Friday 9th, May 2025
canara news

ಹನಿಟ್ರ್ಯಾಪ್ ಗೆ ಸಿಲುಕಿ 14 ಲಕ್ಷ ಕಳೆದುಕೊಂಡ ವೈದ್ಯ

Published On : 17 May 2017   |  Reported By : Canaranews Network


ಮಂಗಳೂರು: ಹನಿಟ್ರ್ಯಾಪ್ ಮೂಲಕ ಯುವತಿಯ ಆಸೆ ತೋರಿಸಿ ಮಂಗಳೂರಿನ ಪ್ರಮುಖ ಆಸ್ಪತ್ರೆಯೊಂದರ ವೈದ್ಯರೊಬ್ಬರಿಂದ ಬರೋಬ್ಬರಿ 14 ಲಕ್ಷ ರೂ. ಲಪಟಾಯಿಸಿದ ಹೈಟೆಕ್ ವೇಶ್ಯಾವಾಟಿಕೆ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.ಸೋಮೇಶ್ವರದ ನಾರಾಯಣ ಸಾಲ್ಯಾನ್, ಉಳ್ಳಾಲದ ಮಹಮ್ಮದ್ ರಂಜಿ ಹಾಗೂ ಸಾದಿಕ್ ಹನಿಟ್ರ್ಯಾಪ್ ನಡೆಸಿದ ಪ್ರಮುಖ ಆರೋಪಿಗಳು.

ಈ ಪ್ರಕರಣವನ್ನು ಬೇಧಿಸಿರುವ ಕದ್ರಿ ಠಾಣೆ ಪೊಲೀಸರು, ಕೇಸು ದಾಖಲಿಸಿಕೊಂಡು ಈ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಈ ಹನಿಟ್ರಾಪ್ ಜಾಲಕ್ಕೆ ಸಾಥ್ ನೀಡಿರುವ ರಾಕೇಶ್, ಆತನ ಇಬ್ಬರು ಗೆಳೆಯರು, ಹನಿಟ್ರ್ಯಾಪ್ ಗೆ ಕೈಜೋಡಿಸಿದ್ದ ಯುವತಿ ತಲೆ ಮರೆಸಿಕೊಂಡಿದ್ದಾರೆ. ಮೋಸ ಹೋದ ವೈದ್ಯರು ನೀಡಿದ ದೂರಿನ ಮೇರೆಗೆ ಕದ್ರಿ ಪೊಲೀಸರು ಈ ಜಾಲವನ್ನು ಬೇಧಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here