Saturday 27th, July 2024
canara news

ರಂಗಭೂಮಿಯಿಂದ ಸಮಾಜಮುಖಿ ಸಂದೇಶ ಸಾಧ್ಯ : ವಜ್ರದೇಹಿ ಸ್ವಾಮಿ

Published On : 13 May 2017   |  Reported By : Rons Bantwal


ಗುರುಪುರ : ``ಒಂದು ಕಲೆ(ನಾಟಕ) ಸಮಾಜದ ಆಗು-ಹೋಗುಗಳ ಅನಾವರಣ ಮಾಡುವುದರೊಂದಿಗೆ, ಮನೋರಂಜನೆ ಮತ್ತು ಸಾಮಾಜಿಕ ಸಂದೇಶ ರವಾನಿಸುವಂತಿರಬೇಕು. ಗುರುಪುರದಲ್ಲಿ ಹುಟ್ಟಿಕೊಂಡಿರುವ ಈ ಚೊಚ್ಚಲ ರಂಗತಂಡ ನಿರಂತರ ಇಂತಹ ಸಮಾಜಮುಖಿ ಕೆಲಸ ಮಾಡವಂತಾಗಲಿ'' ಎಂದು `ಗುರುದಯ' ತಂಡದ ರಂಗ್‍ದ ಕಲಾವಿದೆರ್ ಗುರುಪುರ ಇವರ `ದಾಯೆ ಬದ್ಕೆರಾಪುಜಿ' ನಾಟಕದ ಪ್ರಥಮ ಪ್ರದರ್ಶನಕ್ಕೆ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಶುಭ ಆಶಿಸಿದರು.

ಶ್ರೀ ನರಸಿಂಹ ಜಯಂತಿ ಮಹೋತ್ಸವದಂಗವಾಗಿ ಮಠದಲ್ಲಿ ಮೊನ್ನೆ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ರಾತ್ರಿ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಈ ನಾಟಕ ಪ್ರದರ್ಶನಗೊಂಡಿತು. ನಾಟಕ ಪ್ರದರ್ಶನ ದೀಪ ಬೆಳಗಿಸುವ ಸಭಾ ಕಾರ್ಯಕ್ರಮದೊಂದಿಗೆ ನೆರವೇರಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಷ್ಣು ಕಾಮತ್, ರಾಜಶೇಖರಾನಂದ ಸ್ವಾಮೀಜಿ, ಯುವ ಉದ್ಯಮಿ ಪ್ರಶಾಂತ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಕೆ ಆರ್ ಶೆಟ್ಟಿ, ಉದ್ಯಮಿ ವಿಜಯ ಶೆಟ್ಟಿ ಉಪಸ್ಥಿತರಿದ್ದರು. ಮರುದಿನ ಮೂಲ್ಕಿ ಬಪ್ಪನಾಡು ಮೇಳದವರಿಂದ `ಬನತ ಬಬ್ಬರ್ಯೆ' ಯಕ್ಷಗಾನ ಸಾದರಗೊಂಡಿತು.

ದಾಯೆ ಬದ್ಕೆರಾಪುಚಿ ? : ರಚನೆ : ಪ್ರಶಾಂತ್ ಗುರುಪುರ
ದಿಗ್ದರ್ಶನ : ಪಚ್ಚು ಕೈಕಂಬ ಸಾಹಿತ್ಯ : ಶ್ರೀ ಜಿ ಎಸ್ ಗುರುಪುರ
ಮಾರ್ಗದರ್ಶನ : ಲ. ಕಿಶೋರ್ ಡಿ ಶೆಟ್ಟಿ/ನವೀನ್ ಶೆಟ್ಟಿ ಅಳಕೆ

