Friday 9th, May 2025
canara news

ಮೇ.28 : ಕು| ಕಶಿಶ್ ವಿ.ಸಾಲ್ಯಾನ್ ಭರತನಾಟ್ಯ ರಂಗಪ್ರವೇಶ

Published On : 22 May 2017   |  Reported By : Rons Bantwal


ಮುಂಬಯಿ, ಮೇ.22: ಕು| ಕಶಿಶ್ ವಿ.ಸಾಲ್ಯಾನ್ ಇವರ ಭರತನಾಟ್ಯ (ಅರಂಗೇಟ್ರಮ್) ರಂಗ ಪ್ರವೇಶ ಕಾರ್ಯಕ್ರಮ ಇದೇ ಮೇ.28ರ ರವಿವಾರ ಪೂರ್ವಾಹ್ನ 10.00 ಗಂಟೆಗೆ ತೆರಾಪಂಥ್ ಭವನ, ಕ್ಯಾಂಬ್ರಿಡ್ಜ್ ಶಾಲಾ ಮುಂಭಾಗ ಠಾಕೂರ್ ಕಾಂಪ್ಲೆಕ್ಸ್, ಕಾಂದಿವಿಲಿ ಪೂರ್ವ ಮುಂಬಯಿ ಇಲ್ಲಿ ನಡೆಯಲಿದೆ.

ಅರಂಗೇಟ್ರಮ್‍ನ್ನು ತಂಜಯ್ ಕಲಾ ಮಂದಿರ ಸಾದರ ಪಡಿಸುತ್ತಿದ್ದು ಬೃಹನ್ಮುಂಬಯಿ ಮಹಾನಗರ ಪಾಲಿಕೆ ಮೇಯರ್ ಪೆÇ್ರ| ವಿಶ್ವನಾಥ್ ಮಹಾದೇಶ್ವರ್ ಅವರು ಮುಖ್ಯ ಅತಿಥಿüಯಾಗಿ ಪಾಲ್ಗೊಂಡು ಅರಂಗೇಟ್ರಮ್‍ಗೆ ಚಾಲನೆಯನ್ನೀಡಲಿದ್ದಾರೆ. ಬಳಿಕ ತಂಜಯ್ ಕಲಾ ಮಂದಿರದ ನಿರ್ದೇಶಕ ಗುರು ಶ್ರೀ ದಯಾನಂದ ಪಿಳ್ಳೈ ಅವರ ಶುಭಾನುಗ್ರದೊಂದಿಗೆ ಕು| ಕಶಿಶ್ ರಂಗ ಪ್ರವೇಶಗೈಯಲಿದ್ದಾರೆ.

ಕು| ಕಶಿಶ್ ವಿ.ಸಾಲ್ಯಾನ್ ಅವರು ಉಡುಪಿ ಪಲಿಮಾರು ನಿವಾಸಿ ವಿಜಯ್ ಸಾಲ್ಯಾನ್ ಮತ್ತು ಚಿತ್ರಾಪು ಶ್ರೀಮತಿ ಶ್ವೇತಾ ವಿ.ಸಾಲ್ಯಾನ್ ಅವರ ಸುಪುತ್ರಿ ಆಗಿದ್ದು ನಗರದ ಎನ್.ಎಲ್ ದಾಲ್ಮೀಯಾ ಫ್ರೌಡ ಶಾಲೆ ವಿೂರಾರೋಡ್ ಒಂಭತ್ತನೇ ತರಗತಿಯ ವಿದ್ಯಾಥಿರ್üನಿ. ತನ್ನನ್ನು ಐದರ ಹರೆಯದಲ್ಲೇ ಭರತನಾಟ್ಯದಲ್ಲಿ ತೊಡಗಿಸಿ ಕೊಂಡ ನೃತ್ಯಕಲಾವಿದೆ ಹಾಗೂ ಪ್ರತಿಭಾಶಾಲಿ ಬೆಡಗಿ. ಶಾಲಾ ಚಟುವಟಿಕೆಯಲ್ಲೂ ಸದಾ ರ್ಯಾಂಕ್ ವಿಜೇತ ವಿದ್ಯಾಥಿರ್üನಿಯಾಗಿದ್ದಾರೆ. ಹಲವಾರು ಕಾರ್ಯಕ್ರಮಗಳÀಲ್ಲಿ ಭಾಗವಹಿಸಿ ತನ್ನ ಪ್ರತಿಭೆಯನ್ನು ಮೆರೆದಿರುವ ಕು| ಕಶಿಶ್ ಕಳೆದ ಅನೇಕ ವರ್ಷಗಳಿಂದ ಭರತನಾಟ್ಯ ಅಭ್ಯಾಸದಲ್ಲಿ ತೊಡಗಿಸಿ ಕೊಂಡ ಪ್ರತಿಭಾನ್ವಿತ ಬಾಲೆಯಾಗಿದ್ದಾರೆ. ತಾನು ಖಗೋಳಶಾಸ್ತ್ರಜ್ಞೆ ಆಗುತ್ತಾ ನಾಸಾ ಅಥವಾ ಇಸ್ರೋದಲ್ಲೂ ತನ್ನ ಸಾಧನೆ ಮಾಡಬೇಕೆಂಬ ಹೆಬ್ಬಯಕೆ ಇರಿಸಿ ಅಪ್ರತಿಮ ಕನ್ಯೆಯಾಗಿದ್ದಾಳೆ.

ಗುರು ದಯಾನಂದ ಪಿಳ್ಳೈ ಮತ್ತು ಗುರು ವೇಣುಗೋಪಾಲ್ ಪಿಳ್ಳೈ ಸ್ವರಸಂಗೀತ ನೀಡಲಿದ್ದು, ಕೃಷ್ಣನ್ ನಾರಾಯಣ್ ಮೃದಂಗವನ್ನು, ರಜನಿ ಐಯ್ಯರ್ ಅವರ ವಾಯೋಲಿನ್ ವಾದನ, ಮಹಾಲಕ್ಷ್ಮೀ ರವಿ ಅವರ ಕೊಳಲು, ಶ್ರೀರಾಮ್ ರಾಜನ್ ಘಟಮ್‍ನ ಸಂಗೀತಮಯನಾದದೊಂದಿಗೆ ಭರತನಾಟ್ಯ ಕಾರ್ಯಕ್ರಮ ಜರಗಲಿದೆ. ಕು| ಕಶಿಶ್ ಜೊತೆಗೆ ಕು| ಅವ್ನಿ ಗೊಸಾಯ್ ಕೂಡಾ ರಂಗಪ್ರವೇಶ ಗೈಯಲಿದ್ದಾರೆ.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here