡು ಬಂದಿರುವ ಸುಮಾರು ಒಂಭತ್ತು ಶತಮಾನಗಳ ಇತಿಹಾಸವುಳ್ಳ ಉಡುಪಿ ಜಿಲ್ಲೆಯ ಬ್ರಹ್ಮಾವರ ಸನಿಹದ ಬಾರ್ಕೂರು ಹನೆಹಳ್ಳಿ ಗ್ರಾಮದಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ವಾರ್ಷಿಕ ಪ್ರತಿಷ್ಠಾಪನಾ ವರ್ಧಂತ್ಯುತ್ಸ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಉತ್ಸವ ಮುಂಬಯಿ ಸಮಿತಿ ಸಾರಥ್ಯದಲ್ಲಿ ದಿನಪೂರ್ತಿಯಾಗಿ ಧಾರ್ಮಿಕ ಕೈಂಕರ್ಯಗಳೊಂದಿಗೆ ವಿಧಿವತ್ತಾಗಿ ನೆರವೇರಿಸಲ್ಪಟ್ಟಿತು.

 

ಸ್ವಸ್ತಿ ಶ್ರೀ ಹೇಮಲಂಬಿ ನಾಮ ಸಂವತ್ಸರದ ಮೇಷ ಮಾಸ ದಿನ 25 ಸಲುವ ವೈಶಾಖ ಶುದ್ಧನೇ ಶುಭದಿನವಾದ ಇಂದಿಲ್ಲಿ ಸೋಮವಾರ ಕಚ್ಚೂರು ಶ್ರೀ ನಾಗೇಶ್ವರ ದೇವರ ದಿವ್ಯ ಸನ್ನಿಧಿಯಲ್ಲಿ ನಾಡಿನ ಬಹುತೇಕ ಭಂಡಾರಿ ಬಂಧುಗಳ ಸಮಾಕ್ಷಮದಲ್ಲಿ ವಾರ್ಷಿಕ ಕಾಲಮಾಸದಂತೆ ಆಚರಿಸಲ್ಪಟ್ಟ ನಾಗೇಶ್ವರ ದೇವರ ಪ್ರತಿಷ್ಠಾಪನಾ ವಾರ್ಷಿಕೋತ್ಸವ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಬಿ.ಆರ್ ವಿಶ್ವನಾಥ ಶಾಸ್ತ್ರಿ ಅವರ ನೇತೃತ್ವದಲ್ಲಿ ಸಂಪನ್ನ ನೆರವೇರಿಸಲ್ಪಟ್ಟಿತು.