ಇದೊಂದು ಹಾಸ್ಯಪ್ರಧಾನ ಸಾಮಾಜಿಕ ನಾಟಕ. ಪ್ರಥಮ ಪ್ರದರ್ಶನದಲ್ಲೇ ತಂಡ ಯುವ ಕಲಾವಿದರ ಜನಮೆಚ್ಚುಗೆ ಗಳಿಸಿದ್ದಾರೆ. ಕೆಲವು ಕಲಾವಿದರಂತೂ ಯಾವುದೇ ವೃತ್ತಿಪರ ಕಲಾವಿದರಿಂಗಿಂತ ತಾವೇನೂ ಕಡಿಮೆ ಇಲ್ಲ ಎಂಬಂತೆ ಅಭಿನಯಸಿದ್ದಾರೆ. ಮಹಿಳಾ ಕಲಾವಿದರ ನಟನೆ ಹೇಳಿಕೊಳ್ಳುವಂತಿತ್ತು. ಹಾಸ್ಯದ ಮೂಲಕ ಸಾಮಾಜಿಕ ಸನ್ನಿವೇಶವೊಂದನ್ನು ಈ ನಾಟಕ ಅನಾವರಣಗೊಳಿಸಿದ ಬಗೆ ಅರ್ಥಪೂರ್ಣವಾಗಿತ್ತು. ನಾಟಕದ ಕೇಂದ್ರ ಬಿಂದುವಾಗಿರುವ ಖಳನಟ(ಡೀಸಿ-ಪಚ್ಚು ಕೈಕಂಬ) ವ್ಯಕ್ತಿತ್ವ ಖಂಡಿಸಿ, ನ್ಯಾಯಕ್ಕಾಗಿ ಹೋರಾಟ ನಡೆಸುವ ಕತೆ ಪೆÇೀಣಿಸಿರುವುದು ಉತ್ತಮವಾಗಿದ್ದರೂ, ಜಿಲ್ಲಾಧಿಕಾರಿಯನ್ನೇ ಖಳನಾಯಕನನ್ನಾಗಿ ಬಿಂಬಿಸಿರುವುದು ಸಮಂಜಸವೆನಿಸದು. `ಕಾನೂನಿಗೆ ನಾವೆಲ್ಲರೂ ತಲೆಬಾಗಲೇಬೇಕು' ಎಂಬ ನಿಲುವಿನಡಿ ಡೀಸಿ ವ್ಯಕ್ತಿತ್ವಕ್ಕೆ ಖಳನಟನ ರೂಪುರೇಷೆ ಸಮಧಾನಕರವಾಗಿಲ್ಲ. ಹಾಗಾಗಿ ನಾಟಕದ ಡೀಸಿ ಪಾತ್ರ `ನಾಯಕತ್ವ' ಅಥವಾ `ಯಜಮಾನಿಕೆ'ಯ ಪಾತ್ರವಾಗಿ ಪರಿವರ್ತನೆಗೊಂಡರೆ ಉತ್ತಮವೆಂಬುದು ಒಂದು ಸಾಮಾನ್ಯ ಅಭಿಪ್ರಾಯ. ಪ್ರಥಮ ಪ್ರಯೋಗದಲ್ಲೇ ತಂಡ ನಟ-ನಟಿಯರೆಲ್ಲರೂ ಉತ್ತಮ ಸಂಭಾಷಣೆ, ಅಭಿನಯದ ಮೂಲಕ ಜನಮನ ಗೆದ್ದಿದ್ದಾರೆ. ಕುಡುಕನ(ಉತ್ಸವ್ ವಾಮಂಜೂರು) ಪಾತ್ರ ನಾಟಕದುದ್ದಕ್ಕೂ ಹಾಸ್ಯ ಚಟಾಕಿಯಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರೆ, ಅತ್ಯಾಚಾರಕ್ಕೊಳಗಾದ ಬಾಲಕಿಯ ತಂದೆಯ (ಚಂದಪ್ಪ- ಶ್ರೀ ಜಿ ಎಸ್ ಗುರುಪುರ) ಪಾತ್ರ ಸೈ ಎನಿಸಿತ್ತು. ನಾಟಕದ ಮಧ್ಯೆ ನುಸುಳಿಕೊಂಡಿರುವ `ಸ್ವಚ್ಛ ಭಾರತ' ಕಲ್ಪನೆ ಉತ್ತಮವಾಗಿದ್ದರೂ, ಈ ದೃಶ್ಯವನ್ನು ನಾಟಕದಲ್ಲಿ ಸೂಕ್ತ ಸಂದರ್ಭಾನುಸಾರಿ ಪೆÇೀಣಿಸಿದಂತೆ ಕಂಡು ಬಂದಿಲ್ಲ. ಈ ಸನ್ನಿವೇಶ ನಾಟಕಕ್ಕೆ ಎಲ್ಲಿಂದಲೋ ಹಾರಿ ಬಂದಂತಹ ಅನುಭವವಾಗುತ್ತದೆ. ಕಾಮತರ ಮಗ(ಸುಕೇಶ್ ಗುರುಪುರ), ಪಾನ್ವಾಲಾ(ಪ್ರಶಾಂತ್ ಗುರುಪುರ), ಡೀಸಿ ಪತ್ನಿ ವಕೀಲೆ (ಶೋಭಾ ಶೆಟ್ಟಿ), ಕಥಾನಾಯಕ (ಭರತ್-ಅಭಿ ಮಂಗಳೂರು), ಕಥಾ ನಾಯಕಿ(ಪ್ರೀತಿ-ಯಕ್ಷಿತಾ) ಅಭಿನಯ ಹೇಳಿಕೊಳ್ಳುವಂತಿ ತ್ತು. ನಾಟಕದ ಒಂದಷ್ಟು ಸುದೀರ್ಘವೆನ್ನಲಾದ ಕೆಲವು ದೃಶ್ಯಗಳಿಗೆ ಕತ್ತರಿಪ್ರಯೋಗದೊಂದಿಗೆ ನಾಟಕ ಅವಧಿ ಮೊಟಕುಗೊಳಿಸಿ, ಸಂಭಾಷಣೆಯಲ್ಲಿ ಇನ್ನಷ್ಟು ಗಟ್ಟಿತನಕ್ಕೆ ಒತ್ತು ನೀಡಿದಲ್ಲಿ ಇದೊಂದು ಅದ್ಭುತ ಕಾಣಿಕೆಯಾಗಿ ಎಲ್ಲೆಡೆ ಮೆಚ್ಚುಗೆ ಗಳಿಸುವುದರಲ್ಲಿ ಸಂದೇಹವೇ ಇಲ್ಲ ಮತ್ತು ವೃತ್ತಿಪರ ತಂಡವಾಗಿ `ರಂಗ್‍ದ ಕಲಾವಿದೆರ್' ಯಶಸ್ವಿಯಾಗುವುದರೊಂದಿಗೆ ರಂಗಭೂಮಿ ಕ್ಷೇತ್ರದಲ್ಲಿ ಗುರುಪುರದ ಹೆಸರು ದಾಖಲಾಗುವುದರಲ್ಲಿ ಸಂದೇಹವೇ ಇಲ್ಲ. ಇದು ಹೊಸ ತಂಡಕ್ಕಿರುವ ಭವಿಷ್ಯದ ಸವಾಲಾಗಿದೆ.

 




More News

ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ

Comment Here