Saturday 21st, April 2018
canara news

ಆಸ್ಟ್ರೇಲಿಯಾದಲ್ಲಿ ಜರುಗಿದ13ನೇ ವಿಶ್ವಕನ್ನಡ ಸಂಸ್ಕøತಿ ಸಮ್ಮೇಳನ

Published On : 19 May 2017   |  Reported By : Rons Bantwal


ಕನ್ನಡವು ಶಾಂತಿ ಸಾರುವ ಭಾಷೆಯಾಗಿದೆ : ಡಾ| ಹಂಸಲೇಖ

ಮುಂಬಯಿ, (ಮೆಲ್ಬರ್ನ್-ಆಸ್ಟ್ರೇಲಿಯಾ), ಮೇ.19: ಯುನೈಟೆಡ್ ಕನ್ನಡ ಸಂಘ ಆಸ್ಟ್ರೇಲಿಯಾ ಮತ್ತು ಮಂಜುನಾಥ್ ಎಜ್ಯುಕೇಶನ್ ಟ್ರಸ್ಟ್ (ರಿ.) ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ (ಮೇ13 ಮತ್ತು 14) ರಂದು ಮೆಲ್ಬರ್ನ್ ಮತ್ತು ಸಿಡ್ನಿಯಲ್ಲಿ 13ನೇ ವಿಶ್ವಕನ್ನಡ ಸಂಸ್ಕøತಿ ಸಮ್ಮೇಳನ ಅದ್ದೂರಿಯಾಗಿ ಜರುಗಿತು. ಮೆಲ್ಬರ್ನ್‍ನ ಕಿಂಗ್‍ಸ್ಟನ್ ಆಟ್ರ್ಸ್ ಸೆಂಟರ್ ಆಡಿಟೋರಿಯಂನ ದಿ|ಡಾ.ಕೆ.ಎ ಅಶೋಕ್ ಪೈ ವೇದಿಕೆಯಲ್ಲಿ ನಡೆಸಲ್ಪಟ್ಟ ಸಮ್ಮೇಳನಾಧ್ಯಕ್ಷ ಡಾ| ಹಂಸಲೇಖ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಕನ್ನಡ ಶಾಂತಿ ಸಾರುವ ಭಾಷೆ. ಕನ್ನಡ ಭಾಷೆಯ ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ಎಲ್ಲಿಯೂ ನೀವು ಕೆರಳಿಸುವ ಸಾಹಿತ್ಯವನ್ನು ನೋಡಲಾರಿರಿ. ತಮ್ಮ ಸಾಹಿತ್ಯದ ಮೂಲಕ ದಾಸರು ಮತ್ತು ವಚನಕಾರರು ಉಲ್ಬಣಸ್ಥಿತಿಯನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸಾಮಾಜಿಕ ತಾರತಮ್ಯದಿಂದ ಜನ ರೋಸಿ ಹೋದಾಗ ಬಸವಣ್ಣ ಅವರು ತಮ್ಮ ವಚನಗಳ ಮೂಲಕ ಮೂಲಭೂತವಾದಿಗಳ ಮನಪರಿವರ್ತನೆ ಮಾಡುವಲ್ಲಿ ಯಶಸ್ವಿಯಾದರು. ಇದು ಬಸವಣ್ಣನವರು ಶಾಂತಿಗಾಗಿ ಮಾಡಿದ ಕ್ರಾಂತಿ ಎಂದರು.

ಮುಖ್ಯ ಅತಿಥಿüಯಾಗಿ ಉಪಸ್ಥಿತ ಚಿತ್ರನಟ ಡಾ| ಮುಖ್ಯಚಂದ್ರು ಮಾತನಾಡಿ ಇಂಗ್ಲೀಷ್ ಭಾಷೆ ಉಳಿದ ಭಾಷೆಗಳನ್ನು ಅಳಿವಿನಂಚಿಗೆ ತಳ್ಳುತ್ತಿದೆ ಎಂಬ ಅಳುಕು ಜಗತ್ತಿನಾದ್ಯಂತ ಇದೆ. ಆದರೆ ಅದು ಸತ್ಯವಲ್ಲ, ಕನ್ನಡ ಎಲ್ಲಾ ಕಾಲಘಟ್ಟಗಳಲ್ಲೂ ತನ್ನದೆ ಆದ ವಿಶಿಷ್ಟ ಛಾಪು ಮೂಡಿಸುತ್ತ ಇನ್ನಷ್ಟು ಸಂವೃದ್ಧವಾಗುತ್ತಿದೆ. ಅದಕ್ಕೆ ಕಾರಣ ಕರ್ನಾಟಕ ಸರಕಾರದ ಕಾರ್ಯಕ್ರಮಗಳು ಮತ್ತು ಕನ್ನಡ ಪರ ಸಂಘಟನೆಗಳು ಎಂದರು.

