Friday 19th, April 2024
canara news

ಮೇ.28: ಬಿಲ್ಲವರ ಅಸೋಸಿಯೇಶನ್ ಸಾಂಗ್ಲಿ (ಕೋಲಾಪುರ)

Published On : 25 May 2017   |  Reported By : Ronida Mumbai


ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲಧ್ಯಕ್ಷ ಜಯ ಸಿ.ಸುವರ್ಣ ಅವರಿಂದ ಉದ್ಘಾಟನೆ

ಮುಂಬಯಿ, ಮೇ.25: ನೂತನವಾಗಿ ಅಸ್ತಿತ್ವಕ್ಕೆ ತರಲಾದ ಬಿಲ್ಲವರ ಅಸೋಸಿಯೇಶನ್ ಸಾಂಗ್ಲಿ (ಕೋಲಾಪುರ) ಉದ್ಘಾಟನೆಯು ಇದೇ ಮೇ.28ನೇ ಆದಿತ್ಯವಾರ ಪೂರ್ವಾಹ್ನ 11.00 ಗಂಟೆಗೆ ಉದ್ಘಾಟಿಸಲ್ಪಡುವುದು ಎಂದು ಅಸೋಸಿಯೇಶನ್‍ನ ಪದಾಧಿಕಾರಿಗಳು ತಿಳಿಸಿದ್ದಾರೆ.

Jaya C Suvarna

V.Sunil Kumar

 Adv.S B Amin

 Shridhar Poojari

Umanath Kotyan

Chandrashekar Poojary

 CA. Ashwajit Hejmady.

ಮಹಾರಾಷ್ಟ್ರ ರಾಜ್ಯದ ಕೋಲಾಪುರ ಜಿಲ್ಲೆಯ ಸಾಂಗ್ಲಿ ನಗರದ ಶಿಂದೆಮಾಲ ಇಲ್ಲಿನ ದುರ್ಗಾದಯಾ ಕಾಂಪ್ಲೆಕ್ಸ್‍ನಲ್ಲಿ ಅಂದು ಪೂರ್ವಾಹ್ನ ಅಸೋಸಿಯೇಶನ್‍ನ ಉದ್ಘಾಟನೆ ನಡೆಯಲಿದೆ. ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ದಿ.ಭಾರತ್ ಬ್ಯಾಂಕ್ ಕೋ.ಅಪರೇಟಿವ್ (ಮುಂಬಯಿ) ಲಿಮಿಟೆಡ್ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಉದ್ಘಾಟಿಸಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಬಿಲ್ಲವರ ಅಸೋಸಿಯೇಶನ್ ಸಾಂಗ್ಲಿ ಅಧ್ಯಕ್ಷ ನಾರಾಯಣ ಪೂಜಾರಿ ಉಪಸ್ಥಿತಿಯಲ್ಲಿ ಜರಗುವ ಭವ್ಯ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಭಾಗವಹಿಸಲಿದ್ದಾರೆ.

ಲೋಣಾವಳಾ ನಗರ ಪರಿಷತ್‍ನ ಉಪಾಧ್ಯಕ್ಷ ನಿಟ್ಟೆ ನಡಿಮನೆ ಶ್ರೀಧರ್ ಎಸ್.ಪೂಜಾರಿ, ದೆಹಲಿಯಲ್ಲಿನ ಐಎಎಸ್ ಅಧಿಕಾರಿ ಪ್ರಸನ್ನ ಕುಮಾರ್, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟ್ಯಾನ್, ಭಾರತ್ ಬ್ಯಾಂಕ್‍ನ ನಿರ್ದೇಶಕರುಗಳಾದ ಚಂದ್ರಶೇಖರ ಎಸ್.ಪೂಜಾರಿ, ನ್ಯಾಯವಾದಿ ಎಸ್.ಬಿ ಅವಿೂನ್, ಮುಂಬಯಿ ಅಲ್ಲಿನ ಹೆಸರಾಂತ ಲೆಕ್ಕಪರಿಶೋಧಕ ಸಿಎ| ಅಶ್ವಜಿತ್ ಹೆಜ್ಮಾಡಿ, ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀಧರ ಪೂಜಾರಿ ಕಾರ್ಕಳ, ಕಲ್ವಾದ ಹೊಟೇಲು ಉದ್ಯಮಿ ಹರೀಶ್ ಡಿ.ಸಾಲ್ಯಾನ್ ಮತ್ತಿತರರು ಗೌರವ ಅತಿಥಿüಗಳಾಗಿ ಭಾಗವಹಿಸಲಿದ್ದಾರೆ ಎಂದು ಅಸೋಸಿಯೇಶನ್‍ನ ಉಪಾಧ್ಯಕ್ಷ ಸುಧಾಕರ ಪೂಜಾರಿ ತಿಳಿಸಿದ್ದಾರೆ.

