Friday 9th, May 2025
canara news

ಗಂಗೊಳ್ಳಿ ಕೊಸೆಸಾಂವ್ ಮಾತೆಯ ನವೀಕ್ರತ ದೇವಾಲಯ ಬಿಶಪರಿಂದ ಲೊಕಾರ್ಪಣೆ

Published On : 18 May 2017   |  Reported By : Bernard J Costa


ಕುಂದಾಪುರ, ಮೇ:18. ಬಹಳ ಪುರಾತನ ಇಗರ್ಜಿಗಳಲೊಂದಾದ ಕೊಸೆಸಾಂವ್ ಮಾತೆಯ ನವೀಕ್ರತ ದೇವಾಲಯವನ್ನು ಉಡುಪಿ ಧರ್ಮ ಪ್ರಾಂತ್ಯದ ಬಿಶಪ್ ಅ|ವಂ|ಡಾ|ಜೆರಾಲ್ಡ್ ಲೋಬೊ ಆಶಿರ್ವದಿಸಿ ಉದ್ಘಾಟನೆ ಮಾಡಿ ಲೊಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಗುಲ್ಬರ್ಗ ಧರ್ಮ ಪ್ರಾಂತ್ಯದ ಬಿಶಪ್ ಅ|ವಂ|ಡಾ|ರೋಬರ್ಟ್ ಎಮ್. ಮಿರಾಂದ ಅವರಿಗೆ ಜೊತೆ ನೀಡಿದರು. ಈ ಸಂದರ್ಭದಲ್ಲಿ ವಲಯದ ಹಲವಾರು ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಅನೇಕ ಧರ್ಮಭಗಿನಿಯರು, ಮತ್ತು ಸುಮಾರು ಮೂರು ಸಾವಿರ ಭಕ್ತಾಧಿಗಳು ಹಾಜರಿದ್ದರು.

ವೀಶೇಷವಾದ ಪ್ರಾರ್ಥನಾ ವಿಧಿಗಳನ್ನು ನೆಡೆಸಿ ನವಿಕ್ರತ ದೇವಾಲಯವನ್ನು ಅ|ವಂ|ಡಾ|ಜೆರಾಲ್ಡ್ ಲೋಬೊ ಪವಿತ್ರ ಜಲದಿಂದ ದೇವಾಲಯವನ್ನು ಆಶಿರ್ವದಿಸಿ ಶುದ್ದಿಕರಿಸಿದರು. ನಂತರ ದಿವ್ಯ ಬಲಿಪೂಜೆಯನ್ನು ಅರ್ಪಿಸಲಾಯಿತು. ‘ಕ್ರೈಸ್ತರಿಗೆ ದೇವಾಲಯಗಳು ಸ್ವರ್ಗದ ದಾರಿಯಾಗಿದೆ, ಅದಕ್ಕಾಗಿ ಕ್ರೈಸ್ತರಿಗೆ ದೇವಾಲಯ ಅಂದರೆ ಪ್ರೀತಿಯ ತಾಣ. ದೇವ ಎಸುಕ್ರಿಸ್ತರು ಈ ಜಗತ್ತಿನಲ್ಲಿ ಹುಟ್ಟಿ ಬರಲಿಕ್ಕಾಗಿ ಪಾಪ ರಹಿತ ಜನ್ಮ ನೀಡಲು ಗುಣ ಸಂಪನ್ನೆಯಾದ, ಕನ್ಯೆ ಮೇರಿ ಮಾತೆಯನ್ನು ಆರಿಸಲಾಯಿತು, ಹಾಗೆ ಪಾಪ ರಹಿತ ಕನ್ಯೆಯ ಉದರದಲ್ಲಿ, ದೇವ ಏಸು ಕ್ರಿಸ್ತರು ಹುಟ್ಟಿದರು, ಹೀಗೆ ಕನ್ಯೆ ಮೇರಿ ಮಾತೆಯ ಗರ್ಬವು ದೇವ ಏಸು ಕ್ರಿಸ್ತರಿಗೆ ಮೊದಲ ದೇವಾಲವಾಯಿತು, ಕೊಸೆಸಾಂವ್ ಮಾತೆ ಅಂದರೆ ಪಾಪ ರಹಿತ ಕನ್ಯಾ ಮಾತೆಯಾಗಿದ್ದಾಳೆ, 400 ದಿವಸಗಳಲ್ಲಿ ಈ ದೇವಾಲಯ ನವಿಕ್ರತಯಾಗಿದೆಯಂದರೆ, ಮಾತೆಯ ಪವಾಡವೇ ಸರಿಯೆಂದು ಅವರು ಜನರಿಗೆ ಸಂದೇಶದ ಜೊತೆ ಶುಭಾಶಯ ಕೋರಿದರು.

