Thursday 3rd, July 2025
canara news

ಎಸ್ ಎಸ್ ಎಲ್ ಸಿ ಫಲಿತಾಂಶ; ದ.ಕ.ಜಿಲ್ಲೆ ಸ್ಥಾನದಲ್ಲಿ ಏರಿಕೆ; ಶೇಕಾಡವಾರು ಫಲಿತಾಂಶದಲ್ಲಿ ಕುಸಿತ

Published On : 12 May 2017   |  Reported By : Canaranews Network


ಮಂಗಳೂರು: ದ.ಕ.ಜಿಲ್ಲೆ ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದೆ.ಆದರೆ, ಶೇಕಡವಾರು ಫಲಿತಾಂಶದಲ್ಲಿ ಸುಮಾರು ಶೇ.೮ ರಷ್ಠು ಕುಸಿತ ಕಂಡಿದೆ. ಪ್ರಸಕ್ತ ಸಾಲಿನಲ್ಲಿ ಶೇ.೮೨.೩೯ ಅಂಕಗಳನ್ನು ಪಡೆದಿದ್ದು, ಕಳೆದ ಬಾರಿ ಶೇ.೮೮.೧೮ ಅಂಕಗಳೊಂದಿಗೆ ತೃತೀಯ ಸ್ಥಾನಿಯಾಗಿ ದ.ಕ.ಜಿಲ್ಲೆ ರಾಜ್ಯದಲ್ಲಿ ಗಮನ ಸೆಳೆದಿತ್ತು. ಪ್ರಸಕ್ತ ಸಾಲಿನಲ್ಲಿ ೬೨೫ ಅಂಕಗಳೊಂದಿಗೆ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಹಂಚಿಕೊಂಡ ಮೂವರಲ್ಲಿ ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಕಡಬದ ಸೈಂಟ್ ಜೋಕಿಮ್ಸ್ ಹೈಸ್ಕೋಲ್ ನ ವಿದ್ಯಾರ್ಥಿ ಪೂರ್ಣಾನಂದ ಎಚ್. ಹಾಗೂ ೬೨೪ ಅಂಕಗಳೊಂದಿಗೆ ದ್ವಿತೀಯ ಸ್ಥಾನಿಗಳಾಗಿ ಹೊರ ಹೊಮ್ಮಿರುವವರಲ್ಲಿ ಸೈಂಟ್ ಆಗ್ನೆಸ್ ನ ಆಂಗ್ಲ ಮಾಧ್ಯಮ ಶಾಲೆಯ ಜಯನಿ ಆರ್. ನಾಥ್ ಸೇರಿರುವುದು ಹೆಮ್ಮೆಯ ಸಂಗತಿ.

೨೦೧೪-೧೫ರಲ್ಲಿ ದ.ಕ. ಜಿಲ್ಲೆ ೮ನೇ ಸ್ಥಾನದಲ್ಲಿತ್ತು. ೨೦೧೩-೧೪ರಲ್ಲಿ ೨೯ನೇ ಸ್ಥಾನಕ್ಕೆ ಕುಸಿದಿತ್ತು. ೨೦೧೨-೧೩ರಲ್ಲಿ ೫ನೇ ಸ್ಥಾನದಲ್ಲಿದ್ದು, ೨೦೧೧-೧೨ರಲ್ಲಿ ೭ನೇ ಸ್ಥಾನದಲ್ಲಿ ಹಾಘೂ ೨೦೧೧-೧೨ರಲ್ಲಿ ಜಿಲ್ಲೆ ೨೧ನೇ ಸ್ಥಾನದಲ್ಲಿತ್ತು




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here