Friday 9th, May 2025
canara news

ಪ್ರತಿಭಾನ್ವಿತ ಕಲಾವಿದೆ ವೈಷ್ಣವಿ ಶೆಟ್ಟಿಗೆ ಪಿತೃ ವಿಯೋಗ

Published On : 15 May 2017   |  Reported By : Rons Bantwal


ಮುಂಬಯಿ, ಮೇ.15: ಮಹಾನಗರದ ಪ್ರತಿಭಾನ್ವಿತ ಕಲಾವಿದೆ ಬಾಲ ನಟಿ, ಅಭಿನವ ಕಲಾಭಾರತಿ ಬಿರುದಾಂಕಿತ ವೈಷ್ಣವಿ ಡಿ.ಶೆಟ್ಟಿ ಅವರ ತಂದೆಯವರಾದ ದಾಮೋದರ ಕೆ.ಶೆಟ್ಟಿ (56.) ಅವರು ಕಳೆದ ಭಾನುವಾರ (14.05.2017) ತಡರಾತ್ರಿ ನಿಧನರಾದರು.

ಮೂಲತ: ಉಡುಪಿ ಜಿಲ್ಲೆಯ ನಂದಿಕೂರು ಅಡ್ವೆ ಸನ್ನೊನಿ ನಿವಾಸಿ ಆಗಿದ್ದ ಮೃತರು ಮಹಾನಗರದಲ್ಲಿ ಉದ್ಯಮಿ ಆಗಿ ಶ್ರಮಿಸಿ ಅಂಧೇರಿ ಪೂರ್ವದ ಜೆ.ಬಿ ನಗರದ ಹೌಸಿಂಗ್ ಸೊಸೈಟಿಯೊಂದರಲ್ಲಿ ವಾಸವಾಗಿದ್ದರು. ಪತ್ನಿ ಕೇಸರಿ ಡಿ.ಶೆಟ್ಟಿ ಮತ್ತು ಇಬ್ಬರು ಸುತ್ರಿಯರಾದ ತೃಪ್ತಿ ಡಿ.ಶೆಟ್ಟಿ ಮತ್ತು ವೈಷ್ಣವಿ ಡಿ.ಶೆಟ್ಟಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದಿಲ್ಲಿ ಸೋಮವಾರ ಸಂಜೆ ಅಂಧೇರಿ ಪೂರ್ವದ ಪಾರ್ಸಿವಾಡ ಸ್ಮಶಾನಭೂಮಿಯಲ್ಲಿ ನೆರವೇರಿದ್ದು ಅಪಾರ ಸಂಖ್ಯೆಯ ಕಲಾಭಿಮಾನಿಗಳು, ಅನೇಕ ಗಣ್ಯರು, ನೂರಾರು ಜನರು ಪಾಲ್ಗೊಂಡು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು. ದಾಮೋದರ್ ಶೆಟ್ಟಿ ನಿಧನಕ್ಕೆ ನಗರದ ನೂರಾರು ಗಣ್ಯರು ಸಂತಾಪ ಸೂಚಿಸಿ ಮೃತರ ಕುಟುಂಬಕ್ಕೆ ಸಾಂತ್ವನ ನೀಡಿದ್ದಾರೆ.

ಸರಳ ಸ್ವಭಾವ, ಮಿತಭಾಷಿಯಾಗಿದ್ದ ದಾಮೋದರ ಶೆಟ್ಟಿ ಸದಾ ಹಸನ್ಮುಖಿ, ಕರುಣಾಮಯಿ ಆಗಿದ್ದು ಮಕ್ಕಳಿಬ್ಬರ ಮೇಲೆ ಅಪಾರ ಕಾಳಜಿ, ಅಭಿಮಾನ ಹೊಂದಿದ್ದ ಇವರು ತಮ್ಮಿಬ್ಬರ ಅಪ್ರತಿಮ ಪ್ರತಿಭಾನ್ವಿತ ಕಲಾವಿದೆಯರ ಪ್ರತಿಭೆಗೆ ಮನ್ನಣೆ ವೇದಿಕೆ ದೊರೆಸಿ ಕೊಡುವಲ್ಲಿ ಮತ್ತು ಸುಪುತ್ರಿಯರಿರ್ವರೂ ಸದಾ ಮೆರೆಯುವಂತಾಗಲು ಅವರನ್ನು ಪೆÇ್ರೀತ್ಸಹಿಸುತ್ತಿದ್ದರು. ತೃಪ್ತಿ ಮತ್ತು ವೈಷ್ಣವಿ ಅವರಲ್ಲಿನ ಅತ್ಯಾದ್ಭುತ ಕೌಶಲ್ಯತೆ ಗುರುತಿಸಿ ಕೊಳ್ಳಲು ಕೇಸರಿ ದಾಮೋದರ ಶೆಟ್ಟಿ ದಂಪತಿ ಹಗಲಿರುಳು ಎನ್ನದೆ ಎಲ್ಲೆಲ್ಲೂ ಸುತ್ತಾಡಿ ಮಕ್ಕಳ ಭವ್ಯ ಭವಿಷ್ಯಕ್ಕಾಗಿ ಅನ್ಯೋನ್ಯತೆಯಿಂದ ಶ್ರಮಿಸುತ್ತಾ ಅದೆಷ್ಟೋ ಪಾಲಕರಿಗೆ ಮಾದರಿ ದಂಪತಿಯಾಗಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here