Friday 9th, May 2025
canara news

ಕುಂದಾಪುರ ಚರ್ಚ್ ಉಪಾಧ್ಯಕ್ಷ – ಕುಟುಂಬ ಸಮೇತ ವೆಲಂಕಣಿಗೆ ತೆರಳಿ ಮರಳುವಾಗ ಸುಳ್ಯ ಸಂಪಾಜೆಯಲ್ಲಿ ಭೀಕರ ಅಪಘಾತ – ಎಲ್ಲರೂ ಪ್ರಾಣಪಾಯದಿಂದ ಪಾರು

Published On : 20 May 2017   |  Reported By : Bernard J Costa


ಕುಂದಾಪುರ, ಮೇ.20: ಕುಂದಾಪುರ ಚರ್ಚ್ ಉಪಾಧ್ಯಕ್ಷರಾದ ಜೇಕಬ್ ಡಿಸೋಜಾ ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರು ವೆಲಂಕಣಿ ಪುಣ್ಯ ಕ್ಷೇತ್ರದ ದರ್ಶನಕ್ಕೆ ತೆರಳಿದ್ದರು. ಅವರು ಹಿಂದಿರುಗಿ ಬರುವಾಗ, ದಾರಿ ಮಧ್ಯೆ ಸುಳ್ಯದ ಸಂಪಾಜೆಯಲ್ಲಿ ಅವರು ಪ್ರಯಾಣಿಸುತಿದ್ದ ಟೆಂಪೆÇ ಟ್ರಾವೆಲರ್ ಮಿನಿ ಬಸ್ ಮೋರಿಗೆ ಅಪ್ಪಳಿಸಿ ಅಪಘಾತಕ್ಕೆ ಇಡಾಯಿತು. ವಾಹನ ಚಾಲಕ ನಿದ್ರೆಯ ಗುಂಗಿನಲ್ಲಿದ್ದು ಅಪಾಯ ಸಂಭವಿಸಿದೆಯೆಂದು ಶಂಕಿಸಲಾಗಿದ್ದು, ಅದಲ್ಲದೆ ಅಲ್ಲಿ ನೀರಿನ ಮೋರಿಯ ಕಾಮಗಾರಿ ನೆಡೆದಿದ್ದು, ಕಾಮಾಗಾರಿ ನೆಡೆಸಿದ ಕಂಪೆನಿ ಅಲ್ಲಿಯೆ ಮೋರಿ ಸಮೀಪ ಎರಡು ಕಸದ ತೊಟ್ಟಿಗಳನ್ನು ಇಟ್ಟಿದ್ದರು, ಕಾಮಾಗಾರಿ ಪೂರ್ಣಗೊಂಡರು ಅವಗಳನ್ನು ತೆರವು ಮಾಡೈರಲಿಲ್ಲಾ, ಅದಕ್ಕೆ ವಾಹನ ಡಿಕ್ಕಿ ಹೊಡೆದು ವಾಹನ ನುಜ್ಜು ಗುಜ್ಜಾಗಿದೆ. ಅಪಘಾತ ಭೀಕರವಾಗಿದ್ದರೂ, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದಲ್ಲಿ ಜೇಕಬ ಡಿಸೋಜಾರಿಗೆ, ಅವರ ಪತ್ನಿ ಆಲಿಸ್ ರೀಟಾ, ಹಿರಿ ಮಗ ಅಂಟೋನಿ ಸಂದೇಶ್, ಕಿರಿ ಮಗ ಆಸೀಸಿ ಫ್ರಾನ್ಸಿಸ್ (ನವ ವರ) ಇವರ ಹೆಂಡತಿ ಅನಿತಾ (ನವ ವಧು) ಅಂಟೋನಿ ಸಂದೇಶ್ ಇವರ ಪುಟ್ಟ ಮಗ ಸಾವಿಯನ್, ಮಿತ್ರ ಬಂಧು ಅಂಟೋನಿ ಆಲ್ಮೇಡಾ ಇವರುಗಳಿದ್ದು ಇವರಿಗೆ ಅಪಘಾತದಲ್ಲಿ ದೇಹದ ಹಲವು ಕಡೆ ಪೆಟ್ಟುಗಳಾಗಿವೆ.

ಆಸೀಸಿ ಫ್ರಾನ್ಸಿಸ್ ಮತ್ತು ಅನಿತಾ ಇವರ ಮದುವೆಯಾಗಿ ಕೇವಲ 14 ದಿವಸಗಳಾಗಿದ್ದು, ಅಪಘಾತ ನೆಡೆದ ಸಂದರ್ಭದಲ್ಲಿ ಹಿಂದಿನ ಸೀಟುಗಳು ಇವರ ಮೇಲೆ ಬಿದ್ದು ಇವರಿಗೆ ಹೆಚ್ಚಿನ ಪೆಟ್ಟುಗಳಾಗಿವೆ, ಪುಟ್ಟ ಮಗು ಸಾವಿಯನ್ ತಲೆಗೆ ಪೆಟ್ಟಾಗಿದ್ದು ಮಗು ತೀವ್ರ ನಿಗಹ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ವಾಹನ ಚಾಲಕರಾದ ಆರ್ಚಿ ಕರ್ವಾಲ್ಲೊ ಮತ್ತು ಸತೀಶ್ ಇವರುಗಳಿಗೂ ಘಾಯಾಳುಗಳಾಗಿದ್ದು. ಒಟ್ಟಾರೆಯಾಗಿ ಈ ಅಪಘಾತದಲ್ಲಿ ಒಟ್ಟು 9 ಜನ ಘಾಯಾಳಾಗಿದ್ದು, ಸ್ಥಳಿಯರ ಸಹಕಾರದಿಂದ ಸುಳ್ಯದ ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಈಗ ಎಲ್ಲರೂ ಮಂಗ್ಳೂರಿನ ಪ್ರೈವೆಟ್ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here