Friday 9th, May 2025
canara news

ಉದಯ ಶೆಟ್ಟಿ ಕಾಂತಾವರ ಮತ್ತು ಉದಯ ಸಾಲ್ಯಾನ್ ನಿರ್ಮಿತ `ಏಸ' ಚಲನಚಿತ್ರ ಮೇ.26 ಕರಾವಳಿಯಾದ್ಯಂತ ತೆರೆಗೆ

Published On : 24 May 2017   |  Reported By : Ronida Mumbai


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಮೇ.24: ಯು2 ಸಿನಿಮಾ ಟಾಕೀಸ್ ಲಾಂಛನದಲ್ಲಿ ತಯಾರಾದ ಉದಯ ಶೆಟ್ಟಿ ಕಾಂತಾವರ ಮತ್ತು ಉದಯ ಸಾಲ್ಯಾನ್ ಅಜ್ಜಾಡಿ ನಿರ್ಮಿಸಿರುವ ಎಂ.ಎನ್.ಜಯಂತ್ ಚಿತ್ರಕತೆ ನಿರ್ದೇಶನದ ಶೋಭರಾಜ್ ಪಾವೂರು ಕತೆ, ಸಂಭಾಷಣೆ ಬರೆದಿರುವ `ಏಸ' ತುಳು ಚಲನಚಿÅ ಮೇ 26ರಂದು ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ.

ಮಂಗಳೂರಿನಲ್ಲಿ ಜ್ಯೋತಿ, ಬಿಗ್‍ಸಿನಿಮಾಸ್, ಪಿವಿಆರ್, ಸಿನಿಪೆÇಲಿಸ್, ಉಡುಪಿಯಲ್ಲಿ ಕಲ್ಪನ, ಸುರತ್ಕಲ್‍ನಲ್ಲಿ ನಟರಾಜ್, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಅರುಣಾ, ಸುಳ್ಯದಲ್ಲಿ ಸಂತೋಷ್ ಮಣಿಪಾಲದಲ್ಲಿ ಐನಾಕ್ಸ್, ಮೂಡಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕಾ ಚಿತ್ರಮಂದಿರಗಳಲ್ಲಿ ಸಿನಿಮಾ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ.

ಬಹುನಿರೀಕ್ಷಿತ ತುಳು ಚಿತ್ರ `ಏಸ' ಇದೇ ತಿಂಗಳ 26ಕ್ಕೆ ಬಿಡುಗಡೆಯಾಗಲು ಸರ್ವಸಿದ್ಧತೆಯೂ ಪೂರ್ಣಗೊಂಡಿದೆ. ಸೆನ್ಸಾರ್ ಮಂಡಳಿಯು ಸರ್ಟಿಫಿಕೇಟ್ ನೀಡಿದ್ದಲ್ಲದೆ ಚಿತ್ರದ ಯಾವ ದೃಶ್ಯಕ್ಕೂ ಕತ್ತರಿ ಪ್ರಯೋಗ ಮಾಡದೇ ಇರುವುದರಿಂದ ಖುಷಿಯಾಗಿದೆ ಚಿತ್ರತಂಡಕ್ಕೆ ಯಕ್ಷಗಾನ ಕಲಾವಿದನೊಬ್ಬನ ಬದುಕಿನ ಕಥಾನಕ ಚಿತ್ರದಲ್ಲಿದ್ದು ಚಿತ್ರದಲ್ಲಿ ತುಳುನಾಡಿನ ಖ್ಯಾತ ಕಲಾವಿದರು ಬಣ್ಣ ಹಚ್ಚಿದ್ದಾರೆ. ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್ ಹಾಸ್ಯ ದಿಗ್ಗಜರು ಜೊತೆಯಾಗಿ ನಟಿಸಿದ್ದು ಚಿತ್ರದಲ್ಲಿ ತುಳುವಿನ ಖ್ಯಾತ ಕಲಾವಿದರ ದಂಡೇ ಇರಲಿದೆ.

