Friday 9th, May 2025
canara news

ಆನೆಗುಂದಿ ಮಹಾಸಂಸ್ಥಾನ ಶ್ರೀಗಳ ಪಟ್ಟಾಭಿಷೇಕ ಮಹೋತ್ಸವದ ಸಪ್ತಮ ವರ್ಧಂತ್ಯುತ್ಸವ

Published On : 24 May 2017   |  Reported By : Ronida Mumbai


ಬುದ್ಧಿಶಕ್ತಿಯಿಂದ ಭಗವಂತನ ಅಸ್ತಿತ್ವದ ಅರಿವು : ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಮೇ.23: ಮಕ್ಕಳನ್ನು ಸಂಸ್ಕøತಿಯ ಜವಾಬ್ದಾರರನ್ನಾಗಿ ರೂಪಿಸಿದಲ್ಲಿ ಅವರೇ ಸಮಾಜದ ಆಸ್ತಿಯಾಗುತ್ತಾರೆ. ಸತ್ಕಾರ್ಯಕ್ಕೆ ವಿನಿಯೋಗವಾದಲ್ಲಿ ಅದುವೇ ಸಮಾಜದ ನಿಜವಾದ ಸಂಪತ್ತು ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಜಗದ್ಗುರು ಅನಂತ ಶ್ರ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಹೇಳಿದರು.

ಕಾಳಹಸ್ತೇಂದ್ರಶ್ರೀ ಅವರು ಕಳೆದ ಭಾನುವಾರ ಪಡುಕುತ್ಯಾರು ಶ್ರೀಮತ್ ಆನೆಗುಂದಿ ಮಠದ ನಿವೇಶನದಲ್ಲಿ ನಡೆದ ತಮ್ಮ ಪಟ್ಟಾಭಿಷೇಕ ಮಹೋತ್ಸವದ ಸಪ್ತಮ ವರ್ಧಂತ್ಯುತ್ಸವದ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ತಮ್ಮ ಆಶೀರ್ವಚನದಡಿ ಮಾತನಾಡಿದರು.

ಕೀಳು ಪ್ರಚಾರಕ್ಕಾಗಿ ಬುದ್ಧಿ ಜೀವಿಗಳೆಂದು ಗುರುತಿಸಿಕೊಂಡಾಗ ಮೂಲಭೂತ ನಂಬಿಕೆ ಅಲುಗಾಡುತ್ತದೆ. ಭಗವಂತನ ಬಗ್ಗೆ ಅರಿವು ಇಲ್ಲವಾದಲ್ಲಿ ತಾನು ಆ ಮಟ್ಟಕ್ಕೆ ಬೆಳೆದಿಲ್ಲ ಎಂದರ್ಥ. ನಮ್ಮ ಹಿಂದಿನ ಋಷಿಮುನಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಬದುಕು ಸಾರ್ಥಕವಾಗುತ್ತದೆ. ಭಗವಂತನ ಅಸ್ತಿತ್ವ ತಿಳಿದುಕೊಳ್ಳಲು ನಮ್ಮಲ್ಲಿರುವ ಬುದ್ಧಿಶಕ್ತಿಯನ್ನು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.

ಕಾಪು ಶಾಸಕ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮುಖ್ಯ ಅತಿಥಿüಯಾಗಿದ್ದು ಮಾತನಾಡಿ, ಗುರುವಿನ ಆಶೀರ್ವಾದದಿಂದ ಮಾತ್ರ ಸಮಾಜದ ಏಳಿಗೆ ಸಾಧ್ಯ. ಆರ್ಥಿಕವಾಗಿ ಸಧೃಢವಾದ ಸಮುದಾಯ ಉತ್ತಮವಾಗಿ ಬೆಳವಣಿಗೆ ಹೋದಲು ಸಾಧ್ಯ. ಹಕ್ಕಿಯ ಗೂಡಿನಂತೆ ಸ್ವಾಮೀಜಿ ಅವರು ಇಡೀ ವಿಶ್ವಕರ್ಮ ಸಮುದಾಯದ ಒಳಿತಿಗಾಗಿ ಸಮರ್ಪಣೆ ಮಾಡಿಕೊಂಡಿರುತ್ತಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೇವೆ ಸುಲಭವಾಗುವಂತೆ ಸಲ್ಲಿಕೆಯಾಗುತ್ತಿದೆ ಎಂದರು.

