Tuesday 27th, June 2017
canara news

ಮೇ.25: ಖಾರ್ ಪೂರ್ವದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯಿಂದ ಸದ್ಭಕ್ತರ ಸಾಮೂಹಿಕ ಶನೀಶ್ವರ ಗ್ರಂಥಪಾರಾಯಣ

Published On : 19 May 2017   |  Reported By : Rons Bantwal


ಮುಂಬಯಿ: ಮುಂಬಯಿ ಉಪನಗರದ ಖಾರ್ ಪೂರ್ವದಲ್ಲಿ ತುಳು ಕನ್ನಡಿಗರ ಸಂಚಾಲಕತ್ವದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ (ರಿ.) ಸಂಚಾಲಕತ್ವದಿಂದ ಸಾಯಿಬಾಬಾ ರಸ್ತೆಯಲ್ಲಿನ ಜವಹಾರ್‍ನಗರ್‍ನ ಪಹೇಲ್ವಾನ್ ಚಾಳ್‍ನಲ್ಲಿ ಕಳೆದ ಸುಮಾರು ಐದು ದಶಕಗಳಿಂದ ಸೇವಾ ನಿರತ ಸದ್ಯ ಸಾಯಿಧಾಮ್ ಬಿಲ್ಡಿಂಗ್‍ನಲ್ಲಿ ರೂಪಿತ ಶ್ರೀ ಶನಿಮಹಾತ್ಮ ಮಂದಿರದಲ್ಲಿ ಇದೇ ಬರುವ ಮೇ.25ನೇ ಗುರುವಾರ ಅಪರಾಹ್ನ 2.00 ಗಂಟೆಯಿಂದ ಸದ್ಭಕ್ತರ ಪರವಾಗಿ ಸಾಮೂಹಿಕ ಶನೀಶ್ವರ ಗ್ರಂಥಪಾರಾಯಣ ಜರುಗಿಸಲಾಗುವುದು.

ಕಲಿಯುಗದ ಆರಾಧ್ಯ ದೇವರೂ, ಕಷ್ಟಕಾರ್ಪಣ್ಯದಿಂದ ಬಳಳುತ್ತಿರುವ ಜನತೆಗೆ ತನ್ನ ಕಾರುಣ್ಯದೃಷ್ಠಿ ಎಂಬ ಶ್ರೀರಕ್ಷೆಯನ್ನಿತ್ತು ಕಾಪಾಡುವ ದಯಾಮಯಿಯೂ, ನವಗ್ರಹಶ್ರೇಷ್ಠನೂ ಆದ ಶ್ರೀ ಶನೈೀಶ್ವರನ ಜನ್ಮೋತ್ಸವದ ನಿಮಿತ್ತ ಅಂದು ಮಧ್ಯಾಹ್ನ 2.00 ಗಂಟೆಗೆ ಕಳಶ ಮುಹೂರ್ತ, ಸಂಜೆ 4.00 ಗಂಟೆ ತನಕ ಭಜನೆ, 4.00 ಗಂಟೆಯಿಂದ 7.00 ಗಂಟೆ ತನಕ ಶನಿ ಗ್ರಂಥಪಾರಾಯಣ, ರಾತ್ರಿ 8.00 ಗಂಟೆಗೆ ಮಂಗಳಾರತಿ ಬಳಿಕ ರಾತ್ರಿ 10.00 ಗಂಟೆ ತನಕ ತೀರ್ಥ ಪ್ರಸಾದ ವಿತರಣೆ ಜರಗಲಿದೆ.

ಆ ಪ್ರಯುಕ್ತ ಈ ಪುಣ್ಯಾಧಿ ಪೂಜಾ ಕಾರ್ಯಕ್ರಮದಲ್ಲಿ ಮಹಾನಗರದಲ್ಲಿನ ಸಮಸ್ತ ಭಕ್ತ ಮಹಾಶಯರು ಅತ್ಯಾಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಶನಿದೇವರ ಕೃಪೆಗೆ ಪಾತ್ರರಾಗಿ ತೀರ್ಥ ಪ್ರಸಾದ, ಶ್ರೀ ಶನೈೀಶ್ವರನ ಗಂಧ-ಪ್ರಸಾದವನ್ನು ಸ್ವೀಕರಿಸಬೇಕಾಗಿ ಸೇವಾ ಸಮಿತಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿಯ ಸದಸ್ಯರು, ವಿಶ್ವಸ್ಥ ಸದಸ್ಯರು, ಮಹಿಳಾ ಮಂಡಳಿಯ ಸದಸ್ಯೆಯರು, ಯುವ ವಿಭಾಗ, ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಮತ್ತು ಕಾರ್ಯಕ್ರಮ ಉಪ ಸಮಿತಿ ಸದಸ್ಯರು ಸೇರಿದಂತೆ ಇತರ ಪದಾಧಿಕಾರಿಗಳು, ಸಮಿತಿ ಸದಸ್ಯರ ಪರವಾಗಿ ಸೇವಾ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಯೋಗೆಶ್ ಕೆ.ಹೆಜ್ಮಾಡಿ ಈ ಮೂಲಕ ವಿನಂತಿಸಿದ್ದಾರೆ.
More News

ಅಮೆರಿಕಾದಲ್ಲಿ ಡಾ| ಹೆಗ್ಗಡೆಯವರಿಂದ ಎಸ್‍ಡಿಎಂಐಎಂಡಿಯ ಅಂತಾರಾಷ್ಟ್ರೀಯ ಮಾನ್ಯತಾ ಪ್ರಶಸ್ತಿ  ಸ್ವೀಕಾರ
ಅಮೆರಿಕಾದಲ್ಲಿ ಡಾ| ಹೆಗ್ಗಡೆಯವರಿಂದ ಎಸ್‍ಡಿಎಂಐಎಂಡಿಯ ಅಂತಾರಾಷ್ಟ್ರೀಯ ಮಾನ್ಯತಾ ಪ್ರಶಸ್ತಿ ಸ್ವೀಕಾರ
ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷರಾಗಿ ಜಯ ಸಿ.ಸುವರ್ಣ ಪುನರಾಯ್ಕೆ
ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷರಾಗಿ ಜಯ ಸಿ.ಸುವರ್ಣ ಪುನರಾಯ್ಕೆ
ಟೆನ್ನಿಸ್ ವಾಲಿಬಾಲ್ ಭಾರತಕ್ಕೆ ಚಿನ್ನದ ಪದಕ ತಂದ ಅಧಿತಿ ಸಾಲ್ಯಾನ್
ಟೆನ್ನಿಸ್ ವಾಲಿಬಾಲ್ ಭಾರತಕ್ಕೆ ಚಿನ್ನದ ಪದಕ ತಂದ ಅಧಿತಿ ಸಾಲ್ಯಾನ್

Comment Here