Thursday 25th, April 2024
canara news

ಕೋಲಾಪುರ ಜಿಲ್ಲೆಯಲ್ಲಿ ಬಿಲ್ಲವರ ಅಸೋಸಿಯೇಶನ್ ಸಾಂಗ್ಲಿ ಉದ್ಘಾಟನೆ

Published On : 29 May 2017   |  Reported By : Rons Bantwal


ಸಂಸ್ಥೆಗಳು ಸಾಂಘಿಕತೆಯನ್ನು ರೂಪಿಸುತ್ತವೆ : ಜಯ ಸಿ.ಸುವರ್ಣ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಕೋಲಾಪುರ (ಸಾಂಗ್ಲಿ), ಮೇ.28: ಇಲ್ಲಿನ ಬಿಲ್ಲವ ಸಮುದಾಯದ ಧುರೀಣರು ನೂತನವಾಗಿ ರಚಿಸಿದ ಬಿಲ್ಲವರ ಅಸೋಸಿಯೇಶನ್ ಸಾಂಗ್ಲಿ ಸಂಸ್ಥೆಗೆ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ದಿ. ಭಾರತ್ ಬ್ಯಾಂಕ್ ಕೋ.ಅಪರೇಟಿವ್ (ಮುಂಬಯಿ) ಲಿಮಿಟೆಡ್ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಚಾಲನೆ ನೀಡಿದರು.

ಇಂದಿಲ್ಲಿ ಭಾನುವಾರ ಬೆಳಿಗ್ಗೆ ಮಹಾರಾಷ್ಟ್ರ ರಾಜ್ಯದ ಕೋಲಾಪುರ ಜಿಲ್ಲೆಯ ಸಾಂಗ್ಲಿ ನಗರದ ಶಿಂದೆಮಾಲ ಇಲ್ಲಿನ ದುರ್ಗಾದಯಾ ಕಾಂಪ್ಲೆಕ್ಸ್‍ನಲ್ಲಿ ಅಸೋಸಿಯೇಶನ್‍ನ ಕಾರ್ಯಾಲಯವನ್ನು ರಿಬ್ಬನ್ ಬಿಡಿಸಿ ಉದ್ಘಾಟಿಸಿ, ಸಂಸ್ಥೆಯ ನಾಮಫಲಕ ಅನಾವರಣಗೈದು, ದೀಪ ಪ್ರಜ್ವಲಿಸಿ ಸಂಸ್ಥೆಗೆ ಚಾಲನೆಯನ್ನೀಡಿ ಸುವರ್ಣ ಶುಭಾರೈಸಿದರು.

ಸಂಘ-ಸಂಸ್ಥೆಗಳು ಸಾಂಘಿಕತೆಯನ್ನು ರೂಪಿಸುತ್ತವೆ. ಮನುಕುಲದ ಸಾಂಗತ್ಯ ಬದುಕಿಗೆ ಸಂಸ್ಥೆಗಳು ಅವಶ್ಯ. ಇಂತಹ ಸಂಸ್ಥೆಗಳ ಮುನ್ನಡೆ, ಬೆಳವಣಿಗೆಗೆ ಸ್ವಂತದ ಕಛೇರಿ, ಸಭಾಗೃಹಗಳು ಶಕ್ತಿಯ ಧ್ಯೋತಕವಾಗಿರುತ್ತವೆ. ಇಂದು ಹೊರನಾಡ ಕರ್ಮಭೂಮಿಯಲ್ಲಿ ಬಿಲ್ಲವರು ಸಾಂಘಿಕ ಜೀವನಕ್ಕೆ ನಾಂದಿಯಾಡಿದ್ದು ಅಭಿನಂದನೀಯ ಎಂದು ಜಯ ಸುವರ್ಣ ಅಭಿಪ್ರಾಯ ಪಟ್ಟರು.

