Friday 9th, May 2025
canara news

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನಿಂದ ಪೇಜಾವರ ಮಠದಲ್ಲಿ ವೈಶಾಖ ಶುದ್ಧ ಚತುರ್ದಶಿ ಪುಣ್ಯದಿನ ಶ್ರೀ ನರಸಿಂಹ ಜಯಂತಿ ಆಚರಣೆ

Published On : 11 May 2017   |  Reported By : Ronida Mumbai


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಮೇ.10: ಸಾಯನ್ ಅಲ್ಲಿನ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ (ಗೋಕುಲ) ಕಳೆದ ಮಂಗಳವಾರ ವೈಶಾಖ ಶುದ್ಧ ಚತುರ್ದಶಿ ಪುಣ್ಯದಿನದಂದು ಬಿಎಸ್‍ಕೆಬಿ ಅಸೋಸಿಯೇಶನ್ ಹಾಗೂ ಪೇಜಾವರ ಮಠದ ಸಹಯೋಗದೊಂದಿಗೆ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದ ಸಭಾಗೃಹದಲ್ಲಿ ಅದ್ದೂರಿಯಾಗಿ ಶ್ರೀ ನರಸಿಂಹ ಜಯಂತಿಯನ್ನು ಆಚರಿಸಿತು.

ಕಾರ್ಯಕ್ರಮದಲ್ಲಿ ಅಲಂಕೃತ ಮಂಟಪದಲ್ಲಿ ಶ್ರೀ ನರಸಿಂಹ ಪ್ರತಿಷ್ಠೆ, ಕಲ್ಪೋಕ್ತ ಪೂಜೆ, ಅರ್ಚನೆ ಮುಂತಾದ ಧಾರ್ಮಿಕ ವಿಧಿಗಳನ್ನು ಪೇಜಾವರ ಮಠದ ಮುಖ್ಯ ವ್ಯವಸ್ಥಾಪಕ ವಿದ್ವಾನ್ ರಾಮದಾಸ ಉಪಾಧ್ಯಾಯ ರೆಂಜಾಳ ಅವರು ವಿದ್ಯುಕ್ತವಾಗಿ ನಡೆಸಿಕೊಟ್ಟರು.

ಬಿಎಸ್‍ಕೆಬಿ ಅಸೋಸಿಯೇಶನ್‍ನ ಗೌರವ ಕಾರ್ಯದರ್ಶಿ ಅನಂತ ಪದ್ಮನಾಭ ಪೆÇೀತಿ ಹಾಗೂ ಡಾ| ಸಹನಾ ಪೆÇೀತಿ ದಂಪತಿ ಪೂಜಾಧಿಗಳ ಯಜಮಾನ ಸ್ಥಾನವನ್ನು ವಹಿಸಿದ್ದರು.

ಗೋಕುಲ ಶ್ರೀ ಕೃಷ್ಣ ಸನ್ನಿಧಿಯಲ್ಲಿ ವರ್ಷಂಪ್ರತೀ ಆಚರಿಸಲ್ಪಡುವ ನರಸಿಂಹ ಜಯಂತಿಯುಸದ್ಯ ಗೋಕುಲ ಕಟ್ಟಡದ ಪುನರ್ ನಿರ್ಮಾಣದ ಹಂತದಲ್ಲಿರುವುದರಿಂದ,ಪೇಜಾವರ ಮಠ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಆಚರಿಸಲ್ಪಟ್ಟಿದೆ. ಪೇಜಾವರ ಶ್ರೀಗಳ ಅನುಗ್ರಹದಿಂದ ಹಾಗೂ ಎಲ್ಲಾ ಸದಸ್ಯ ಬಾಂಧವರ ಪೂರ್ಣ ಸಹಕಾರದಿಂದ ಅತಿ ಶೀಘ್ರದಲ್ಲಿ ಗೋಕುಲದ ಭವ್ಯ ಕಟ್ಟದಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠೆಯಾಗುವಂತೆ ಭಗವಂತ ಅನುಗ್ರಹಿಸಲಿ ಎಂದು ಉಪಾಧ್ಯಾಯರು ಪ್ರಾರ್ಥನೆಯಲ್ಲಿ ಆಶಯ ವ್ಯಕ್ತ ಪಡಿಸಿದರು.

ಬಿಎಸ್‍ಕೆಬಿ ಅಸೋಸಿಯೇಶನ್‍ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಅವರು ಗೋಕುಲ ಪುನರ್ ನಿರ್ಮಾಣದ ಪ್ರಗತಿಯ ಬಗ್ಗೆ ವಿವರಿಸುತ್ತಾ ನರಸಿಂಹ ಜಯಂತಿಯನ್ನು ಪೇಜಾವರ ಮಠದಲ್ಲಿ ಆಚರಿಸಲು ಸಹಕರಿಸಿದ ಮಠದ ಆಡಳಿತ ಮಂಡಳಿಗೆ ಆಭಾರ ವ್ಯಕ್ತ ಪಡಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗೋಕುಲ ಭಜನಾ ಮಂಡಳಿ ಹಾಗೂ ಮಧ್ವೇಶ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನೆರವೇರಿತು. ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಉಪಹಾರದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here