Friday 9th, May 2025
canara news

ದ್ವಿತೀಯ ಪಿ.ಯು. ಫಲಿತಾಂಶ; ದ.ಕ.ಯಲ್ಲಿ 8 ವಿದ್ಯಾರ್ಥಿಗಳು ಟಾಪರ್ ಪಟ್ಟಿಯಲ್ಲಿ

Published On : 12 May 2017   |  Reported By : Canaranews Network   |  Pic On: photo credit: DHNS


ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಕಳೆದ ಬಾರಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದ ದ.ಕ. ಜಿಲ್ಲೆ ಈ ಸಲ ಎರಡನೇ ಸ್ಥಾನ ಗಳಿಸಿದೆ. ಜತೆಗೆ ವಿಜ್ಞಾನ ವಿಭಾಗದಲ್ಲಿ ಮೊದಲ ಹಾಗೂ ತೃತೀಯ ಸ್ಥಾನ, ವಾಣಿಜ್ಯ ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಸುವ ಮೂಲಕ ದ.ಕ. ಮುಂಚೂಣಿಯಲ್ಲಿದೆ. ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಪ.ಪೂ. ಕಾಲೇಜಿನ ಸೃಜನಾ ಎನ್. 596 ಅಂಕಗಳೊಂದಿಗೆ ಮೊದಲ ಸ್ಥಾನಗಳಿಸಿದ್ದಾರೆ. ಆಳ್ವಾಸ್ ಪ.ಪೂ. ಕಾಲೇಜಿನ ಮಹಾಗುಂಡಯ್ಯ ವಸ್ತ್ರದ್, ನಿಹಾರಿಕಾ ಎಚ್.ಆರ್. ಮತ್ತು ಎಸ್ಡಿಎಂ ಪ.ಪೂ. ಕಾಲೇಜಿನ ಪ್ರಣವ್ ಭಟ್ ತಲಾ 594 ಅಂಕಗಳೊಂದಿಗೆ 3ನೇ ಸ್ಥಾನ ಗಳಿಸಿದ್ದಾರೆ. ಇನ್ನೊಂದೆಡೆ ವಾಣಿಜ್ಯ ವಿಭಾಗದಲ್ಲಿಯೂ ದ.ಕ. ಪ್ರಥಮ ಸ್ಥಾನ ಪಡೆದಿದ್ದು, ಅಳಿಕೆ ಸತ್ಯಸಾಯಿ ಲೋಕಸೇವಾ ಪಪೂ ಕಾಲೇಜಿನ ಸಾಯಿ ಸಮರ್ಥ್ 595 ಅಂಕ ಪಡೆಯುವುದರೊಂದಿಗೆ ಮುಂಚೂಣಿಯಲ್ಲಿದ್ದಾರೆ.

ಹಾಗೆಯೇ ಆಳ್ವಾಸ್ ಪಪೂ ಕಾಲೇಜಿನ ವಿ. ಸ್ಪಂದನಾ 594 ಅಂಕದೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೇ ಆಳ್ವಾಸ್ ಪಪೂ ಕಾಲೇಜಿನ ಅನಿತಾ ಕೃಷ್ಣಾನಂದ ಹೆಗ್ಡೆ ಹಾಗೂ ಮಂಗಳೂರಿನ ಸಂತ ಅಲೋಶಿಯಸ್ ಪಪೂ ಕಾಲೇಜಿನ ದರ್ಶನ್ ಪಿ. ತಲಾ 593 ಅಂಕಗಳೊಂದಿಗೆ 3ನೇ ಸ್ಥಾನ ಗಳಿಸಿದ್ದಾರೆ.

ಶೇಕಡಾವಾರು ಫಲಿತಾಂಶದಲ್ಲೂ ಕುಸಿತ: ದ.ಕ. ಜಿಲ್ಲೆಯಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 38,568 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 33,578 ಮಂದಿ ಉತ್ತೀರ್ಣರಾಗಿ ಶೇ. 89.92 ಫಲಿತಾಂಶ ಬಂದಿದೆ. ಖಾಸಗಿಯಾಗಿ ಕುಳಿತ ವಿದ್ಯಾರ್ಥಿಗಳ ಸಂಖ್ಯೆ 4,002 ಆಗಿದ್ದು, ಈ ಪೈಕಿ 1620 ಮಂದಿ ಉತ್ತೀರ್ಣರಾಗಿ ಶೇ. 40.18 ಫಲಿತಾಂಶ ದೊರಕಿದೆ. 184 ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 43 ಮಂದಿ ಉತ್ತೀರ್ಣರಾಗಿದ್ದಾರೆ.

ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ದ.ಕ. ಜಿಲ್ಲೆಯ ಒಟ್ಟು 8 ವಿದ್ಯಾರ್ಥಿಗಳು ಅಗ್ರ 10 ಮಂದಿಯಲ್ಲಿ ಸ್ಥಾನ ಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕಳೆದ ಮೂರು ವರ್ಷಗಳಿಂದ ಸತತವಾಗಿ ದ.ಕ. ಜಿಲ್ಲೆಯು ಪಿಯು ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿತ್ತು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here