ಸಂಜೆ 5.00 ಗಂಟೆಗೆ ಡೆಕ್ಕನ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಶನ್ ಸಭಾಗೃಹ ಆರ್‍ಟಿಒ ಸಮೀಪ, ಮಾಧವ ನಗರ್, ಸಾಂಗ್ಲಿ ಇಲ್ಲಿ ಭವ್ಯ ಸಮಾರಂಭ ನಡೆಸಲಾಗುತ್ತಿದ್ದು ಕಾರ್ಯಕ್ರಮದಲ್ಲಿ ಸಾಂಗ್ಲಿ ಪರಿಸರದ ತುಳು-ಕನ್ನಡಿಗ, ಮರಾಠಿ ಸಂಸ್ಥೆಗಳ ಮುಖ್ಯಸ್ಥರು, ಸಾಧಕರು ಹಾಗೂ ದಾನಿಗಳನ್ನು ಅತಿಥಿüಗಳು ಸನ್ಮಾನಿಸಲಿದ್ದಾರೆ. ಇದೇ ವೇದಿಕೆಯಲ್ಲಿ ಅಪರಾಹ್ನ ಅಸೋಸಿಯೇಶನ್ ಸದಸ್ಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಶ್ರೀ ಭ್ರಾಮರಿ ಯಕ್ಷನೃತ್ಯ ಕಲಾ ನಿಲಯ ಟ್ರಸ್ಟ್ ಮುಂಬಯಿ `ಮಹಿಷ ಮರ್ಧಿನಿ-ಶಾಂಭವಿ ವಿಜಯ' ಯಕ್ಷಗಾನ ಬಯಲಾಟ ಮತ್ತು ವಸಯಿ ಕರ್ನಾಟಕ ಸಂಘದ ಶ್ರೀ ಕಟೀಲು ಯಕ್ಷ ಕಲಾ ವೇದಿಕೆಯ ಬಾಲ ಕಲಾವಿದರು ತುಳುನಾಡ ನೃತ್ಯ ವೈಭವ ಹಾಗೂ ಮಾಸ್ಟರ್ ಪ್ರಾಣೇಶ್ ಅವರು ರಿದಮಿಕ್ ಯೋಗವನ್ನೂ ಸಾದರ ಪಡಿಸಲಿದ್ದಾರೆ ಎಂದು ಅಸೋಸಿಯೇಶನ್‍ನ ಕೋಶಾಧಿಕಾರಿ ಧೀರಜ್ ಪೂಜಾರಿ ಹಾಗೂ ಮಹಿಳಾ ವಿಭಾಗಧ್ಯಕ್ಷೆ ಶಕುಂತಲಾ ಎಸ್.ಪೂಜಾರಿ ತಿಳಿಸಿದ್ದಾರೆ. ನಾಡಿನ ಸಮಸ್ತ ಬಿಲ್ಲವರು, ತುಳುಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾರಂಭವನ್ನು ಯಶಸ್ವಿ ಗೊಳಿಸುವಂತೆ ಅಸೋಸಿಯೇಶನ್‍ನ ಕಾರ್ಯದರ್ಶಿ ದೇವಿಕಿರಣ್ ಪೂಜಾರಿ ಈ ಮೂಲಕ ವಿನಂತಿಸಿದ್ದಾರೆ. (ಚಿತ್ರ / ವರದಿ : ರೊನಿಡಾ ಮುಂಬಯಿ)

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here