Friday 9th, May 2025
canara news

ಖುರೇಶಿ ಪ್ರಕರಣ; ಮತ್ತೆ ಸಿಐಡಿಯಿಂದ ವಿಚಾರಣೆ

Published On : 28 May 2017   |  Reported By : canaranews network


ಮಂಗಳೂರು: ಕೊಲೆ ಯತ್ನ ಪ್ರಕರಣದ ಆರೋಪಿ ಅಹ್ಮದ್ ಖುರೇಶಿ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿದ್ದಾರೆಂಬ ಆರೋಪದ ತನಿಖೆ ನಡೆಸುತ್ತಿರುವ ಸಿಐಡಿ ತಂಡವು ಮೇ ೨೫ ಮತ್ತು ೨೬ರಂದು ಮತ್ತೆ ಮಂಗಳೂರಿಗೆ ಆಗಮಿಸಿ ವಿಚಾರಣೆ ನಡೆಸಿದೆ. ಮೇ ೨೫ರಂದು ಬೆಳಿಗ್ಗೆ ಬಂದ ತಂಡ ಖುರೇಷಿ ಸೇರಿದಂತೆ ಸಾಕ್ಷಿಗಳ ವಿಚಾರಣೆ ನಡೆಸಿದೆ.

ಬಳಿಕ ಖುರೇಷಿ ನೀಡಿದ ಮಾಹಿತಿ ಮೇಲೆ ಕೆಲವು ಸ್ಥಳದ ಪರಿಶೀಲನೆ ನಡೆಸಿದೆ. ಈ ಸಂದರ್ಭದಲ್ಲಿ ಖುರೇಷಿಯು ಪೊಲೀಸರು ತನ್ನನ್ನು ಗುಪ್ತವಾಗಿ ಇಟ್ಟಿದ್ದ ಸೋಮೇಶ್ವರ ಬೀಚ್ ಬಳಿಯ ಮನೆ ಹಾಗೂ ನಂತೂರಿನ ಪ್ಲಾಟ್ ವನ್ನು ಅಧಿಕಾರಿಗಳಿಗೆ ತೋರಿಸಿದ್ದಾರೆ. ಸಿಐಡಿ ಅಧಿಕಾರಿಗಳು ಸ್ಥಳಗಳನ್ನು ವಿಡಿಯೋ ಮೂಲಕ ದಾಖಲೀಕರಣ ಮಾಡಿದ್ದಾರೆ ಎಂದು ಖುರೇಷಿ ಪರ ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ತಿಳಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here