ಕಟಪಾಡಿ ವೇಣುಗಿರಿ ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀಪೀಠ ಪ್ರತಿಷ್ಠಾನದ ಅಧ್ಯಕ್ಷ ತ್ರಾಸಿ ಸುಧಾಕರ ಆಚಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅತಿಥಿüಗಳಾಗಿದ್ದ ಕುತ್ಯಾರು ಪಂಚಾಯತ್ ಅಧ್ಯಕ್ಷ ಧೀರಜ್‍ಶೆಟ್ಟಿ, ಅದಾನಿ ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ, ಅವಿಭಜಿತ ದ.ಕ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಯು.ಕೆ.ಎಸ್. ಸೀತಾರಾಮ ಆಚಾರ್ಯ, ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀಪೀಠ ಪಂಚಸಿಂಹಾಸನ ವಿಕಾಸ ಸಮಿತಿ ಆನೆಗುಂದಿ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರೆ, ಮಾಜಿ ಶಾಸಕ ಕೆ.ರಘುಪತಿ ಭಟ್, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಸದಾನಂದ ಎನ್.ಆಚಾರ್ಯ ಶುಭಾಶಂಸನೆಗೈದರು.

ಶ್ರೀ ಮಠದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ಕೆ.ಕೇಶವ ಆಚಾರ್ಯ ಮಂಗಳೂರು, ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಮಧು ಆಚಾರ್ಯ ಮುಲ್ಕಿ, ಪ್ರತಿಷ್ಠಾನದ ಮುಂಬಯಿ ವಲಯ ಸಮಿತಿ ಉಪಾಧ್ಯಕ್ಷ ಶ್ರೀಧರ ವಿ.ಆಚಾರ್ಯ, ಕಾರ್ಯದರ್ಶಿ ಜಿ.ಟಿ.ಆಚಾರ್ಯ ಮುಂಬಯಿ, ಕೃಷ್ಣ ವಿ.ಆಚಾರ್ಯ, ಕೊಯಂಬುತ್ತೂರು ವಲಯ ಸಮಿತಿ ಅಧ್ಯಕ್ಷ ಶುಭಕರ ಎನ್.ಆಚಾರ್ಯ, ಬೆಂಗಳೂರು ವಲಯ ಸಮಿತಿ ಪ್ರ.ಸಂಚಾಲಕ ಹರಿಶ್ಚಂದ್ರ ಎನ್.ಆಚಾರ್ಯ, ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳ ವಿಶ್ವಬ್ರಾಹ್ಮಣ ದೇವಸ್ಥಾನಗಳ ಆಡಳಿತ ಮೊಕ್ತೇಸರರುಗಳು, ವಿಶ್ವಸ್ಥರು ಉಪಸ್ಥಿತರಿದ್ದರು.

ಶ್ರೀ ಮಠದ ಪುನರುತ್ಥಾನ, ಅಭಿವೃದ್ಧಿಗೆ ಅನುಪಮ ಸೇವೆ ನೀಡಿದ ಸೇವಾಕರ್ತೃಗಳಿಗೆ `ಶ್ರೀ ಸರಸ್ವತೀ ಅನುಗ್ರಹ' ಪ್ರಶಸ್ತಿ, ಶಿಲ್ಪ ಕಲೆ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕ್ರೀಯಾಶೀಲ ಸೇವೆ ನೀಡುತ್ತಿರುವ ಸಮಾಜ ಬಂಧುಗಳಿಗೆ `ಆನೆಗುಂದಿಶ್ರೀ' ಪ್ರಶಸ್ತಿ ನೀಡಲಾಯಿತು. ಎಸ್‍ಎಸ್‍ಎಲ್‍ಸಿಯಲ್ಲಿ ಶೇ.99 ಸಾಧಕಿ ಕು| ರಂಜಿತಾ, ಚಿತ್ರಕಲಾವಿದೆ ಕು| ಉಷಾರಾಣಿ ದಾವಣಗೆರೆ, ನೋಟರಿ, ಕೆ.ಎಂ.ಗಂಗಾಧರ ಆಚಾರ್ಯ ಕೊಂಡೆವೂರು, ನ್ಯಾಯವಾದಿ ಕಟಪಾಡಿ ಸುಂದರಆಚಾರ್ಯ, ಲಾವಣ್ಯ ದೇವಿಕೆ, ಸುಬ್ರಾಯ ಆಚಾರ್ಯ ಇನ್ನಂಜೆ, ಇನ್ನಾನಾರಾಯಣಆಚಾರ್ಯ ಅವರನ್ನು ಅಭಿನಂದಿಸಲಾಯಿತು.

ಕಟಪಾಡಿ ವೇಣುಗಿರಿ ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀಪೀಠ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಸ್ವಾಗತಿಸಿದರು. ಪಶುಪತಿ ಉಳ್ಳಾಲ್, ಸುರೇಶ ಆಚಾರ್ಯ ನಿಟ್ಟೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕಾಡಬೆಟ್ಟು ನಾಗರಾಜ ಆಚಾರ್ಯ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here