Friday 19th, July 2024
canara news

ಖಾರ್ ಜವಾಹರ್ ನಗರ ಪಹೇಲ್ವಾನ್ ಚಾಳ್‍ನ ಶ್ರೀ ಶನಿಮಹಾತ್ಮ ಸಮಿತಿಯಿಂದ ಜರುಗಿದ ನವಗ್ರಹಶ್ರೇಷ್ಠ ಶ್ರೀ ಶನೈೀಶ್ವರ ಜನ್ಮೋತ್ಸವ-ಶನೀಶ್ವರ ಗ್ರಂಥಪಾರಾಯಣ

Published On : 27 May 2017   |  Reported By : Rons Bantwal


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.27: ತುಳು ಕನ್ನಡಿಗರ ಸಂಚಾಲಕತ್ವದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಸಂಚಾಲಕತ್ವದಿಂದ ಖಾರ್ ಪೂರ್ವದ ಸಾಯಿಬಾಬಾ ರಸ್ತೆಯ ಜವಾಹಾರ್ ನಗರ್‍ನ ಪಹೇಲ್ವಾನ್ ಚಾಳ್‍ನಲ್ಲಿ ಕಳೆದ ಸುಮಾರು ಐದು ದಶಕಗಳಿಂದ ಸೇವಾ ನಿರತ ಪ್ರಸ್ತುತ ಸ್ಥಾನೀಯ ಸಾಯಿಧಾಮ್ ಬಿಲ್ಡಿಂಗ್‍ನಲ್ಲಿ ಪ್ರತಿಷ್ಠಾಪಿತ ಶ್ರೀ ಶನಿಮಹಾತ್ಮ ಮಂದಿರದಲ್ಲಿ ಇಂದಿಲ್ಲಿ ಗುರುವಾರ ವಿಜೃಂಭನೆಯಿಂದ ನವಗ್ರಹಶ್ರೇಷ ನವಗ್ರಹಶ್ರೇಷ್ಠ ಶ್ರೀ ಶನೈೀಶ್ವರ ಜನ್ಮೋತ್ಸವ ಹಾಗೂ ಶನೀಶ್ವರ ಗ್ರಂಥಪಾರಾಯಣ ನೆರವೇರಿಸಲ್ಪಟ್ಟಿತು.

ಆ ಪ್ರಯುಕ್ತ ಅಪರಾಹ್ನ ಕಳಶ ಮುಹೂರ್ತ, ಭಜನೆ, ಸದ್ಭಕ್ತರ ಪರವಾಗಿ ಸಾಮೂಹಿಕ ಶನೀಶ್ವರ ಗ್ರಂಥ ಪಾರಾಯಣ, ಮಂಗಳಾರತಿಗೈದು ನೆರೆದ ಭಕ್ತಾಭಿಮಾನಿಗಳಿಗೆ ತೀರ್ಥ ಪ್ರಸಾದ ವಿತರಣೆ ನಡೆಸಲಾಯಿತು. ಆಅರ್ಚಕರುಗಳಾದ ಕೃಷ್ಣ ಕುಲಾಲ್ ಮತ್ತು ಗಿರೀಶ್ ಪೂಜಾರಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಕರುಣಾಕರ ಶೆಟ್ಟಿ ಮತ್ತು ರೇವತಿ ಕರುಣಾಕರ್ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು.

ಈ ಗ್ರಂಥಪಾರಾಯಣ ಪುಣ್ಯಾಧಿ ಕಾರ್ಯಕ್ರಮಕ್ಕೆ ಸೇವಾ ಸಮಿತಿ ಉಪಾಧ್ಯಕ್ಷ ದೇವೆಂದ್ರ ವಿ.ಬಂಗೇರಾ ದೀಪ ಬೆಳಗಿಸಿ ಚಾಲನೆಯನ್ನೀಡಿದರು. ಈ ಸಂದರ್ಭದಲ್ಲಿ ಗೌ| ಪ್ರ| ಕಾರ್ಯದರ್ಶಿ ಯೋಗೇಶ್ ಕೆ.ಹೆಜ್ಮಾಡಿ, ಜೊತೆ ಕಾರ್ಯದರ್ಶಿಗಳಾದ ಜಯರಾಮ ಎನ್.ಶೆಟ್ಟಿ ಮತ್ತು ರಮೇಶ್ ಎನ್.ಪೂಜಾರಿ, ಜೊತೆ ಕೋಶಾಧಿಕಾರಿ ವಿನೋದ್ ವೈ.ಹೆಜ್ಮಾಡಿ, ಮಹಿಳಾ ಮಂಡಳಿಯ ಮುಖ್ಯಸ್ಥೆಯರುಗಳಾದ ಕೇಸರಿ ಬಿ.ಅಮೀನ್ ಮತ್ತು ಶೋಭಾ ವಿ.ಕೋಟ್ಯನ್, ಅಶೋಕ್ ಶೆಟ್ಟಿ, ಸರಸ್ವತಿ ಬಿ.ಪೂಜಾರಿ, ವಾನನ ಎಸ್.ಸಾಲ್ಯಾನ್, ವಿಮಲಾ ಆರ್.ಕೋಟ್ಯಾನ್, ಮೋಹಿನಿ ಶೆಟ್ಟಿ, ಅನುಸೂಯ ಜಿ.ಸುವರ್ಣ, ಸುಲೋಚನಾ ಬಂಗೇರ, ಲಕ್ಷಿ ್ಮೀ ಟಿ.ಶೆಟ್ಟಿ, ಮೋಹಿನಿ ಸಾಲ್ಯಾನ್, ಉಷಾ ಜತ್ತನ್ ಸೇರಿದಂತೆ ಹಾಗೂ ಪದಾಧಿಕಾರಿಗಳು, ಮಹಿಳಾ ಮಂಡಳಿ ಸದಸ್ಯೆಯರು, ಯುವ ವಿಭಾಗ ಸೇರಿದಂತೆ ವಿವಿಧ ಉಪಸಮಿತಿಗಳ ಸದಸ್ಯರು, ಮಹಾನಗರದಲ್ಲಿನ ಬಹುಸಂಖ್ಯೆಯ ಭಕ್ತರು ಪಾಲ್ಗೊಂಡು ಶ್ರೀ ಶನಿದೇವರ ಕೃಪೆಗೆ ಪಾತ್ರರಾದರು.

 

 

 

 

 
More News

ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
 ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ

Comment Here