ಗೌರವ ಅತಿಥಿüಗಳಾಗಿ ಉಪಸ್ಥಿತ ವಿಶ್ವ ಕನ್ನಡ ಸಂಸ್ಕøತಿ ಸಮ್ಮೇಳನದ ಸಮಿತಿ ಗೌರವಾಧ್ಯಕ್ಷ ಡಾ| ಕಡಬಂ ರಮೇಶ್, ಆಗ್ನೇಯ ಪಧವೀದರರ ಕ್ಷೇತ್ರದ ವಿಧಾನ ಪರಿಷತ್ ಶಾಸಕ ಆರ್.ಚೌಡÀ ರೆಡ್ಡಿ, ಆಸ್ಟ್ರೇಲಿಯಾದ ಭಾರತೀಯ ಮೂಲದ ಸ್ಥಳೀಯ ರಾಜಕೀಯ ಮುಖಂಡರಾದ ಗಾಂಧೀ ಬೇವಿನಕೊಪ್ಪ ಮತ್ತು ಲಿಬರಲ್ ಪಾರ್ಟಿಯ ರಾಮ್‍ಪಾಲ್ ಜಾಗತಿಕ ಸಾಮರಸ್ಯದ ಕುರಿತು ಮಾತನಾಡಿದರು.

ವಿಶೇಷ ಆಮಂತ್ರಿರಾಗಿದ ಆಸ್ಟ್ರೇಲಿಯಾದ ಮಾನವ ಸೇವೆ ಖಾತೆ ಮಾನ್ಯ ಸಚಿವರಾದ ಅಲನ್ ಟುಡ್ಜ್ ಮಾತನಾಡಿ ನಮ್ಮದು ಬಹು ಸಂಸ್ಕøತಿಯ ದೇಶ, ಕಲೆ ಮತ್ತು ಸಾಹಿತ್ಯವನ್ನು ವಿಶೇಷ ಗೌರವದಿಂದ ಕಾಣುತ್ತೇವೆ. ಕನ್ನಡಿಗರ ಜಾಗತಿಕ ಸಮಾವೇಶ ನಮಗೆ ವಿಶೇಷ ಮತ್ತು ರೋಮಾಂಚನದ ಅನುಭವವನ್ನು
ನೀಡಿದೆ. ಈ ಸಾಂಸ್ಕøತಿಕ ಸಮಾರಂಭ ಎರಡÀು ದೇಶಗಳ ಭಾಂದವ್ಯಕ್ಕೆ ಕಿರುಕಾಣಿಕೆ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ನನಗನ್ನಿಸುತ್ತದೆ ಎಂದರು.

ವಿಕ್ಟೋರಿಯಾ ರಾಜ್ಯದ ಛಾಯ ಸಚಿವೆ ಇಗ್ನಾ ಪೆಲಿಟ್ ಸಂಸತ್ ಸದಸ್ಯರಾದ ಸ್ಟ್ಯಾಕೋಸ್ ಮತ್ತು ಗೌವ್ ಜುಲಿಯಾ ಫಿನ್ ಅವರು ಕನ್ನಡಿಗರು ಮತ್ತು ಭಾರತ ಮೂಲದವರ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದÀರು.

ವಿಶ್ವಕನ್ನಡ ಸಂಸ್ಕøತಿ ಸಮ್ಮೇಳನ ಸ್ಥಾಪಕ ಅಧ್ಯಕ್ಷ ಇಂ.ಕೆ.ಪಿ ಮಂಜುನಾಥ್ ಸಾಗರ್ ಪ್ರಾಸ್ತಾವಿಕ ಭಾಷಣಗೈದು ನಾವು ಹದಿಮೂರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಮ್ಮೇಳನಗಳು ಜಗತ್ತಿನಾದ್ಯಂತ ಇರುವ ಕನ್ನಡಿಗರನ್ನು ಒಂದು ವೇದಿಕೆಯಡಿ ತರುವ ಪ್ರಯತ್ನ ಯಶಸ್ವಿಯಾಗುತ್ತಿರುವುದಕ್ಕೆ ನಮಗೆ ಸಂತಸವಾಗುತ್ತಿದೆ. 13ನೇ ಸಮ್ಮೇಳನದ ವೇದಿಕೆಗೆ ಡಾ| ಕೆ.ಎ ಅಶೋಕ್ ಪೈ ಅವರ ಹೆಸರನ್ನಿಡಲು ಕಾರಣ ನಮ್ಮ ಪ್ರಥಮ ಸಮ್ಮೇಳನ 2004ರಲ್ಲಿ ಅಬುಧಾಬಿಯಲ್ಲಿ ನಡೆದಾಗ ಅವರು ಅದರ ಸರ್ವಾಧ್ಯಕ್ಷರಾಗಿದ್ದರು. ಅವರು ಸಮ್ಮೇಳನಕ್ಕೆ ಘನತೆ ಮತ್ತು ಗೌರವವನ್ನು ತಂದುಕೊಟ್ಟರು. ಇದು ಡಾ. ಕೆ.ಎ ಅಶೋಕ ಪೈಯವರ ಸಂಸ್ಮರಣೆ ಕೂಡ ಆಗಿದೆ ಎಂದರು.

