Friday 9th, May 2025
canara news

ಬ್ರಾಹ್ಮಣ ಪರಿಷತ್ ವಾರ್ಷಿಕ ಅಧಿವೇಶನ

Published On : 17 May 2017   |  Reported By : Canaranews Network


ಕುಂದಾಪುರ: ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತನ ಕುಂಭಾಶಿ ವಲಯದ ವಾರ್ಷಿಕ ಆಧಿವೇಶನವು ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯ ವಠಾರದಲ್ಲಿ ನಡೆಯಿತು. ವಲಾಯಾಧ್ಯಕ್ಷ ಬಿ. ಗಣಪತಿ ಮಂಜ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಹಿತಿ ಬೆಳಗೊಡು ರಮೇಶ್ ಭಟ್ ಮಾತನಾಡಿ ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ನಮ್ಮ ಆಚಾರ-ವಿಚಾರಗಳ ಮಾಹಿತಿ ನೀಡಬೇಕು. ಹಿರಿಯರು ಅವನ್ನು ಪಾಲಿಸಿದರೆ ಕಿರಿಯರೂ ಕಲಿಯುತ್ತಾರೆ. ಇದರಿಂದ ನಮ್ಮ ಹಿರಿಮೆಯನ್ನರಿತು ಸ್ವಂತ ಶಕ್ತಿಯಿಂದ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.

ಹಿರಿಯ ವಿದ್ವಾಂಸ ವೇದಮೂರ್ತಿ ಸೀತಾರಾಮ ಅಡಿಗರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜಿಲ್ಲಾ ಬ್ರಾಹ್ಮಣ ಪರಿಷತನ ಪ್ರಧಾನ ಕಾರ್ಯದರ್ಶಿ ಕೆ. ಗಣೇಶ ರಾವ್, ತಾಲೂಕು ಅಧ್ಯಕ್ಷ ಟಿ.ಕೆ.ಎಂ ಭಟ್, ಮಹಿಳಾ ವೇದಿಕೆ ಅಧ್ಯಕ್ಷೆ ಪ್ರಪ್ಪುಲ್ಲಾ ಎನ್. ಭಟ್, ವಲಯ ಮಹಿಳಾ ವೇದಿಕೆ ಅಧ್ಯಕ್ಷೆ ಮನೊರಮಾ ಭಟ್ ಉಪಸ್ಥಿತರಿದ್ದರು.

ರಾಮಚಂದ್ರ ಉಪಾದ್ಯ ಸ್ವಾಗತಿಸಿದರು, ವಲಯ ಕಾರ್ಯದರ್ಶಿ ಶ್ರೀಧರ ಭಟ್ ವಾರ್ಷಿಕ ವರದಿ ವಾಚಿಸಿದರು. ಅಧಿವೇಶನದ ಅಂಗವಾಗಿ ಸದಸ್ಯರುಗಳಿಗೆ ಶಾಂತ ಗಣೇಶ ನೃತತ್ವದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಜಗದೀಶ ರಾವ್ ಕುಂಭಾಶಿ ಕಾರ್ಯಕ್ರಮ ನಿರೂಪಿಸಿ, ರಾಘವೇಂದ್ರ ಪುರಾಣಿಕ್ ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here