ಜೂ.2: ಯೆಯ್ಯಾಡಿ ಮುಂದಾಳುತ್ವದಲ್ಲಿ ಮುಂಬಯಿಯಲ್ಲಿ ಪ್ರದರ್ಶನ
(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ಮೇ.21: ಕರಾವಳಿ ಕರ್ನಾಟಕದ ಯಕ್ಷಗಾನ ಕಲಾವಿದನೊಬ್ಬನ ಜೀವನದ ಕಥೆ ಸಾರುವ ಕರ್ನಾಟಕ ಕರಾವಳಿ ತೀರದ ಹೆಸರಾಂತ ಪತ್ರಕರ್ತ, ಲೇಖಕ ಇಸ್ಮಾಯಿಲ್ ಮೂಡಶೆಡ್ಡೆ ನಿರ್ದೇಶನದ ಚಿತ್ರ `ಬಣ್ಣ ಬಣ್ಣದ ಬದುಕು' ಕಳೆದ ಶುಕ್ರವಾರ (ಮೇ 19) ಕರ್ನಾಟಕ ರಾಜ್ಯದ್ಯಂತ ಬಿಡುಗಡೆಯಾಗಿ ಭಾರೀ ಸುದ್ದಿ ಮಾಡಿದೆ. ಈ ಚಿತ್ರವನ್ನು ಮಾಡಿದ್ದಾರೆ. ಮುಂಬಯಿ ಮೂಡಲ ಜಗತ್ತಿನಲ್ಲಿ ಗುರುತಿಸಿ ಕೊಂಡಿರುವ ಕಲಾವಿದ ರವಿರಾಜ್ ಶೆಟ್ಟಿ ಈ ಚಿತ್ರದ ನಾಯಕನಾ ನಟಿಸಿದ್ದು ಈಗಾಗಲೇ ಒಂದೆರಡು ತುಳು ಚಿತ್ರಗಳಲ್ಲಿ ಅಭಿನಯಿಸಿರುವ ರವಿರಾಜ್ ಶೆಟ್ಟಿ ಮೂಲತಃ ಕರಾವಳಿಯ ಮಲೆನಾಡಿನ ಅರಳು ಪ್ರತಿಭೆ.
ಆರಂಭದಲ್ಲಿ ಮುಸ್ಲಿಂ ಯುವಕನ ಪಾತ್ರ ಮಾಡೋದು ಹೇಗೆ ಎಂದು ಹೆದರಿದ್ದೆ. ಆದರೆ ಈ ಚಿತ್ರದ ಕಥೆ ನನ್ನನ್ನು ತುಂಬಾ ಆಕರ್ಷಿಸಿತು ಎಂದು ಪತ್ರಕರ್ತರನ್ನುದ್ದೇಶಿಸಿ ರವಿರಾಜ್ ಹೇಳಿದರು. ಚಿತ್ರದ ಬಿಡುಗಡೆಯ ಕುರಿತಂತೆ `ಬಣ್ಣ ಬಣ್ಣದ ಬದುಕು' ಚಿತ್ರ ತಂಡವು ತಮ್ಮ ಅನುಭವಗಳನ್ನು ಹಂಚಿಕೊಂಡಿತು.
ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವ ಇಸ್ಮಾಯಿಲ್ ಮೂಡುಶೆಡ್ಡೆ ಮಾತನಾಡುತ್ತ ಕರಾವಳಿ ಭಾಗದ ಓರ್ವ ಮುಸ್ಲಿಂ ಯಕ್ಷಗಾನ ಕಲಾವಿದನ ಜೀವನದ ಕಥೆ. ಮಂಗಳೂರು ಭಾಗದಲ್ಲಿ ಕೋಮು ಗಲಭೆ ನಡೆಯುತ್ತಿದ್ದ ಸಮಯದಲ್ಲಿ ಮುಸ್ಲಿಂ ಕಲಾವಿದನಿಂದ ರಾಮ, ಕೃಷ್ಣನ ಪಾತ್ರಗಳನ್ನು ಮಾಡಲು ಬಿಡುವರೋ ಇಲ್ಲವೋ ಎಂಬುವುದನ್ನು ಹೇಳುವ ಕಥೆ ಈ ಚಿತ್ರದಲ್ಲಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಕಳೆದ ಹಲವಾರು ತಿಂಗಳಿಂದ ಅಸೌಖ್ಯದಿಂದ ಬಳಲುತ್ತಿರುವ ನಟ ಸತ್ಯಜಿತ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿರುವುದು ಅಭಿಮಾನವೆಣಿಸಿದೆ. ಅಲ್ಲದೆ ಈ ತರದ ಸಿನಿಮಾಗಳನ್ನು ನಿರ್ಮಿಸಲು ನಿರ್ಮಾಪಕರ ಸಹಕಾರ ತುಂಬಾ ಮುಖ್ಯ. ವಿರ್ಮಾಣ ಹಂತದಲ್ಲಿ ನಿರ್ಮಾಪಕ ಕೃಷ್ಣನಾಯ್ಕ ಅವರು ತುಂಬಾ ಉತ್ತೇಜನ ಕೊಟ್ಟಿದ್ದಾರೆ. ಅಲ್ಲದೆ ಅವರು ನನ್ನ ಸ್ನೇಹಿತರು ಕೂಡ ಬೆಂಬಲಿಸಿದ್ದಾರೆ ಎಂದು ಇಸ್ಮಾಯಿಲ್ ಹೇಳಿದರು.