ಚಿತ್ರಕ್ಕೆ ಕಥೆ ಬರೆದು ಸಂಭಾಷಣೆಯ ಜವಾಬ್ದಾರಿಯನ್ನು ಶೋಭರಾಜ್ ಪಾವೂರು ನಿಭಾಯಿಸಿದ್ದು, ಚಿತ್ರಕಥೆಯ ಜೊತೆ ನಿರ್ದೇಶಕರಾಗಿ ಕನ್ನಡ ಕಿರುತೆರೆಯ ಮಂದಿಗೆ ಚಿರಪರಿಚಿತರಾಗಿರುವ ಎಂ.ಎನ್ ಜಯಂತ್ ದುಡಿದಿದ್ದಾರೆ. ಚಿತ್ರದ ಎಡಿಟಿಂಗ್ ಕೆ. ಪ್ರದೀಪ್ ಕೆಜಿಎಫ್ ನಿರ್ವಹಿಸಿದ್ದಾರೆ. ಇನ್ನು ಚಿತ್ರಕ್ಕೆ ಖ್ಯಾತ ಕೆಮರಾಮ್ಯಾನ್ ಮೋಹನ್ ಲೋಗನಾಥನ್ ಕೆಮರಾ ಹಿಡಿದಿದ್ದು, ಮಂಗಳೂರು, ಉಡುಪಿ ಮಾತ್ರವಲ್ಲದೆ ಹೊರಜಿಲ್ಲೆಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಗುರು ಮತ್ತು ಗುರು ಸಂಗೀತ ನೀಡಿದ್ದು, ಖ್ಯಾತ ಹಿನ್ನೆಲೆ ಗಾಯಕರಾದ ವಿಜಯ ಪ್ರಕಾಶ್, ಸಂತೋಷ್ ವೆಂಕಿ, ಸುಪ್ರಿಯಾ ಜೋಷಿ, ಸಂಗೀತಾ ಬಾಲಚಂದ್ರ, ನಿತಿನ್ ರಾಜ್ ಜೊತೆ ಭೋಜರಾಜ್ ವಾಮಂಜೂರು ಹಾಡಿರುವುದು ವಿಶೇಷವಾಗಿದೆ.

ಚಿತ್ರವನ್ನು ಉದಯ ಶೆಟ್ಟಿ ಕಾಂತಾವರ ಮತ್ತು ಉದಯ ಸಾಲ್ಯಾನ್ ನಿರ್ಮಿಸಿದ್ದು ಚಿತ್ರ ಸೊಗಸಾಗಿ ಮೂಡಿಬಂದಿದೆ. ತುಳು ಚಿತ್ರಪ್ರೇಮಿಗಳನ್ನು ರಂಜಿಸಲು ಏನು ಅಗತ್ಯವೋ ಅದೆಲ್ಲವನ್ನೂ ಚಿತ್ರವು ಒಳಗೊಂಡಿದ್ದು ಖಂಡಿತವಾಗಿಯೂ ಜನರ ನಿರೀಕ್ಷೆಯನ್ನು ಹುಸಿಗೊಳಿಸಲಾರದು ಅಂತಾರೆ ಶೋಭರಾಜ್. ದಕ್ಷಿಣ ಕನ್ನಡ, ಉಡುಪಿ, ಬಂಟ್ವಾಳ, ಮೂಡಬಿದ್ರೆ ಮತ್ತಿತರ ಕಡೆಗಳಲ್ಲಿ ಚಿತ್ರವು ಬಿಡುಗಡೆಗೊಳ್ಳಲಿದ್ದು ಚಿತ್ರದಲ್ಲಿ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ, ರಾಹುಲ್, ರಾಧಿಕಾ, ಸತೀಶ್ ಬಂದಲೆ, ರಂಜನ್ ಬೋಳೂರು, ಸುನಿಲ್ ನೆಲ್ಲಿಗುಡ್ಡೆ, ಭಾರ್ಗವಿ ನಾರಾಯಣ್, ದತ್ತಾತ್ರೇಯ ಕುರಹಟ್ಟಿ, ಭವ್ಯಶ್ರೀ ರೈ, ನಮಿತಾ ಕೂಳೂರು, ರೂಪಾ ವರ್ಕಾಡಿ, ಶಾಂತಿ ಶೆಣೈ ಮತ್ತಿತರರು ನಟಿಸಿದ್ದಾರೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here