ಸಾಹಿತಿ, ಕವಿ ಚಂದ್ರಶೇಖರ ಗಟ್ಟಿ ಬೋಳೂರು ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗಿತು. ಹೆಸರಾಂತ ಹಾಸ್ಯ ನಟರಾದ ಮಂಡ್ಯ ರಮೇಶ್ ಮತ್ತು ನವೀನ್ ಡಿ.ಪಡೀಲ್ ಮಂಗಳೂರು ಅವರು`ರಾತ್ರಿ ಶಾಲೆ' ಹಾಗೂ ಧಾರವಾಡದ ಮಹದೇವ ಸತ್ತಿಗೇರಿ ಅವರ `ಹಾಸ್ಯದ ಹೊನಲು' ಹಾಸ್ಯ ಪ್ರಸಂಗ ಪ್ರಸ್ತುತ ಪಡಿಸಿದರು. ಲತಾ ಹಂಸಲೇಖ, ಗೋ.ನಾ ಸ್ವಾಮಿ, ಗೀತಾ ಸತ್ಯಮೂರ್ತಿ ಮತ್ತು ಶಿವರಾಜ್ ಮಂಗಳೂರು ಅವರು `ಸ್ವರ ಸೌರಭ' ರಸಮಂಜರಿ ನೀಡಿದರು. ಪುಷ್ಕರ ಫರ್‍ಫಾರ್ಮಿಂಗ್ ಆಟ್ರ್ಸ್ ಬೆಂಗಳೂರು ಮತ್ತು ಕೈಲಾಸ ಕಲಾಧರ ಕಲ್ಚರಲ್ ಟ್ರಸ್ಟ್ ಬೆಂಗಳೂರು ತಂಡಗಳು ಭರತನಾಟ್ಯ ಮತ್ತು ಜನಪರ ನೃತ್ಯಗಳನ್ನು ಹಾಗೂ ರಂಗಪುತ್ಥಳಿ ಬೆಂಗಳೂರು ತಂಡದ ತೊಗಲು ಬೊಂಬೆಯಾಟ ಪ್ರದರ್ಶಿಸಿದರು.

ಯುನೈಟೆಡ್ ಕನ್ನಡ ಸಂಘದ ಅಧ್ಯಕ್ಷ ಮಂಜುನಾಥ್ ಎಂ.ಹೆಚ್ ಅತಿಥಿüಗಳನ್ನು ಸ್ವಾಗತಿಸಿ ಹೊರ ರಾಷ್ಟ್ರವೊಂದರ ಸಭಾಭವನದಲ್ಲೂ ಇಷ್ಟೊಂದು ಕನ್ನಡಿಗರು ಕಿಕ್ಕಿರಿದು ತುಂಬಿರುವುದು ಮುಂದೆ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಮಗೆ ಪ್ರೇರಣೆ ನೀಡಿದೆ ಎಂದರು. ಕು| ಎಸ್.ಸಿಂಧು ಕಾರ್ಯಕ್ರಮ ನಿರೂಪಿಸಿದರು. ಯುನೈಟೆಡ್ ಕನ್ನಡ ಸಂಘದ ಕಾರ್ಯದರ್ಶಿ ಸುರೇಶ್ ಗೌಡ ಧನ್ಯವದಿಸಿದರು.

 
More News

ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಭೇಟಿಗೈದ ಜೆ.ಆರ್ ಲೋಬೊ
ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಭೇಟಿಗೈದ ಜೆ.ಆರ್ ಲೋಬೊ
 ಬಂಟ್ವಾಳದಲ್ಲಿ ರಮಾನಾಥ ರೈ ನಾಮಪತ್ರ ಸಲ್ಲಿಕೆ
ಬಂಟ್ವಾಳದಲ್ಲಿ ರಮಾನಾಥ ರೈ ನಾಮಪತ್ರ ಸಲ್ಲಿಕೆ
ಬಿಷಪ್ ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರಿಂದ ಆಶೀರ್ವಾದ ಪಡೆದ ರಾಕೇಶ್ ಮಲ್ಲಿ
ಬಿಷಪ್ ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರಿಂದ ಆಶೀರ್ವಾದ ಪಡೆದ ರಾಕೇಶ್ ಮಲ್ಲಿ

Comment Here