ವೇದಿಕೆ ಕಾರ್ಯಕ್ರಮದಲ್ಲಿ ಅ|ವಂ|ಡಾ|ಜೆರಾಲ್ಡ್ ಲೋಬೊ ಅಧ್ಯಕ್ಷತೆ ವಹಿಸಿ ‘ಏನೀದೊ ದೇವ, ಏನೀದೊ ದೇವಾಲಯ..!’ ಎಂದು ಉದ್ಘರಿಸುತ್ತಾ, ಕ್ರೈಸ್ತರ ಆರಂಭ ಮತ್ತು ಅಂತ್ಯವೂ ಆಗುವ ಸ್ಥಳವು ಈ ಪವಿತ್ರ ದೇವಾಲಯವಾಗಳಾಗಿವೆ, ದೇವರು ಜನರ ಮಧ್ಯೆ, ನಮ್ಮ ನಡುವೆ ವಾಸಿಸುತ್ತಾನೆ, ಈ ಸ್ಥಳದಲ್ಲಿ ಮಾತೆಯ ಮಹಿಮೆ ನೆಡೆಯುತ್ತಿದೆ, ನಿಮ್ಮ ಶ್ರಮ, ತ್ಯಾಗ, ದಾನಗಳಿಂದ ಈ ಭವ್ಯ ದೇವಾಲಯವೂ ಸಂಪೂರ್ಣವಾಗಿದೆ, ಧರ್ಮ ಕೇಂದ್ರದ ಗುರು ವಂ|ಆಲ್ಬರ್ಟ್ ಕ್ರಾಸ್ತಾ ಇವರು ನಿಮ್ಮ ಸಹಕಾರದಿಂದ ಈ ಯೋಜನೆಯನ್ನು ಸಾಕಾರಾಗೊಳಿಸಿದ್ದಾರೆ ಎಂದು ವಂ|ಆಲ್ಬರ್ಟ್ ಕ್ರಾಸ್ತಾ ಇವರನ್ನು ಧರ್ಮ ಪ್ರಾಂತ್ಯದ ಪರವಾಗಿ ಬಿಶಪರು ಸನ್ಮಾನಿಸಿದರು.

ಅತಿಥಿಗಳಾದ ಸಂಸದ ಒಸ್ಕರ್ ಫೆರ್ನಾಂಡಿಸ್, ಶಾಸಕ ಗೋಪಾಲ ಪೂಜಾರಿ, ಎಮ್.ಎಲ್.ಸಿ. ಐವನ್ ಡಿಸೋಜಾ, ಎಮ್.ಎಮ್.ಇಬ್ರಾಹಿಂ, ವಲಯ ಪ್ರಧಾನ ಧರ್ಮಗುರು ಅನೀಲ್ ಡಿಸೋಜ, ಗಂಗೊಳ್ಳಿಯ ಹಿಂದಿನ ಧರ್ಮಗುರು ವಂ|ಆಲ್ಪೊನ್ಸ್ ಡಿಲೀಮಾ ಇವರೆಲ್ಲರೂ ಶುಭ ಕೋರಿ ಭಾಷಣ ಮಾಡಿದರು.

ನವೀಕ್ರತ ಕಟ್ಟದ ಕಾಮಾಗಾರಿಕೆಯನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಟ್ಟ ರಾಯ್ ಕಾಸ್ಟೇಲಿನೊ ಮಂಗ್ಳೂರು, ವಂ|ಆಲ್ಪೊನ್ಸ್ ಡಿಲೀಮಾ, ಎಮ್.ಎಮ್.ಇಬ್ರಾಹಿಂ, ಗಂಗೊಳ್ಳಿ ಪಂಚಾಯತ್ ಆಡಳಿತಾಧಿಕಾರಿ ಸೀತಾರಾಮ್ ಶೆಟ್ಟಿ, ನವಿಕ್ರತ ಕಟ್ಟದ ಕಾಮಾಗಾರಿಕೆಗಾಗಿ ಕ್ರಮವಾಗಿ 20 ಲಕ್ಷ, 10 ಲಕ್ಷ, 5 ಲಕ್ಷ, 2 ಲಕ್ಷ 1 ಲಕ್ಷ ದಾನ ಕೊಟ್ಟವರಿಗೆ ಸನ್ಮಾನಿಸಲಾಯಿತು.

ಧರ್ಮ ಕೇಂದ್ರದ ಗುರು ವಂ|ಆಲ್ಬರ್ಟ್ ಕ್ರಾಸ್ತಾ ಸ್ವಾಗತಿಸಿದರು, ಉಪಾಧ್ಯಕ್ಷ ಜೆರಾಲ್ಡ್ ಕ್ರಾಸ್ತಾ ವಂದಿಸಿದರು. ಕಾರ್ಯದರ್ಶಿ ಪ್ರೀತಿ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಒವಿನ್ ರೆಬೆಲ್ಲೊ ಮತ್ತು ಲವೀಟಾ ಪಿಂಟೊ ಕಾರ್ಯಕ್ರಮವನ್ನು ನಿರೂಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here