Friday 9th, May 2025
canara news

ನರಸಿಂಹ ಉಗ್ಗಪ್ಪ ಮಾಡಾ ನಿಧನ

Published On : 20 May 2017   |  Reported By : Rons Bantwal


ಮುಂಬಯಿ, ಮೇ.20: ಗ್ರೇಟ್ ಈಸ್ಟರ್ನ್ ಸಿಪ್ಪಿಂಗ್ ಕಂಪೆನಿ ಸಂಸ್ಥೆಯ ನಿವೃತ್ತ ಕಾರ್ಯನಿರ್ವಹಣಾ ಅಧಿಕಾರಿ, ನಗರದ ಪ್ರಸಿದ್ಧ ಉದ್ಯಮಿ ನರಸಿಂಹ ಉಗ್ಗಪ್ಪ ಮಾಡಾ (86.) ಇವರು ಇಂದಿಲ್ಲಿ ಶನಿವಾರ ಮಧ್ಯಾಹ್ನ ತನ್ನ ಸ್ವನಿವಾಸದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಮುಂಬಯಿಯಲ್ಲಿನ ಹೆಸರಾಂತ ಸಮಾಜ ಸೇವಕ ವಿಶ್ವನಾಥ್ ಯು.ಮಾಡಾ ಹಾಗೂ ಡಾ| ಕೆ.ಯು ಮಾಡಾ ಇವರ ಹಿರಿಯ ಸಹೋದರರಾಗಿದ್ದ ನರಸಿಂಹ ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕುಳೂರು ಕುದ್ರಾಡಿ ಇಲ್ಲಿಯವರಾಗಿದ್ದು, ಸದ್ಯ ಮುಂಬಯಿಯಲ್ಲಿ ಉದ್ಯಮಿ ಆಗಿ ದುಡಿಯುತ್ತಿದ್ದರು. ಸಾಮಾಜಿಕ ಕಾಳಜಿ ಹೊಂದಿದ್ದ ಮೃತರು ತೆರೆಮರೆಯಲ್ಲಿದ್ದು ಕೆಲವೊಂದು ಸಂಸ್ಥೆಗಳಲ್ಲಿ ತೊಡಗಿಸಿ ಕೊಂಡಿದ್ದರು.

ಮೃತರ ಪತ್ನಿ ಇತ್ತೀಚೆಗಷ್ಟೇ ಅಗಲಿದ್ದು, ನರಸಿಂಹರು ಮೂರು ಗಂಡು, ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮಾಡಾ ನಿಧನಕ್ಕೆ ಮಹಾನಗರದ ಅನೇಕ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದಿಲ್ಲಿ ಸಂಜೆ ಜುಹೂ ಇಲ್ಲಿನ ಪವನ್‍ಹಂಸ ಸ್ಮಶಾನಭೂಮಿಯಲ್ಲಿ ನೆರವೇರಿಸಲ್ಪಟ್ಟಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here