Friday 9th, May 2025
canara news

ಮೇ.17: ಗುಜರಾತ್ ಬರೂಚ್‍ನ ಅಂಕ್ಲೇಶ್ವರ್‍ನಲ್ಲಿ ಭಾರತ್ ಬ್ಯಾಂಕ್‍ನ 101ನೇ ಶಾಖೆ ಸೇವಾರಂಭ

Published On : 14 May 2017   |  Reported By : Rons Bantwal


ಮುಂಬಯಿ, ಮೇ.14: ಭಾರತ ರಾಷ್ಟ್ರದ ಸಹಕಾರಿ ರಂಗದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾಗಿ ಪುರಸ್ಕಾರ ಪಡೆದ ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ತನ್ನ ಗುಜರಾತ್ ರಾಜ್ಯದಲ್ಲಿನÀ 5ನೇ ಶಾಖೆಯಾಗಿಸಿ ಬ್ಯಾಂಕ್‍ನ 101ನೇ ಶಾಖೆಯನ್ನು ಇದೇ ಮೇ.17ನೇ ಬುಧವಾರ ಬೆಳಿಗ್ಗೆ ಗುಜರಾತ್ ರಾಜ್ಯದ ಬರೂಚ್ ಜಿಲ್ಲೆಯ ಪಿರಮನ್ ಅಲ್ಲಿನ ಅಂಕ್ಲೇಶ್ವರ್ ನಗರದ ಓಂಕಾರ್ ಎರಡನೇ ಕಟ್ಟಡದ ತಳಮಹಡಿಯಲ್ಲಿ ಶುಭಾರಂಭ ಗೊಳಿಸಲಿದೆ ಎಂದು ಬ್ಯಾಂಕ್‍ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ತಿಳಿಸಿದ್ದಾರೆ.

       

C. R Mulky                                   Jaya C.Suvarna.                     Rohini J.Salyan

ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರು ನೂತನ ಶಾಖೆಯನ್ನು ಸೇವಾರ್ಪಣೆ ಮಾಡಲಿದ್ದು, ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್ ಬ್ಯಾಂಕ್‍ನ ವಿವಿಧ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ಆ ಪ್ರಯುಕ್ತ ಮುಂಜಾನೆಯಿಂದ ವಾಸ್ತುಪೂಜೆ, ವಾಸ್ತು ಬಲಿ, ವಾಸ್ತುಹೋಮ, ಗಣಹೋಮ, ಲಕ್ಷ್ಮೀಸತ್ಯನಾರಾಯಣ ಪೂಜೆ, ದ್ವಾರಪ್ರವೇಶ ಪೂಜೆ ಇತ್ಯಾದಿ ಪೂಜಾಧಿಗಳನ್ನು ನೆರವೇರಿಸಲಾಗುವುದು.

ಗುಜರಾತ್ ಇಂಡಸ್ಟ್ರೀಯಲ್ ಡೆವಲಪ್‍ಮೆಂಟ್ ಕಾಪೆರ್Çೀರೇಶನ್ (ಜಿಐಡಿಸಿ) ಮೂಲಕ ಏಷಿಯಾ ಖಂಡದ ಅತೀ ದೊಡ್ಡ ಔದ್ಯೋಗಿಕ ಕೇಂದ್ರವೆಣಿಸಿರುವ ಅಂಕ್ಲೇಶ್ವರ್ ನಗರವು ಸ್ವಾಮಿ ನಾರಾಯಣ ಮತ್ತು ಶ್ರೀ ಅಂಕ್ಲೇಶ್ವರ್ ತೀರ್ಥ ಮಂದಿರಗಳಿಗೂ ಪ್ರಸಿದ್ಧಿ ಪಡೆದ ನಾಡು. ಆದಿನಾಥ, ಮಹಾವೀರ ಸ್ವಾಮಿ, ಪಾರ್ಶ್ವನಾಥ, ನೇಮಿನಾಥ, ಭಗವನ್ ಚಿಂತಾಮಣಿ, ದಿಗಂಬರ ಜೈನ ಮಂದಿರಗಳ ಮೂಲಕ ಅಧ್ಯಾತ್ಮಿಕ ಕೇಂದ್ರದ ಇಂತಹ ಬರೂಚ್ ಅಂಕ್ಲೇಶ್ವರ್ ಅವಳಿ ಪಟ್ಟಣ ಪ್ರದೇಶದಲ್ಲಿ ಭಾರತ್ ಬ್ಯಾಂಕ್ ಶಾಖೆ ತೆರೆಯಲು ಅಭಿಮಾನವೆಣಿಸುತ್ತಿದೆ. ಫಾರ್ಮಸ್ಯುಟಿಕಲ್ಸ್, ಪೆಸ್ಟಿಸಿಡ್ಸ್, ಕೆಮಿಕಲ್ ಮತ್ತು ಪೈಂಟ್ ಸೇರಿದಂತೆ ಹಲವಾರು ಉತ್ಫನ್ನಗಳ ಸುಮಾರು 5,000 ವಸಾಹತು ಕೇಂದ್ರವಾದ ಅಂಕ್ಲೇಶ್ವರ್‍ನಲ್ಲಿ ಬ್ಯಾಂಕ್‍ನ ಶಾಖೆ ಸ್ಥಾಪಿಸಲು ನಮ್ಮ ಗ್ರಾಹಕರನೇಕರ ಒಲವು ಇದೀಗ ನನಸಾಗುತ್ತಿದೆ.

ಬ್ಯಾಂಕ್‍ನ ಸರ್ವ ಗ್ರಾಹಕರು, ಷೇರುದಾರರು, ನೂತನ ಗ್ರಾಹಕರು ಮತ್ತು ಹಿತೈಷಿಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ನೂತನ ಶಾಖೆಯ ಸರ್ವೋನ್ನತಿಗೆ ಶುಭ ಹಾರೈಸುವಂತೆ ಬ್ಯಾಂಕ್‍ನ ಡಿಜಿಎಂ ಹಾಗೂ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ ಮತ್ತು ಶಾಖೆಯ ಮುಖ್ಯಸ್ಥ ಜಯಪ್ರಸಾದ್ ಎನ್.ಬಂಗೇರ ಈ ಮೂಲಕ ತಿಳಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here