ಮಂಗಳೂರು : ಮಂಗಳೂರಿನ ಅಳಿವೆ ಬಾಗಿಲು ಬಳಿ ಬುಧವಾರ ಸಂಜೆ ಮೀನುಗಾರಿಕೆ ನಡೆಸಿ ವಾಪಸ್ಸಾಗುತ್ತಿದ್ದ ವೇಳೆ ಹಡಗು ಮುಳುಗಡೆಯಾಗಿದೆ. ಲೋಕನಾಥ್ ಬೋಳಾರ್ ಅವರಿಗೆ ಸೇರಿದ ಹಡಗು ಬುಧವಾರ ಅಳಿವೆ ಬಾಗಿಲಿನಲ್ಲಿ ಮುಳುಗಡೆಯಾಗಿದೆ. ಹಡಗಿನಲ್ಲಿದ್ದ 10 ಮಂದಿ ಮೀನುಗಾರರನ್ನು ಇನ್ನೊಂದು ಬೋಟ್ ನವರು ರಕ್ಷಿಸಿದ್ದಾರೆ.
ಬೋಟ್ ಮುಳುಗಡೆಯಿಂದಾಗಿ ಸುಮಾರು 70 ಲಕ್ಷ ರೂಪಾಯಿ ನಷ್ಟ ಅಂದಾಜಿಸಲಾಗಿದ್ದು ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.