ಬ್ರಹ್ಮಶ್ರೀ ವೇದಮೂರ್ತಿ ಶ್ರೀ ಶ್ರೀಕಾಂತ ಸಾಮಗ ಮತ್ತು ಸಹ ಪುರೋಹಿತರು ಪ್ರಾತಃ ಕಾಲ ಶ್ರೀ ನಾಗೇಶ್ವರ ದೇವರು ಮತ್ತು ಪರಿವಾರ ದೇವತೆಗಳಿಗೆ ಸೀಯಾಳಾಭಿಷೇಕ, ನಂತರ ಶ್ರೀ ರುದ್ರದೇವರಿಗೆ ಫಲನ್ಯಾಸ ತೋರಣ, ಪುಣ್ಯಾಹ ಶುದ್ಧಿ, 49 ಕಲಶಾಧಿವಾಸ ಸಹಿತ ಆದಿವಾಸ ಹೋಮ, ಶತರುದ್ರಾಭಿಷೇಕ, ಪ್ರಸನ್ನ ಪೂಜಾರಾಧನೆ, ಶ್ರೀ ಮಹಾಗಣಪತಿ ದೇವರಿಗೆ ನವ ಕಲಶ, 12 ನಾರಿಕೇಶ ಗಣಯಾಗ, ಪೂರ್ವಕ ಪ್ರಸನ್ನ ಪೂಜೆ, ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ನವ ಕಲಶ ದುರ್ಗಾ ಹೋಮ, ಶ್ರೀ ನಾಗದೇವರ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ, ಪೂರ್ವಕ ಪ್ರಾಯಶ್ಚಿತ, ಆಶ್ಲೇಷಾಬಲಿ ಸೇವೆ, ಪ್ರಸನ್ನ ಪೂಜೆ, ಮಧ್ಯಾಹ್ನ ಶ್ರೀ ನಾಗೇಶ್ವರ ದೇವರಿಗೆ ವಿಶೇಷ ಪೂಜೆ, ಮಹಾ ಮಂಗಳಾರತಿ,ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ, ದೀಪಾರಾಧನೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ ಇತ್ಯಾದಿ ಧಾರ್ಮಿಕ ಕೈಂಕರ್ಯಗಳು ನೆರವೇರಿಸಿ ನೆರೆದ ಭಕ್ತಾಭಿಮಾನಿಗಳಿಗೆ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು. ಭಂಡಾರಿ ಸೇವಾ ಸಮಿತಿ ಮುಂಬಯಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಭಂಡಾರಿ ಪುತ್ತೂರು (ಪುಣೆ) ಮತ್ತು ಸುಲೋಚನಾ ಬಿ.ಭಂಡಾರಿ ದಂಪತಿ ಪೂಜಾಧಿಗಳಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ ಹಾಗೂ ಕಚ್ಚೂರು ಶ್ರೀ ನಾಗೇಶ್ವರ ಸೇವಾ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ, ಪ್ರಧಾನ ಕಾರ್ಯದರ್ಶಿ ಸೋಮಶೇಖರ ಎಂ.ಭಂಡಾರಿ, ಕೋಶಾಧಿಕಾರಿ ಬನ್ನಂಜೆ ಸಂಜೀವ ಭಂಡಾರಿ, ಪ್ರಧಾನ ಕಾರ್ಯದರ್ಶಿ ಯು.ಸತೀಶ್ ಭಂಡಾರಿ, ಭಂಡಾರಿ ಮಹಾ ಮಂಡಲದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಪ್ರಧಾನ ಕಾರ್ಯದರ್ಶಿ ಯು.ಸತೀಶ್ ಭಂಡಾರಿ, ವಾರ್ಷಿಕೋತ್ಸವ ಸಮಿತಿ ಮುಂಬಯಿ ಅಧ್ಯಕ್ಷ ಡಾ| ಅತ್ತೂರು ಶಿವರಾಮ ಕೆ. ಭಂಡಾರಿ, ಉಪಾಧ್ಯಕ್ಷ ಕೇಶವ ಟಿ.ಭಂಡಾರಿ, ಪ್ರಧಾನ ಕಾರ್ಯದರ್ಶಿ ನ್ಯಾ| ಆರ್.ಎಂ.ಭಂಡಾರಿ, ಕೋಶಾಧಿಕಾರಿ ರಮೇಶ ವಿ.ಭಂಡಾರಿ, ಜೊತೆ ಕಾರ್ಯದರ್ಶಿ ರಂಜಿತ್ ಸೀತಾರಾಮ ಭಂಡಾರಿ, ಜೊತೆ ಕೋಶಾಧಿಕಾರಿ ಶಶಿಧರ್ ಭಂಡಾರಿ ಹಾಗೂ ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಶೇಖರ್ ಎಸ್.ಭಂಡಾರಿ ಮತ್ತಿತರ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ, ಸೇವಾ ಟ್ರಸ್ಟ್, ಮಹಾ ಮಂಡಲ, ಉತ್ಸವದ ವಿವಿಧ ಉಪಸಮಿತಿಗಳ ಮುಖ್ಯಸ್ಥರು ಮತ್ತು ಸದಸ್ಯರು, ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಪಿ.ಭಂಡಾರಿ ಥಾಣೆ ಮತ್ತಿತರರು ಉಪಸ್ಥಿತರಿದ್ದರು.

ಸಾಂಸ್ಕøತಿಕ ಕಾರ್ಯಕ್ರಮವಾಗಿ ಮುಂಬಯಿ ಅಲ್ಲಿನ ಭಂಡಾರಿ ಬಂಧುಗಳು ವೈವಿಧ್ಯಮಯ ಸಾಂಸ್ಕøತಿಕ ಹಾಗೂ ಮನೋರಂಜನಾ ಕಾರ್ಯಕ್ರಮ ಮತ್ತು `ಮಲ್ತಿನಕ್ಲು ತಿನ್ಪೆರ್' ತುಳು ನಾಟಕ ಪ್ರಸ್ತುತ ಪಡಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here