ಈ ಚಿತ್ರÀದಲ್ಲಿ ಹಿರಿಯ ನಟ ಸತ್ಯಜಿತ್ ಬಹುಮುಖ್ಯ ಪಾತ್ರವೊಂದರಲ್ಲಿ ಕಾಣಿಸಿ ಕೊಂಡಿದ್ದು, ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡ ನಂತರ ಸತ್ಯಜಿತ್ ಅನಾರೋಗ್ಯಕ್ಕೆ ತುತ್ತಾಗಿ ತಮ್ಮ ಕಾಲು ಕಳೆದು ಕೊಳ್ಳಬೇಕಾಯಿತು. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಕೃಷ್ಣ ನಾಯಕ್ ಅವರು ಸತ್ಯಜಿತ್ ಅವರ ವೈದ್ಯಕೀಯ ಖರ್ಚಿಗೆಂದು ಎರಡೂವರೆ ಲಕ್ಷ ರುಪಾಯಿಗಳನ್ನು ಆಸ್ಪತ್ರೆಗೆ ಕಟ್ಟಿರುವ ಬಗ್ಗೆ ಸ್ಮರಿಸಿದ ಸತ್ಯಜಿತ್, ಈ ಚಿತ್ರದ ನಿರ್ಮಾಪಕ ಅನಾರೋಗ್ಯದ ಕಾರಣ ಇಂದು ನಿರ್ಮಾಪಕ ಕೃಷ್ಣನಾಯ್ಕ ಅವರು ಹಾಜರಿಲ್ಲ ಆದರೂ ಅವರು ನನ್ನ ಪಾಲಿನ ದೇವರು. ಎಂದೂ ಇಸ್ಮಾಯಿಲ್ ತಿಳಿಸಿದರು.
ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ನಿರ್ಮಾಪಕರು ತುಂಬಾ ಸಹಕಾರ ನೀಡಿದರು. ಅಲ್ಲಿನ ಜನ ಕೂಡ ತಮ್ಮ ಮನೆಯವರ ಥರ ಎಲ್ಲಾ ಕಲಾವಿದರನ್ನು ಆತ್ಮೀಯತೆಯಿಂದ ನೋಡಿಕೊಂಡರು ಎಂದು ಹೇಳಿದರು. ಅಂತೆಯೇ ಚಿತ್ರದಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ರಿಯಾ ತನ್ನ ಪಾತ್ರದ ಬಗ್ಗೆ ಅಭಿಮಾನ ವ್ಯಕ್ತ ಪಡಿಸಿದರು.
ಕಿರುತೆರೆ ನಟಿ ಅಪೂರ್ವಶ್ರೀ ಚಿತ್ರದಲ್ಲಿ ನಾಯಕನ ತಾಯಿಯ ಪಾತ್ರ ನಿರ್ವಹಿಸಿದ್ದಾರೆ. ತುಳು ನಟಿ ಅನ್ವಿತಾ ಸಾಗರ ಈ ಚಿತ್ರದ ನಾಯಕಿ ಉಳಿದ ಪಾತ್ರವರ್ಗಗಳಲ್ಲಿ ರಮೇಶ್ ಭಟ್, ಗೋಪಿನಾಥ್‍ಭಟ್ ಅಭಿನಯಿಸಿದ್ದಾರೆ. ಯಕ್ಷಗಾನ ಗಾಯಕ ಪಟ್ಲ ಸತೀಶ್ ಶೆಟ್ಟಿ ಈ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದಾರೆ. ಶ್ರೀ ಮುತ್ತುರಾಮ್ ಕ್ರಿಯೇಷನ್ಸ್ ಬ್ಯಾನರ್‍ನಡಿಯಲ್ಲಿ ಕೃಷ್ಣ ನಾಯ್ಕ ಅವರು ನಿರ್ಮಿಸಿರುವ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಇಸ್ಮಾಯಿಲ್ ಮೂಡುಶೆಡ್ಡೆ ಅವರು ನಿರ್ದೇಶನ ಮಾಡಿದ್ದಾರೆ.
ಹೆಸರಾಂತ ಸಂಘಟಕ ಸುರೇಶ್ ಶೆಟ್ಟಿ ಯೆಯ್ಯಾಡಿ ಮುಂದಾಳುತ್ವದಲ್ಲಿ ಇದೇ ಜೂನ್.2ನೇ ಶುಕ್ರವಾರ ಮುಂಬಯಿಯಲ್ಲಿನ ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ ಎಂದು ಚಿತ್ರದ ರೂವಾರಿ ಇಸ್ಮಾಯಿಲ್ ಮೂಡುಶೆಡ್ಡೆ ತಿಳಿಸಿದ್ದಾರೆ.
ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಇಸ್ಮಾಯಿಲ್ ಮೂಡುಶೆಡ್ಡೆ, ಕರ್ನಿರೆ ವಿಶ್ವನಾಥ್ ಶೆಟ್ಟಿ, ಪಟ್ಲ ಸತೀಶ್ ಶೆಟ್ಟಿ, ಸುರೇಶ್ ಶೆಟ್ಟಿ ಯೆಯ್ಯಾಡಿ ಮತ್ತಿತರರು ಹಾಜರಿದ್ದರು.