Saturday 20th, July 2024
canara news

ಬಂಟ್ವಾಳದಲ್ಲಿ ಜೂನ್ 2ರ ವರೆಗೆ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ

Published On : 28 May 2017   |  Reported By : canaranews network


ಮಂಗಳೂರು: ದ.ಕ.ಜಿಲ್ಲೆಯ ಕಲ್ಲಡ್ಕದಲ್ಲಿ ಅಹಿತಕರ ಘಟನೆ ನಡೆಯಬಹುದು ಎಂದು ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ, ಬಂಟ್ವಾಳ ತಾಲೂಕಿನಾದ್ಯಂತ ಮೇ 27ರ (ಶನಿವಾರ) ಬೆಳಗ್ಗೆ 9 ಗಂಟೆಯಿಂದ ಜೂನ್ 2ರ ವರೆಗೆ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಮಂಗಳೂರು ಉಪವಿಭಾಗ ದಂಡಾಧಿಕಾರಿ ಹಾಗೂ ಸಹಾಯಕ ಆಯುಕ್ತ ಎ.ಸಿ.ರೇಣುಕಾ ಪ್ರಸಾದ್ ಆದೇಶ ಹೊರಡಿಸಿದ್ದಾರೆ.

ಯುವಕರಿಬ್ಬರ ಮೇಲೆ ಚೂರಿ ಇರಿತ ಪ್ರಕರಣ ನಡೆದ ಸಂಬಂಧ ಶುಕ್ರವಾರ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ 'ಕಲ್ಲಡ್ಕ ಬಂದ್' ಸಂದೇಶದ ಪರಿಣಾಮವಾಗಿ ಶನಿವಾರ ಕಲ್ಲಡ್ಕ ಭಾಗಶಃ ಬಂದ್ ಆಗಿತ್ತು.ಕಲ್ಲಡ್ಕ ಪೇಟೆ ಮತ್ತು ಸುತ್ತಮುತ್ತ ಅಂಗಡಿಗಳು ಬೆಳಗ್ಗೆಯಿಂದಲೇ ಮುಚ್ಚಿದ್ದವು. ಈ ಮಧ್ಯೆ ಬಂದ್‌ ಗೆ ಪರ, ವಿರೋಧ ವ್ಯಕ್ತವಾಗಿದ್ದರಿಂದ ಕಲ್ಲಡ್ಕದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿ ಇದ್ದರೂ ಬೂದಿ ಮುಚ್ಚಿದ ಕೆಂಡದಂಥ ಸನ್ನಿವೇಶ ಇದೆ.
More News

ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
 ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ

Comment Here