Friday 4th, July 2025
canara news

ದ.ಕ. ಜಿಲ್ಲಾ ಯುವ ಕಾಂಗ್ರೆಸ್: ಹ್ಯಾಟ್ರಿಕ್ ಬಾರಿಸಿದ ಮಿಥುನ್ ರೈ

Published On : 20 May 2017   |  Reported By : Canaranews Network


ಮಂಗಳೂರು: ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಗುರುವಾರ ಹೊರ ಬಿದ್ದಿದ್ದು, ಉತ್ತಮ ಪೈಪೋಟಿಯ ಬಳಿಕ ಮಿಥುನ್ ರೈ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇದರೊಂದಿಗೆ ಮೂರನೇ ಬಾರಿಗೆ ಅವರು ಈ ಸ್ಥಾನವನ್ನು ಅಲಂಕರಿಸಿದಂತಾಗಿದೆ.ಯುವ ಕಾಂಗ್ರೆಸ್ ಚುನಾವಣೆ ಯನ್ನು ಪಾರದರ್ಶಕವಾಗಿ ಕೈಗೊಳ್ಳುವ ನಿಟ್ಟಿನಲ್ಲಿ ನಡೆದ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಿಥುನ್ ರೈ ಅವರ ಪ್ರತಿಸ್ಪರ್ಧಿಯಾಗಿ ಮುಖಂಡರಾದ ಲುಕ್ಸಾನ್, ಸುಮಿತ್ ಡೇಸಾ ನಿಂತಿದ್ದರು.

ಉತ್ತಮ ಪೈಪೋಟಿಯಿತ್ತಾದರೂ ಕೊನೆಗೆ ಮಿಥುನ್ ರೈ 4,059 ಮತಗಳನ್ನು ಪಡೆದು ಕೊಂಡರೆ, ಲುಕ್ಸನ್ 3,476 ಹಾಗೂ ಸುಮಿತ್ ಡೇಸಾ 300 ಮತಗಳನ್ನು ಗಳಿಸಿದರು. ನಿಯಮದಂತೆ ಲುಕ್ಸಾನ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here