Friday 9th, May 2025
canara news

ಮೇ.23-29: ಮುಂಬಯಿ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ವಿಲ್ಸನ್ ಕಯ್ಯಾರ್ ರಚಿತ ಸ್ತ್ರೀ ಸಂವೇದನೆಗಳ `ಫೆಮಿನೈನ್ ನರೆಟೀವ್ಸ್' ವರ್ಣಚಿತ್ರಗಳ ಪ್ರದರ್ಶನ

Published On : 22 May 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.14: ಪ್ರಸಿದ್ಧ ಯುವ ಕಲಾವಿದ ವಿಲ್ಸನ್ ಡಿ'ಸೋಜಾ ಕಯ್ಯಾರ್ ಇವರ ಸ್ತ್ರೀ ಸಂವೇದನೆಗಳ ``ಫೆಮಿನೈನ್ ನರೆಟೀವ್ಸ್'' ವರ್ಣಚಿತ್ರಗಳ ಪ್ರದರ್ಶನ ಸಪ್ತಾಹ ಇದೇ 2017 ಮೇ.23 ರಿಂದ 29ರ ಸೋಮವಾರದ ವರೆಗೆ ಮುಂಬಯಿ ವಿಟಿ (ಫೋರ್ಟ್) ಅಲ್ಲಿರುವ ವಿಶ್ವ ಪ್ರಸಿದ್ಧ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ.

ಮಹಿಳಾ ಸಂವೇದನೆಗಳನ್ನು ಗಾಢ ವರ್ಣಗಳಲ್ಲಿ ಮತ್ತು ಅಮೂರ್ತ ಗೆರೆಗಳಲ್ಲಿ ಹಿಡಿದಿಡುವ ಕಲೆ ಕರತಲಾಮಲಕ ಆಗಿರುವ ವಿಲ್ಸನ್ ಕಲ್ಪನೆ ಮತ್ತು ವಾಸ್ತವತೆಯನ್ನು ಬೆರೆಸಿ ಕುಂಚದಲ್ಲಿ ಮೂಡಿಸುತ್ತಾರೆ. ಪ್ರಕೃತಿ, ಸ್ತ್ರೀ ಸಮಾನತೆ, ಮಾತೃತ್ವ, ಹರೆಯ, ಸ್ತ್ರೀಯ ದೈನಂದಿನ ಬದುಕು, ಆಕೆಯ ಕಷ್ಟ ಸುಖ ಇತ್ಯಾದಿಗಳನ್ನು ಕಲೆಯ ರೂಪದಲ್ಲಿ ಕ್ಯಾನ್ವಾಸಿನಲ್ಲಿ ಅರಳಿಸುತ್ತಾರೆ.

ಮಹಾಲಸಾ ಕಲಾ ವಿದ್ಯಾಲಯ ಮಂಗಳೂರು ಇದರ ಹಳೆವಿದ್ಯಾಥಿರ್ü ಆಗಿರುವ ವಿಲ್ಸನ್ ಇವರು ಕಲೆಯ ಬಗ್ಗೆ ಎಂಎಫ್‍ಎ ಪದವಿಯನ್ನು ಪಡೆದಿದ್ದಾರೆ. ಇದೀಗಲೇ ಮಂಗಳೂರು, ಉಡುಪಿ, ಕೇರಳ, ಹೈದರಾಬಾದ್, ಮುಂಬಯಿ, ಮನಾಲಿ, ದೆಹಲಿ, ಕೊಲ್ಕತ್ತಾ ನಗರಗಳಲ್ಲಿ ಹಾಗೂ ಅಬುಧಾಬಿ ಗಲ್ಫ್ ರಾಷ್ಟ್ರದಲ್ಲೂ ತನ್ನ ಚಿತ್ರ ಪ್ರದರ್ಶನಗಳನ್ನು ನಡೆಸಿ ಜನಮನ್ನಣೆ ಪಡೆದಿದ್ದಾರೆ.

ಮುಂಬಯಿ ಮಹಾನಗರದಲ್ಲಿನ ಸರ್ವ ಚಿತ್ರಕಲಾ ಪ್ರೇಮಿಗಳು, ಸಂಘ-ಸಂಸ್ಥೆಗಳ ಮುಖ್ಯಸ್ಥರು, ಸದಸ್ಯರು, ಕಲಾ ಪೆÇೀಷಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಚಿತ್ರ ಪ್ರದರ್ಶನ ವಿಕ್ಷೀಸಿ ಸಹಕರಿಸುವಂತೆ ವಿಲ್ಸನ್ ಕಯ್ಯಾರ್ (09448726770) ಈ ಮೂಲಕ ಸರ್ವರಿಗೂ ಆಹ್ವಾನಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here