ಈ ಶುಭಾವಸರದಲ್ಲಿ ಮುಖ್ಯ ಅತಿಥಿüಯಾಗಿ ಭಾರತ್ ಬ್ಯಾಂಕ್‍ನ ನಿರ್ದೇಶಕರುಗಳಾದ ಚಂದ್ರಶೇಖರ ಎಸ್. ಪೂಜಾರಿ (ಸಂಸ್ಥೆಯ ಸ್ಥಾಪನಾ ಮಾರ್ಗದರ್ಶಕ), ನ್ಯಾ| ಎಸ್.ಬಿ ಅವಿೂನ್, ಮುಂಬಯಿ ಅಲ್ಲಿನ ಹೆಸರಾಂತ ಲೆಕ್ಕಪರಿಶೋಧಕ ಸಿಎ| ಅಶ್ವಜಿತ್ ಹೆಜ್ಮಾಡಿ, ಹೊಟೇಲು ಉದ್ಯಮಿ ಹರೀಶ್ ಡಿ.ಸಾಲ್ಯಾನ್ ಕಲ್ವಾ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಾಜಿ ಗೌ| ಪ್ರ| ಕಾರ್ಯದರ್ಶಿ ಜ್ಯೋತಿ ಕೆ.ಸುವರ್ಣ, ಮಾಜಿ ಕೋಶಾಧಿಕಾರಿ ಎನ್.ಎಂ ಸನೀಲ್, ನಾರಾಯಣ ಸುವರ್ಣ ಕಲ್ವಾ, ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ್ ಅಲೆವೂರು, ಸಹಾಯಕ ಸಂಪಾದಕ ಹರೀಶ್ ಕೆ.ಹೆಜ್ಮಾಡಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಬಿಲ್ಲವರ ಅಸೋಸಿಯೇಶನ್ ಸಾಂಗ್ಲಿ ಅಧ್ಯಕ್ಷ ನಾರಾಯಣ ಪೂಜಾರಿ, ಉಪಾಧ್ಯಕ್ಷ ಸುಧಾಕರ ಪೂಜಾರಿ, ಗೌರವ ಕಾರ್ಯದರ್ಶಿ ದೇವಿಕಿರಣ್ ಪೂಜಾರಿ, ಗೌರವ ಕೋಶಾಧಿಕಾರಿ ಧೀರಜ್ ಪೂಜಾರಿ, ಮಹಿಳಾ ವಿಭಾಗಧ್ಯಕ್ಷೆ ಶಕುಂತಲಾ ಎಸ್.ಪೂಜಾರಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರಘುರಾಮ ಪೂಜಾರಿ, ಪ್ರವೀಣ್ ಪೂಜಾರಿ, ಶೇಖರ್ ಪೂಜಾರಿ, ನಾರಾಯಣ ಎಸ್. ಪೂಜಾರಿ, ಆನಂದ ವಿ.ಪೂಜಾರಿ, ಗಣೇಶ್ ಪೂಜಾರಿ, ಮನೋಜ್ ಪೂಜಾರಿ, ಆನಂದ ಡಿ. ಪೂಜಾರಿ, ಚಂದ್ರಾಕ್ಷಿ ಪೂಜಾರಿ, ಬಹುತೇಕ ಸದಸ್ಯರು, ಹಿತೈಷಿಗಳಾದ ಉಮೇಶ್ ಪೂಜಾರಿ ಕಲ್ವಾ, ಜಗನ್ನಾಥ್ ಅವಿೂನ್ ಉಪ್ಪಳ, ಜಯಲಕ್ಷಮೀ ಚಂದ್ರಶೇಖರ್, ಸುಶೀಲಾ ವಿ.ಪೂಜಾರಿ ಭಾಂಡೂಪ್, ರಮಾದೇವಿ ಕೆ.ಪೂಜಾರಿ ಥಾಣೆ, ಜಯಂತಿ ಶಿವರಾಮ ಕೋಟ್ಯಾನ್, ಪ್ರೇಮಾ ಆರ್.ಕೋಟ್ಯಾನ್ ಸಾಂತಕ್ರೂಜ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

ಬಿಲ್ಲವರ ಅಸೋಸಿಯೇಶನ್ ಸಾಂಗ್ಲಿ ಸೇವಾರ್ಪಣಾ ನಿಮಿತ್ತ ಅಪರಾಹ್ನ ಸ್ಥಳಿಯ ಮಾಧವ ನಗರ್ ಅಲ್ಲಿನ ಡೆಕ್ಕನ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಶನ್ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಭವ್ಯ ಸಮಾರಂಭದಲ್ಲಿ ಅಸೋಸಿಯೇಶನ್ ಸದಸ್ಯರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಶ್ರೀ ಭ್ರಾಮರಿ ಯಕ್ಷನೃತ್ಯ ಕಲಾ ನಿಲಯ ಟ್ರಸ್ಟ್ ಮುಂಬಯಿ `ಮಹಿಷ ಮರ್ಧಿನಿ-ಶಾಂಭವಿ ವಿಜಯ' ಯಕ್ಷಗಾನ ಬಯಲಾಟ ಮತ್ತು ವಸಯಿ ಕರ್ನಾಟಕ ಸಂಘದ ಶ್ರೀ ಕಟೀಲು ಯಕ್ಷ ಕಲಾ ವೇದಿಕೆಯ ಬಾಲ ಕಲಾವಿದರು ತುಳುನಾಡ ನೃತ್ಯ ವೈಭವ ಹಾಗೂ ಮಾಸ್ಟರ್ ಪ್ರಾಣೇಶ್ ಅವರು ರಿದಮಿಕ್ ಯೋಗ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಸಂಜೆ ನದೇಸಲ್ಪಟ್ಟ ಭವ್ಯ ಸಮಾರಂಭದಲ್ಲಿ ಅಸೋಸಿಯೇಶನ್‍ನನ್ನು ವಿಧ್ಯುಕ್ತವಾಗಿ ಉದ್ಘಾಟಿಸಲಾಗಿದ್ದು, ಕಾರ್ಯಕ್ರಮದಲ್ಲಿ ಸಾಂಗ್ಲಿ ಪರಿಸರದ ತುಳು-ಕನ್ನಡಿಗ, ಮರಾಠಿ ಸಂಸ್ಥೆಗಳ ಮುಖ್ಯಸ್ಥರು, ಸಾಧಕರು ಹಾಗೂ ದಾನಿಗಳನ್ನು ಅತಿಥಿüಗಳು ಸನ್ಮಾನಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here