ಮಂಗಳೂರು: ಕದ್ರಿ ಮಲ್ಲಿಕಟ್ಟೆ ಸಮೀಪ ಶನಿವಾರ ರಾತ್ರಿ ರಸ್ತೆ ಹಂಪ್‌ನಲ್ಲಿ ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಸವಾರ ಕದ್ರಿಯ ಗೋಯಲ್ ಕುಮಾರ್ (55) ತೀವ್ರ ಗಾಯಗೊಂಡಿದ್ದಾರೆ.
ಕಪಿತಾನಿಯೋ ಬಳಿ ಗೋಯಲ್ ಫರ್ನಿಚರ್ ಮಳಿಗೆ ನಡೆಸುತ್ತಿದ್ದ ಅವರು ರಾತ್ರಿ ವೇಳೆ ಮನೆಗೆ ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಗಂಭೀರ ಸ್ವರೂಪದ ಗಾಯಗೊಂಡಿರುವ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರಾಫಿಕ್ ಪೂರ್ವ ಠಾಣೆಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.