ಮಂಗಳೂರು: ಕರ್ನಾಟಕ ಕರಾವಳಿ ಮೀನುಗಾರಿಕೆ ಕಾಯ್ದೆ ಅನ್ವಯ ಕರ್ನಾಟಕದ ಕರಾವಳಿಯಲ್ಲಿ ಯಾವುದೇ ಬಲೆಗಳನ್ನು/ ಸಾಧನಗಳನ್ನು ಉಪಯೋಗಿಸುವ ಎಲ್ಲ ಯಾಂತೀಕೃತ ದೋಣಿಗಳು ಹಾಗೂ ೧೦ ಅಶ್ವಶಕ್ತಿ ಸಾಮಾರ್ಥ್ಯಕ್ಕಿಂತ ಮೇಲ್ಪಟ್ಟ ಇನ್ ಬೋರ್ಡ್ ಅಥವಾ ಔಟ್ ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರಾದಾಯಿಕ ದೋಣಿಗಳ ಮೀನುಗಾರಿಕೆ ಚಟುವಟಿಕೆಯನ್ನು ಜೂ.೧ರಿಂದ ಜು.೩೧ರವರೆಗೆ ಒಟ್ಟು ೬೧ ದಿನ ನಿಷೇಧ ಹೇರಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.