Friday 9th, May 2025
canara news

ಕುಕ್ಕಾಜೆ: ಶೈನ್ ಗೈಸ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

Published On : 22 May 2017   |  Reported By : Rons Bantwal


ಮುಂಬಯಿ (ಬಂಟ್ವಾಳ), ಮೇ.22: ಎಫ್‍ಸಿಸಿಎ (ರಿ.) ಶೈನ್ ಗೈಸ್ ಕುಕ್ಕಾಜೆ ಹಾಗೂ ಬಿ.ಸಿ ರೋಡು ಪಾಲಿಕ್ಲಿನಿಕ್ ಮತ್ತು ಲೈಫ್ ಲೈನ್ ಹೆಲ್ತ್ ಕೇರ್ ಪ್ಲಸ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು 50 ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಕುಕ್ಕಾಜೆ ಶಾಲೆಯ ಎಸ್.ಎಸ್.ಎಲ್.ಸಿ. ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕಳೆದ ಆದಿತ್ಯವಾರ (ಮೇ.21) ಸರಕಾರಿ ಪ್ರಾಥಮಿಕ ಶಾಲೆ ಕುಕ್ಕಾಜೆಯಲ್ಲಿ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಕೆ.ಇಸ್ಮಾಯಿಲ್ ಅಧ್ಯಕ್ಷತೆಯಲ್ಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್ ಮೊಹಮ್ಮದ್ ನೆರವೇರಿಸಿದರು. 2016-2017ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕುಕ್ಕಾಜೆ ಸರ್ಕಾರಿ ಫ್ರೌಢ ಶಾಲೆಯ ವಿದ್ಯಾರ್ಥಿಗಳಾದ ಇಮ್ತಿಯಾಝ್ ಅಹ್ಮದ್, ಹರ್ಷಿತಾ ಮತ್ತು ಪ್ರಗತಿ ಶಾಲೆಯ ವಿದ್ಯಾರ್ಥಿಗಳಾದ ಶ್ರೇಯಾ ಮತ್ತು ಆಯಿಷತ್ ಶಾನಿಯಾ ಅವರನ್ನು ಅಥಿತಿಗಳು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಶುಭಹಾರೈಸಿರು. 

ಕಾರ್ಯಕ್ರಮದಲ್ಲಿ ಡಾ. ಕರೋಲಿನ್ ಪಿ.ಡಿಸೋಜ ಆರೋಗ್ಯದ ಬಗ್ಗೆ ಮತ್ತು ಮಹಮ್ಮದ್ ರಫ್ಸೀರ್ ಶಿಕ್ಷಣದ ಬಗ್ಗೆ ವಿಶೇಷ ವಿಷಯ ಮಂಡಣೆ ಮಾಡಿದರು.

ಮುಖ್ಯ ಅಥಿüತಿಗಳಾಗಿ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ವೈದ್ಯರಾದ ಡಾ| ಶ್ರೀನಾಥ್ ಪಿ.ಶೆಟ್ಟಿ, ಡಾ| ಉನೈಸಾ ಅಕ್ಬರ್, ಡಾ| ಮೊಹಮ್ಮದ್ ಮುಬಶಿರ್, ಸ್ಪೇರೋಮೀಟರಿ ಟೆಕ್ನಿಶಿಯನ್ ಸ್ವಪ್ನಿಲ್, ಸಿಪ್ಲಾ ಟೆರಿಟರಿ ಮ್ಯಾನೇಜರ್ ಸಜ್ಜಾದ್ ಮಂಚಿ, ಮಂಚಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೋಹನ್ ದಾಸ್, ಸದಸ್ಯ ಕೇಶವ ರಾವ್, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಡಿ.ಕೆ ಹಂಝ, ಕುಕ್ಕಾಜೆ ದ.ಕ ಜಿ.ಪಂ ಹಿ.ಪ್ರಾ ಶಾಲೆಯ ಶಾಲಾಭಿವೃಧ್ಧಿ ಸಮಿತಿ ಅಧ್ಯಕ್ಷ ಹಮೀದ್ ಪುಚ್ಚೆಕೆರೆ, ನವಯುಗ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಸೈನಾರ್ ಪಿ.ಕೆ, ಶರಫುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಂಝ ಕುರಿಯಪ್ಪಾಡಿ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಮುಖ್ಯಸ್ಥ ಫೈಝಲ್ ಮಂಚಿ, ಶೈನ್ ಗೈಸ್ ಅಧ್ಯಕ್ಷ ಗಫಾರ್ ಸಾಗರ್, ಮಾಜಿ ಅಧ್ಯಕ್ಷ ಇಬ್ರಾಹಿಂ ಎ.ಕೆ, ಕಾರ್ಯದರ್ಶಿ ನಿಝಾಮುದ್ದೀನ್, ಸಾಮಾಜಿಕ ಕಾರ್ಯಕರ್ತ ಆಶಿಕ್ ಕುಕ್ಕಾಜೆ ಮತ್ತಿತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶೈನ್ ಗೈಸ್ ಖಜಾಂಜಿ ಬಾತಿಷ ಕುಕ್ಕಾಜೆ ಪ್ರಾಸ್ತಾವಿಕ ಭಾಷಣ ಮಾಡಿ, ಶೈನ್ ಗೈಸ್ ಗೌರವಾಧ್ಯಕ್ಷ ನಝೀರ್ ಕುಕ್ಕಾಜೆ ಅಥಿತಿಗಳನ್ನು ಸ್ವಾಗತಿಸಿ ವಂದಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here